ಮೊದಲ ಬಾರಿಗೆ ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡ ಟ್ರಂಪ್ 

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡಿದ್ದಾರೆ. 
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Updated on: 

ವಾಷಿಂಗ್ ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದ ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಜೋ ಬೈಡನ್ ಗೆಲುವನ್ನು ಒಪ್ಪಿಕೊಂಡಿದ್ದಾರೆ. 

ಆದರೂ ಈ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂಬ ವಾದವನ್ನು ಟ್ರಂಪ್ ಮುಂದುವರೆಸಿದ್ದಾರೆ. 

ಜೋ ಬೈಡನ್ ಗೆದ್ದಿರುವುದು ಚುನಾವಣೆಯಲ್ಲಿ ನಡೆದ ಅಕ್ರಮದಿಂದಾಗಿ. ವೋಟ್ ವಾಚರ್ ಗಳು, ವೀಕ್ಷಕರ ಪ್ರವೇಶಕ್ಕೆ ಅವಕಾಶವಿಲ್ಲದಂತೆ ಮಾಡಲಾಗಿತ್ತು ಎಂದು ಆರೋಪ ಮಾಡಿರುವ ಟ್ರಂಪ್ ಮಾಧ್ಯಮಗಳನ್ನು ನಕಲಿ ಹಾಗೂ ಮೌನ ಮಾಧ್ಯಮಗಳು ಎಂದೂ ಟೀಕಿಸಿದ್ದಾರೆ. 

ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ತಮ್ಮ ಮೂರನೇ ಪ್ರಯತ್ನದಲ್ಲಿ ಟ್ರಂಪ್ ವಿರುದ್ಧ ಗೆದ್ದು ಶ್ವೇತ ಭವನ ಪ್ರವೇಶಿಸುತ್ತಿದ್ದಾರೆ. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com