ಮಹಾಮಾರಿ ಕೊರೋನಾಗೆ ಜಗತ್ತಿನಾದ್ಯಂತ 64,734 ಮಂದಿ ಬಲಿ, 12 ಲಕ್ಷ ದಾಟಿದ ಸೋಂಕಿತರ ಸಂಖ್ಯೆ!

ಮಹಾಮಾರಿ ಕೊರೋನಾ ವೈರಸ್ ವಿಶ್ವವೇ ನಡುಗಿ ಹೋಗಿದೆ. ಅದಾಗಲೇ 64,734 ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 12 ಲಕ್ಷ ದಾಟಿದೆ.
ಕೊರೋನಾ ವೈರಸ್
ಕೊರೋನಾ ವೈರಸ್
Updated on: 

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ವಿಶ್ವವೇ ನಡುಗಿ ಹೋಗಿದೆ. ಅದಾಗಲೇ 64,734 ಮಂದಿ ಬಲಿಯಾಗಿದ್ದು ಸೋಂಕಿತರ ಸಂಖ್ಯೆ 12 ಲಕ್ಷ ದಾಟಿದೆ. 

ಇಟಲಿ, ಸ್ಪೇನ್ ಬಳಿಕ ಇದೀಗ ಅಮೆರಿಕದಲ್ಲಿ ಕೊರೋನಾ ಮಹಾಘಾತಕ್ಕೆ ತತ್ತರಿಸಿದೆ. ಅಮೆರಿಕ ಒಂದರಲ್ಲೇ 8,454 ಮಂದಿ ಬಲಿಯಾಗಿದ್ದಾರೆ. ಇಟಲಿಯಲ್ಲಿ 15,362, ಸ್ಪೇನ್ ನಲ್ಲಿ 11,947 ಮತ್ತು ಫ್ರಾನ್ಸ್ 7,560 ಮಂದಿ ಬಲಿಯಾಗಿದ್ದಾರೆ. 

ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಮುಂದುವರೆದಿದ್ದು, ಕೇವಲ 12 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ ಬರೊಬ್ಬರಿ 302 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಭಾರತದಲ್ಲಿ ಸೋಂಕಿತರ ಸಂಖ್ಯೆ 3374ಕ್ಕೆ ಏರಿಕೆಯಾಗಿದೆ. ಅಂತೆಯೇ 77 ಮಂದಿ ಸಾವನ್ನಪ್ಪಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com