ಆಫ್ಘನ್ ನಿರಾಶ್ರಿತರಿಗೆ ಆಶ್ರಯ ನೀಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಪೋಪ್ ಕರೆ

ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ತಮ್ಮ ಭಾಷಣದಲ್ಲಿ ಎಲ್ಲೂ ತಾಲಿಬಾನ್ ಹೆಸರನ್ನು ಉಚ್ಛರಿಸಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವ್ಯಾಟಿಕನ್ ಸಿಟಿ: ಕ್ರೈಸ್ತ ಧರ್ಮ ಗುರು ಪೋಪ್ ಫ್ರಾನ್ಸಿಸ್ ಅಫ್ಘಾನಿಸ್ತಾನ ತೊರೆದು ಹೊಸ ಬದುಕನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಅಲ್ಲಿನ ನಾಗರಿಕರಿಗೆ ಆಶ್ರಯ ಒದಗಿಸುವಂತೆ ಕರೆ ನೀಡಿದ್ದಾರೆ. 

ವ್ಯಾಟಿಕನ್ ಸಿಟಿಯಲ್ಲಿನ ತಮ್ಮ ನಿವಾಸದ ಬಳಿಯ ಸೇಂಟ್ ಪೀಟರ್ಸ್ ವೃತ್ತದಲ್ಲಿ ಭಕ್ತಾದಿಗಳೊಂದಿಗೆ ಪ್ರಾರ್ಥನೆ ಕೈಗೊಳ್ಳುವ ಸಂದರ್ಭ ಅವರು ಈ ಕರೆ ನೀಡಿದ್ದಾರೆ.

ಆಫ್ಘನ್ ನಿರಾಶ್ರಿತರನ್ನು ಆ ದೇವನು ಕಾಪಾಡಲಿ ಎಂದು ಅತ್ಯಂತ ವಿನಮ್ರವಾಗಿ ಆತನನ್ನು ಕೇಳಿಕೊಳ್ಳುತ್ತೇನೆ ಎಂದು ಅವರು ಹೇಳಿದರು. 

ತಮ್ಮ ಭಾಷಣದಲ್ಲಿ ಅವರು ಎಲ್ಲೂ ತಾಲಿಬಾನ್ ಹೆಸರನ್ನು ಉಚ್ಛರಿಸಲಿಲ್ಲ ಎನ್ನುವುದು ಅಚ್ಚರಿಯ ಸಂಗತಿ. ಅಫ್ಘಾನಿಸ್ತಾನದ ಯುವ ಸಮುದಾಯ ಉತಮ ಶಿಕ್ಷಣ ಹೊಂದಲಿದ್ದಾರೆ ಎಂದು ತಾವು ಆಶಿಸುವುದಾಗಿ ಪೋಪ್ ಇದೇ ಸಂದರ್ಭದಲ್ಲಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com