ಕೊರೋನಾವೈರಸ್: ಚೀನಾದಲ್ಲಿ ಮೃತರ 2,744 ಕ್ಕೆ ಏರಿಕೆ, 78,497 ಕ್ಕೇರಿದ ಸೋಂಕಿತರ ಸಂಖ್ಯೆ

ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,744 ಕ್ಕೆ ತಲುಪಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಬೀಜಿಂಗ್: ಚೀನಾದಲ್ಲಿ ಮಾರಣಾಂತಿಕ ಕೊರೋನಾ ವೈರಸ್ ಸೊಂಕಿನಿಂದ ಮೃತಪಟ್ಟವರ ಸಂಖ್ಯೆ ಈಗ 2,744 ಕ್ಕೆ ತಲುಪಿದೆ.

ದೇಶಾದ್ಯಂತ ಒಟ್ಟು 78, 497 ಸೋಂಕು ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಸಮಿತಿ ತಿಳಿಸಿದೆ. ಚೀನಾದ 31 ಪ್ರಾಂತ್ಯಗಳ ಇತ್ತೀಚಿನ ಮಾಹಿತಿಯ ಪ್ರಕಾರ, 78, 497 ಸೋಂಕಿತರ ಪೈಕಿ 32,495 ಜನರು ಚಿಕಿತ್ಸೆ ಪಡೆದು ಗುಣಮುಖರಾದ ಹಿನ್ನಲೆಯಲ್ಲಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ.

ಕೊರೋನಾ ಸೋಂಕಿಗೆ ಮತ್ತೆ 29 ಬಲಿ
ಇನ್ನು ಚೀನಾದಲ್ಲಿ ಕೊರೊನಾ ವೈರಾಣು ಸೋಂಕಿಗೆ ಬುಧವಾರ ಮತ್ತೆ 29 ಜನರು ಬಲಿಯಾಗಿದ್ದು ಕಳೆದ 24 ಗಂಟೆಗಳಲ್ಲಿ 433 ಹೊಸ ದೃಢಪಟ್ಟ ಪ್ರಕರಣಗಳು ದಾಖಲಾಗಿವೆ ಎಂದು ಚೀನಾ ಆರೋಗ್ಯ ಪ್ರಾಧಿಕಾರ ಗುರುವಾರ ತಿಳಿಸಿದೆ. 

ಸೋಂಕಿಗೆ ಬಲಿಯಾದವರ ಸಂಖ್ಯೆ ಕಳೆದೊಂದು ದಿನದಲ್ಲಿ ಹುಬೈ ಪ್ರಾಂತ್ಯದಲ್ಲಿ 26 ರಷ್ಟಿದ್ದು ಬೀಜಿಂಗ್, ಹಿಲಾಂಗ್ಜಾಂಗ್ ಮತ್ತು ಹೆನಾನ್ ಗಳಲ್ಲಿ ತಲಾ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಪ್ರಾಧಿಕಾರ ತಿಳಿಸಿದೆ. ಹುಬೈ ಪ್ರಾಂತ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 401 ಹೊಸ ಪ್ರಕರಣಗಳು ದಾಖಲಾಗಿದ್ದು, 52 ಮಂದಿ ಮೃತಪಟ್ಟಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com