ಸಾಕು ನಾಯಿಯೊಂದಿಗೆ ಆಟ: ಜಾರಿ ಬಿದ್ದು ಜೋ ಬೈಡನ್ ಕಾಲಿನ ಮೂಳೆ ಮುರಿತ..!!

ಅಮೆರಿಕದ ನಿಯೋಜಿತ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್, ತಮ್ಮ ಮನೆಯ ಸಾಕು ನಾಯಿಯೊಂದಿಗೆ ಆಟವಾಡುವಾಗ ಕಾಲಿನ ಮೂಳೆ ಮುರಿದು ಕೊಂಡಿದ್ದಾರೆ. 
ಜೋ ಬೈಡನ್
ಜೋ ಬೈಡನ್
Updated on: 

ವಾಷಿಂಗ್ಟನ್: ಅಮೆರಿಕದ ನಿಯೋಜಿತ ಅಧ್ಯಕ್ಷರಾಗಿ ಚುನಾಯಿತರಾಗಿರುವ ಜೋ ಬೈಡೆನ್, ತಮ್ಮ ಮನೆಯ ಸಾಕು ನಾಯಿಯೊಂದಿಗೆ ಆಟವಾಡುವಾಗ ಕಾಲಿನ ಮೂಳೆ ಮುರಿದು ಕೊಂಡಿದ್ದಾರೆ. 

78ವರ್ಷದ ಹಿರಿಯ ಜೋ ಬೈಡೆನ್ ಅವರಿಗೆ ನಾಯಿಗಳೆಂದರೆ ಹೆಚ್ಚು ಪ್ರೀತಿ. ಹಾಗಾಗಿ ಜರ್ಮನ್ ಶೆಫರ್ಡ್ ನಾಯಿಗಳನ್ನು ಸಾಕುತ್ತಿದ್ದಾರೆ. ನಾಯಿಯೊಂದಿಗೆ ಆಟವಾಡುವಾಗ ಅವರ ಕಾಲಿನ ಪಾದದ ತಿರುಚಿದೆ ಎಂದು ಅವರ ವೈದ್ಯ ಕೆವಿನ್ ಒ ಕಾನರ್ ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ-ಸಿಟಿ ಸ್ಕ್ಯಾನ್ ಪರೀಕ್ಷೆಯ ಮೂಲಕ ಕಾಲಿನ ಮೂಳೆ ಸಣ್ಣದಾಗಿ ಮುರಿತವಾಗಿರುವುದು ಖಚಿತವಾಗಿದೆ. ಅವರಿಗೆ ಹಲವು ವಾರಗಳವರೆಗೆ ವಾಕಿಂಗ್ ಬೂಟ್ ಅಗತ್ಯವಿರುತ್ತದೆ ಎಂದು ವೈದ್ಯರು ಸಲಹೆ ಮಾಡಿದ್ದಾರೆ. 

ಬೆಳಿಗ್ಗೆ ಜಾಗಿಂಗ್ ಸಮಯದಲ್ಲಿ ತಮ್ಮ ಸಾಕು ನಾಯಿ ಜರ್ಮನ್ ಶೆಫರ್ಡ್ ಜೊತೆ ಜಾಗಿಂಗ್ ನಲ್ಲಿ ಆಟವಾಡುತ್ತಿದ್ದಾಗ ಕೆಳಗೆ ಜಾರಿಬಿದ್ದು ಕಾಲಿಗೆ ಗಾಯಮಾಡಿಕೊಂಡಿದ್ದಾರೆ. ಇದರಿಂದ ಡೆಲಾವರ್ ನಲ್ಲಿರುವ ಮೂಳೆ ತಜ್ಞ ವೈದ್ಯರೊಬ್ಬರಿಂದ ಚಿಕಿತ್ಸೆ ಪಡೆದುಕೊಂಡಿದ್ದಾರೆ ಎಂದು ಬೈಡೆನ್ ಕಚೇರಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com