ವಾಷಿಂಗ್ಟನ್: 93 ಮರ್ಡರ್ ಮಾಡಿದ್ದ ಸರಣಿ ಹಂತಕ ಸಾಮ್ಯುಯೆಲ್ ಲಿಟಲ್ ನಿಧನ

ಅಮೆರಿಕ ಇತಿಹಾಸದಲ್ಲಿ ಸರಣಿ ಹಂತಕ ಎಂದೇ ಕುಖ್ಯಾತಿ ಪಡೆದಿದ್ದ ಸ್ಯಾಮ್ಯುಯೆಲ್ ಲಿಟ್ಟಲ್‌ (80) ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 
ಸ್ಯಾಮ್ಯುಯೆಲ್ ಲಿಟ್ಟಲ್
ಸ್ಯಾಮ್ಯುಯೆಲ್ ಲಿಟ್ಟಲ್
Updated on

ವಾಷಿಂಗ್ಟನ್‌: ಅಮೆರಿಕ ಇತಿಹಾಸದಲ್ಲಿ ಸರಣಿ ಹಂತಕ ಎಂದೇ ಕುಖ್ಯಾತಿ ಪಡೆದಿದ್ದ ಸ್ಯಾಮ್ಯುಯೆಲ್ ಲಿಟ್ಟಲ್‌ (80) ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. 

ಹಲವು ಕೊಲೆ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದ ಸ್ಯಾಮ್ಯುಯೆಲ್ ಜೈಲಿನಲ್ಲಿದ್ದ. ಅನಾರೋಗ್ಯ ಕಾರಣ ಇಲ್ಲಿನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಸ್ಯಾಮ್ಯುಯೆಲ್, 4 ದಶಕಗಳಲ್ಲಿ ಅಮೆರಿಕದ 19 ರಾಜ್ಯಗಳಲ್ಲಿ 93 ಜನರನ್ನು ಹತ್ಯೆ ಮಾಡಿದ್ದ. ಇವನನ್ನು 2014ರಲ್ಲಿ ಪೊಲೀಸರು ಬಂಧಿಸಿದ್ದರು. ಇವನ ಮೇಲೆ ಸಾಕಷ್ಟು ಕೊಲೆ ಪ್ರಕರಣಗಳಲ್ಲಿ ಸಾಕ್ಷಿಗಳ ಕೊರತೆ ಇತ್ತು ಎಂದು ಪೊಲೀಸರು ಹೇಳಿದ್ದಾರೆ.

2014ರಲ್ಲಿ ನಡೆದ ಮೂರು ಕೊಲೆ ಪ್ರಕರಣಗಳಲ್ಲಿ ಸ್ಯಾಮ್ಯುಯೆಲ್ ಡಿಎನ್‌ಎ ಹೊಂದಾಣಿಕೆಯಾಗಿತ್ತು. 93 ಜನರನ್ನು ಹತ್ಯೆ ಮಾಡಿರುವುದಾಗಿ ನ್ಯಾಯಾಲಯದ ಎದುರು ತಪ್ಪು ಒಪ್ಪಿಕೊಂಡಿದ್ದ. ಇವನ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು 60ಕ್ಕೂ ಹೆಚ್ಚು ಸಂತ್ರಸ್ತರ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ಕೆಲವರ ಮಾಹಿತಿ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com