ಬೀಜಿಂಗ್: ಬೀಜಿಂಗ್ ನಲ್ಲಿ ಹೊಸದಾಗಿ ಇತರ ದೇಶಗಳಿಂದ ಬಂದಿರುವ ಕೊರೊನಾವೈರಸ್ ಕಾಯಿಲೆ ಪ್ರಕರಣವನ್ನು ಶುಕ್ರವಾರ ವರದಿ ಮಾಡಿದೆ,
ವರದಿಗಳ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಆಮದಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 156 ಕ್ಕೆ ಏರಿಕೆಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ. ಆಯೋಗದ ಪ್ರಕಾರ, ಹೊಸದಾಗಿ ವರದಿಯಾದ ಪ್ರಕರಣಗಳು ಅಮೆರಿಕ ರಾಷ್ಟ್ರದಿಂದ ಬಂದಿವೆ ಎಂದು ತಿಳಿಸಿದೆ.
ಚೀನಾದಲ್ಲಿ ಹೊಸದಾಗಿ 54 ಮಂದಿಯಲ್ಲಿ ಹೊರದೇಶದಿಂದ ಬಂದ ವೈರಸ್ ಕಂಡು ಬಂದಿದ್ದು, ಇದರ ಪ್ರಕರಣ ಸಂಖ್ಯೆ 649ಕ್ಕೆ ಏರಿಕೆಯಾಗಿದೆ. ಇನ್ನು ರಾಷ್ಟ್ರದಲ್ಲಿ ವೈರಸ್'ಗೆ ಸಾವಿಗೀಡಾದವರ ಸಂಖ್ಯೆ 3,295ಕ್ಕೆ ಏರಿಕೆಯಾಗಿದೆ.
Advertisement