ಟಿಕ್ ಟಾಕ್, ವಿಚಾಟ್ ಗೆ ಸಂಪೂರ್ಣ ನಿಷೇಧ ಹೇರಿದ ಅಮೆರಿಕ ಸರ್ಕಾರ: ಇನ್ನು 45 ದಿನಗಳಲ್ಲಿ ಆದೇಶ ಜಾರಿ

ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದು 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಚೀನಾದ ಸೋಷಿಯಲ್ ಮೀಡಿಯಾ ಕಂಪೆನಿಗಳಾದ ಟಿಕ್ ಟಾಕ್ ಮತ್ತು ವಿ ಚಾಟ್ ಜೊತೆ ಯಾವುದೇ ವ್ಯವಹಾರ ನಡೆಸದಂತೆ ತಡೆಯುವ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದು, ಇದು 45 ದಿನಗಳು ಕಳೆದ ನಂತರ ಜಾರಿಗೆ ಬರಲಿದೆ.

ನಿನ್ನೆ ಶ್ವೇತಭವನದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಈ ವಿಷಯ ತಿಳಿಸಿದ್ದಾರೆ. ನಮ್ಮ ದೇಶದ ಭದ್ರತೆ ದೃಷ್ಟಿಯಿಂದ ಈ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ. ಈ ಆದೇಶ ಇನ್ನು 45 ದಿನಗಳಲ್ಲಿ ಜಾರಿಗೆ ಬರಲಿದೆ. 

ಟಿಕ್ ಟಾಕ್ ನ ಮಾತೃ ಸಂಸ್ಥೆ ಬೈಟ್ ಡಾನ್ಸ್ ಲಿಮಿಟೆಡ್ ಜೊತೆಗೆ ಯಾವುದೇ ರೀತಿಯ ವ್ಯವಹಾರ ನಡೆಸಿದರೂ ಅಮೆರಿಕದ ಕಾನೂನು ಪ್ರಕಾರ ಇನ್ನು ಶಿಕ್ಷೆಯಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com