ಫಿಲಿಪ್ಪೀನ್ಸ್: ಕೊರೋನಾ ಮಹಾಮಾರಿಗೆ 23 ದಿನದ ಹಸುಗೂಸು ಬಲಿ

ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾದಲ್ಲಿ ಏಪ್ರಿಲ್ 5 ರಂದು 23 ದಿನದ ಹಸುಳೆ ಸಾವನ್ನಪ್ಪಿತ್ತು, ಆದರೆ ಕಾರಣ ತಿಳಿದು ಬಂದಿರಲಿಲ್ಲ, ಗುರುವಾರ ಮಗುವಿನ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಇದ್ದದ್ದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮನಿಲಾ: ಕೊರೋನಾ ಸೋಂಕಿನಿಂದ ಬಳಲುತ್ತಿದ್ದ 23 ದಿನದ ಮಗು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಫಿಲಿಪ್ಪೀನ್ಸ್ ನ ದಕ್ಷಿಣ ಮನಿಲಾದ 70 ಕಿಮೀ ದೂರದಲ್ಲಿರುವ ಲಿಪಾದಲ್ಲಿ ಏಪ್ರಿಲ್ 5 ರಂದು 23 ದಿನದ ಹಸುಳೆ ಸಾವನ್ನಪ್ಪಿತ್ತು, ಆದರೆ ಕಾರಣ ತಿಳಿದು ಬಂದಿರಲಿಲ್ಲ, ಗುರುವಾರ ಮಗುವಿನ ಪರೀಕ್ಷಾ ವರದಿ ಬಂದಿದ್ದು, ಕೊರೋನಾ ಪಾಸಿಟಿವ್ ಇದ್ದದ್ದು ತಿಳಿದು ಬಂದಿದೆ.

ಬುಧವಾರ ಬ್ರೆಜಿಲ್ ನಲ್ಲಿ ಅವಧಿ ಪೂರ್ವವಾಗಿ ಜನಿಸಿದ್ದ 4 ದಿನದ ಮಗು ಕೂಡ ಶ್ವಾಸ ಕೋಶ ವೈಫಲ್ಯದಿಂದ ಮೃತ ಪಟ್ಟಿತ್ತು. ಇದೇ ವೇಳೆ ಬೊಲಿವಿಯಾದಲ್ಲಿ 5 ತಿಂಗಳ ಮಗು ಕೊರೋನಾ ದಿಂದ ಸಾವನ್ನಪ್ಪಿತ್ತು. ಪಿಲಿಪ್ಪೀನ್ಸ್ ನ 23 ದಿನದ ಮಗು ಸಾವನ್ನಪ್ಪಿರುವುದು ಕೋರೋನಾದಿಂದಾಗಿ ಎಂದು ಆರೋಗ್ಯ ಇಲಾಖೆ ಸ್ಫಷ್ಟ ಪಡಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com