ಪೋಷಕರನ್ನು ಹತ್ಯೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು ಗುಂಡಿಕ್ಕಿ ಕೊಂದ ಬಾಲಕಿ

ಕಾಬೂಲ್: ತನ್ನ ಹೆತ್ತವರನ್ನು ಕಣ್ಣೆದುರೇ ಮನೆಯಿಂದ ಎಳೆದೊಯ್ದು ಕೊಲೆ ಮಾಡಿದ ಇಬ್ಬರು ತಾಲಿಬಾನ್ ಉಗ್ರರನ್ನು 15 ವರ್ಷ ಪ್ರಾಯದ ಖಮರ್ ಗುಲ್ ಎಂಬ ಬಾಲಕಿ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಘೋರ್ ಪ್ರಾಂತ್ಯದಲ್ಲಿ ನಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜುಲೈ 16ರಂದು ಈ ಘಟನೆ ನಡೆದಿದ್ದು, ಪ್ರಾಂತ್ಯದ ತೈವಾರಾ ಜಿಲ್ಲೆಯಲ್ಲಿ ತನ್ನ ಸಹೋದರ ಮತ್ತು ತಂದೆ-ತಾಯಿಯನ್ನು ನನ್ನ ಕಣ್ಣೆದುರೇ ತಾಲಿಬಾನಿಗಳು ಹತ್ಯೆ ಮಾಡಿದ್ದರು. ಇದಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎಂದು ಖಮರ್ ಗುಲ್ ಹೇಳಿದ್ದಾಳೆ ಎಂದು ಟೋಲೊ ನ್ಯೂಸ್ ವರದಿ ಮಾಡಿದೆ.
ಜುಲೈ 16 ರಂದು, ಖಮರ್ ಗುಲ್ ತನ್ನ ತಂದೆಯ ಎಕೆ -47 ರೈಫಲ್ ತೆಗೆದುಕೊಂಡು ತನ್ನ ಹೆತ್ತವರನ್ನು ಗುಂಡಿಕ್ಕಿ ಕೊಂದ ಇಬ್ಬರು ತಾಲಿಬಾನಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾಳೆ.
"ಅವರು ನನ್ನ ತಂದೆ ಮತ್ತು ತಾಯಿಯನ್ನು ನಮ್ಮ ಕಣ್ಣ ಮುಂದೆಯೇ ಕೊಂದರು. ನಾನು ನನ್ನ ತಂದೆಯ ಬಂದೂಕನ್ನು ತೆಗೆದುಕೊಂಡು ಗುಂಡಿಕ್ಕಲು ಪ್ರಾರಂಭಿಸಿದೆ. ಪರಿಣಾಮ ಅವರಲ್ಲಿ ಇಬ್ಬರು ಕೊಲ್ಲಲ್ಪಟ್ಟರು ಮತ್ತು ಇನ್ನೊಬ್ಬ ಗಾಯಗೊಂಡರು. ನಾವು ಹೋರಾಟವನ್ನು ಮುಂದುವರೆಸಿದೆವು. ನನ್ನ 12 ವರ್ಷದ ಸಹೋದರನೂ ಕೂಡ ನನ್ನ ಬೆಂಬಲಕ್ಕೆ ಬಂದಿದ್ದಾನೆ. ನಂತರ ನಮ್ಮ ಸಂಬಂಧಿಕರು ನಮಗೆ ಸಹಾಯ ಮಾಡಲು ಬಂದರು. ಆಗ ತಾಲಿಬಾನಿಗಳು ಹಿಮ್ಮೆಟ್ಟಿದರು ಎಂದು ಖಮರ್ ಗುಲ್ ಹೇಳಿದ್ದಾಳೆ.
ತಾಲಿಬಾನ್ ಪ್ರತೀಕಾರ ನಡೆಸಬಹುದು ಎಂಬ ಆತಂಕದಿಂದ ಖಮರ್ ಗುಲ್ ಮತ್ತು ಅವಳ ಸಹೋದರನನ್ನು ಸ್ಥಳೀಯ ಅಧಿಕಾರಿಗಳು ಪ್ರಾಂತ್ಯದ ರಾಜಧಾನಿ ಫಿರೋಜ್ಕೋ ನಗರಕ್ಕೆ ಕರೆದೊಯ್ದಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧ್ಯಕ್ಷ ಅಬ್ದುಲ್ ಘನಿ ಅವರ ಆದೇಶದ ಹಿನ್ನೆಲೆಯಲ್ಲಿ, ಸಹೋದರಿ ಮತ್ತು ಸಹೋದರ ಶೀಘ್ರದಲ್ಲೇ ಕಾಬೂಲ್‌ಗೆ ತೆರಳಿ ಅಧ್ಯಕ್ಷರನ್ನು ಭೇಟಿಯಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


