ಚೀನಾ ಅಭಿವೃದ್ಧಿ ಶೀಲ ರಾಷ್ಟ್ರವಾದರೆ, ಅಮೆರಿಕಾವನ್ನು ಹಾಗೆಯೇ ಪರಿಗಣಿಸಿ: ಡೊನಾಲ್ಡ್ ಟ್ರಂಪ್
ಚೀನಾ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಪರಿಗಣಿಸುವುದಾದರೆ ಅಮೆರಿಕವನ್ನು ಕೂಡ ಹಾಗೆಯೇ ಎಂದು ಭಾವಿಸಿ, ಚೀನಾ ದೇಶ ಅಮೆರಿಕದಿಂದ ಲಾಭ ಪಡೆದುಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.

ವಾಷಿಂಗ್ಟನ್: ಚೀನಾ ದೇಶವನ್ನು ಅಭಿವೃದ್ಧಿಶೀಲ ರಾಷ್ಟ್ರ ಎಂದು ಪರಿಗಣಿಸುವುದಾದರೆ ಅಮೆರಿಕವನ್ನು ಕೂಡ ಹಾಗೆಯೇ ಎಂದು ಭಾವಿಸಿ, ಚೀನಾ ದೇಶ ಅಮೆರಿಕದಿಂದ ಲಾಭ ಪಡೆದುಕೊಂಡಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದಾರೆ.
ಚೀನಾ ದೇಶ ಅಮೆರಿಕ ಸೇರಿದಂತೆ ಬೇರೆ ದೇಶಗಳಿಂದ ಲಾಭ ಪಡೆದುಕೊಂಡಿದೆ. ಅದು ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಲಾಗಿದೆ. ಹಾಗಾದರೆ ನಮ್ಮ ದೇಶವನ್ನು ಕೂಡ ಅಭಿವೃದ್ಧಿ ಹೊಂದಿದ ದೇಶ ಎಂದು ಪರಿಗಣಿಸಿ ಎಂದು ಕೊರೋನಾ ವೈರಸ್ ಕುರಿತು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಹೇಳಿದರು.
ಚೀನಾ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ಅಭಿವೃದ್ಧಿ ಹೊಂದುತ್ತಿರುವ ದೇಶ ಎಂಬ ಬಿರುದಿನೊಂದಿಗೆ ಚೀನಾ ಲಾಭ ಮಾಡಿಕೊಳ್ಳುತ್ತಿದೆ, ಭಾರತ ಕೂಡ ಅಭಿವೃದ್ಧಿ ಹೊಂದುತ್ತಿರುವ ದೇಶ, ಅಮೆರಿಕ ಕೂಡ ದೊಡ್ಡ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿದೆ. ನಮ್ಮಲ್ಲಿ ಸಾಕಷ್ಟು ಬೆಳವಣಿಗೆಗಳಾಗಿವೆ ಎಂದರು.
ವಿಶ್ವ ವ್ಯಾಪಾರ ಸಂಘಟನೆಯಿಂದ ಅಮೆರಿಕ ಲಾಭ ಪಡೆದುಕೊಂಡಿದೆ ಎಂಬ ಮಾತನ್ನು ಒಪ್ಪಿಕೊಂಡ ಅವರು, ಚೀನಾ ದೇಶದ ಆರ್ಥಿಕತೆ ಅದು ವಿಶ್ವ ವ್ಯಾಪಾರ ಸಂಘಟನೆಯೊಂದಿಗೆ ಸೇರಿಕೊಂಡ ಮೇಲೆ ಅಮೆರಿಕ ಸಹಾಯದಿಂದಾಗಿ ಅಭಿವೃದ್ಧಿ ಹೊಂದಲು ಆರಂಭಿಸಿತು ಎಂದರು.
ಚೀನಾದ ಇತಿಹಾಸವನ್ನೊಮ್ಮೆ ನೋಡಿ, ಹತ್ತಾರು ವರ್ಷಗಳವರೆಗೆ ಆರ್ಥಿಕತೆ ಚೇತರಿಕೆ ಕಾಣದೆ ನಲುಗಿ ಹೋಗಿತ್ತು.ವಿಶ್ವ ವಾಣಿಜ್ಯ ಸಂಘಟನೆಗೆ ಸೇರಿದ ನಂತರ ಅಮೆರಿಕ ನೆರವಿನೊಂದಿಗೆ ಅಭಿವೃದ್ಧಿ ಹೊಂದಿದರು. ಆದರೆ ಈಗ ನಮ್ಮ ಮೇಲೆ ಅನುಕಂಪ, ಪ್ರೀತಿ, ಗೌರವಾದರ ತೋರಿಸದಿದ್ದರೆ ಏನು ಮಾಡಲು ಸಾಧ್ಯವಿಲ್ಲ,ಚೀನಾ ಯಾವ ರೀತಿ ನಡೆದುಕೊಂಡರೂ ನಾವು ಕೊರೋನಾ ಸೋಂಕು ವಿರುದ್ಧ ಗೆಲ್ಲುತ್ತೇವೆ ಎಂದು ಆತ್ಮವಿಶ್ವಾಸದಿಂದ ಟ್ರಂಪ್ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


