ಅಮೆರಿಕದ ಕೊಲೊರಾಡೋ ನೈಟ್‌ಕ್ಲಬ್‌ನಲ್ಲಿ ಗುಂಡಿನ ದಾಳಿ, ಐವರು ಸಾವು, 18 ಮಂದಿಗೆ ಗಾಯ

ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿರುವ ಎಲ್‌ಜಿಬಿಟಿಕ್ಯು ನೈಟ್‌ಕ್ಲಬ್‌ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದ ಕೊಲೊರಾಡೋ ಸ್ಪ್ರಿಂಗ್ಸ್‌ನಲ್ಲಿರುವ ಎಲ್‌ಜಿಬಿಟಿಕ್ಯು ನೈಟ್‌ಕ್ಲಬ್‌ನಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ ಮತ್ತು 18 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

"ಇಂದು ಸಂಜೆ ಸ್ಥಳೀಯ ಕ್ಲಬ್‌ನಲ್ಲಿ ಗುಂಡಿನ ದಾಳಿ ನಡೆದಿದೆ... ಘಟನೆಯಲ್ಲಿ 18 ಮಂದಿ ಗಾಯಗೊಂಡಿದ್ದಾರೆ ಮತ್ತು ಐವರು ಸಾವನ್ನಪ್ಪಿದ್ದಾರೆ" ಎಂದು ಪೊಲೀಸ್ ವಕ್ತಾರ ಪಮೇಲಾ ಕ್ಯಾಸ್ಟ್ರೋ ಹೇಳಿದ್ದಾರೆ.

ಕ್ಲಬ್ ಕ್ಯೂ ಎಂದು ಕರೆಯಲ್ಪಡುವ ಕ್ಲಬ್‌ನಲ್ಲಿ ನಡೆದ ಗುಂಡಿನ ದಾಳಿಯ ಕುರಿತು ಶನಿವಾರ ಮಧ್ಯರಾತ್ರಿಗಿಂತ ತುಸು ಮುನ್ನ ಪೊಲೀಸರಿಗೆ ಆರಂಭಿಕ ಫೋನ್ ಕರೆ ಬಂದಿತ್ತು ಎಂದು ಪಮೇಲಾ ಕ್ಯಾಸ್ಟ್ರೋ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಶಂಕಿತ ವ್ಯಕ್ತಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಕರಣದ ತನಿಖೆಯಲ್ಲಿ ಎಫ್ ಬಿಐ ಸಹಾಯ ಪಡೆಯುತ್ತಿರುವುದಾಗಿ ಪಮೇಲಾ ಕ್ಯಾಸ್ಟ್ರೋ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com