ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಇಂಡೊನೇಷ್ಯಾ ಮಾಜಿ ಅಧ್ಯಕ್ಷರ ಪುತ್ರಿ ಮತಾಂತರ!

ಅಜ್ಜಿಯ ಚಿಂತನೆಗಳು, ಬೋಧನೆಗಳು ತಮ್ಮ ಮೇಲೆ ಪ್ರಭಾವ ಬೀರಿದ್ದು, ಅದರಿಂದಾಗಿಯೇ ತಾವು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 
ಸುಕ್ಮಾವತಿ ಸುಕರ್ನೊಪುತ್ರಿ
ಸುಕ್ಮಾವತಿ ಸುಕರ್ನೊಪುತ್ರಿ
Updated on: 

ಜಕಾರ್ತ: ಇಂಡೋನೇಷ್ಯಾದ ರಾಷ್ಟ್ರಪಿತ ಎಂದೇ ಕರೆಯಲ್ಪಡುವ ಅಧ್ಯಕ್ಷ ಸುಕರ್ನೊ ಅವರ ಪುತ್ರಿ 69 ವರ್ಷದ ಸುಕ್ಮಾವತಿ ಸುಕರ್ನೊಪುತ್ರಿ ಅವರು ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಸ್ವಯಿಚ್ಛೆಯಿಂದ ಮತಾಂತರಗೊಳ್ಳುತ್ತಿದ್ದಾರೆ. 

ಸುಕ್ಮಾವತಿ ಅವರು ಈ ನಿರ್ಧಾರ ಕೈಗೊಳ್ಳುವುದಕ್ಕೆ ಅವರ ಅಜ್ಜಿಯ ಪ್ರಭಾವ ಕಾರಣ ಎಂದು ಅವರು ಹೇಳಿದ್ದಾರೆ. ದಿವಂಗತರಾಗಿರುವ ಅವರ ಅಜ್ಜಿಯ ಚಿಂತನೆಗಳು, ಬೋಧನೆಗಳು ತಮ್ಮ ಮೇಲೆ ಪ್ರಭಾವ ಬೀರಿದ್ದು, ಅದರಿಂದಾಗಿಯೇ ತಾವು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದಾರೆ. 

ಸುಕ್ಮಾವತಿ ಅವರಿಗೆ ಹಿಂದೂ ಧರ್ಮದ ಬಗ್ಗೆ ಆಳವಾದ ಪಾಂಡಿತ್ಯವಿದೆ ಎಂದು ಅವರ ಸಹವರ್ತಿಗಳು ಹೇಳುತ್ತಾರೆ. 2018ರಲ್ಲಿ ಹಲವು ಇಸ್ಲಾಮಿಕ್ ಸಂಘತನೆಗಳು ಸುಕ್ಮಾವತಿ ಅವರು ಇಸ್ಲಾಂ ವಿರೋಧಿ ಕವನ ವಾಚಿಸಿದ್ದಾರೆ ಎಂದು ದೂಷಿಸಿದ್ದವು. ಆ ಸಂದರ್ಭದಲ್ಲಿ ಅವರು ತಮ್ಮ ಕವದಿಂದ ನೋವುಂಟಾಗಿದ್ದಲ್ಲಿ ಕ್ಷಮೆ ಕೋರುವುದಾಗಿ ಹೇಳಿದ್ದರು.

ಇಂಡೋನೇಷ್ಯಾದಲ್ಲಿ ಇಸ್ಲಾಂ ಅತಿ ದೊಡ್ಡ ಧರ್ಮವಾಗಿದ್ದು ಇಡೀ ವಿಶ್ವದಲ್ಲೇ ಮುಸ್ಲಿಮರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ದೇಶಗಳಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಹಿಂದೂ ಧರ್ಮೀಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ರಾಷ್ಟ್ರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com