ಅಮೆರಿಕದ ಗುರುದ್ವಾರದಲ್ಲಿ ಗುಂಡಿನ ದಾಳಿ: ಇಬ್ಬರಿಗೆ ಗಂಭೀರ ಗಾಯ

ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ದಾಳಿಯಲ್ಲಿ ಗಾಯಗೊಂಡು ಕೆಳಗೆ ಕುಸಿದು ಬಿದ್ದಿರುವ ವ್ಯಕ್ತಿ.
ದಾಳಿಯಲ್ಲಿ ಗಾಯಗೊಂಡು ಕೆಳಗೆ ಕುಸಿದು ಬಿದ್ದಿರುವ ವ್ಯಕ್ತಿ.
Updated on

ಸ್ಯಾಕ್ರಮೆಂಟೊ (ಕ್ಯಾಲಿಫೋರ್ನಿಯಾ): ಅಮೆರಿಕದ ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೊ ಕೌಂಟಿಯ ಗುರುದ್ವಾರದಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಬ್ರಾಡ್‌ಶಾ ಗುರುದ್ವಾರದಲ್ಲಿ ಕೀರ್ತನೆ ಕಾರ್ಯಕ್ರಮದ ವೇಳೆ ಪರಸ್ಪರ ಪರಿಚಿತ ವ್ಯಕ್ತಿಗಳ ನಡುವೆ ಹೊಡೆದಾಟ ಆರಂಭವಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಮಧ್ಯಾಹ್ನ 2:30 ರ ಸುಮಾರಿಗೆ ಗುರುದ್ವಾರದ ಮೈದಾನದಲ್ಲಿ ಜಗಳ ಪ್ರಾರಂಭವಾಗಿದೆ, ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಗುಂಡು ಹಾರಿಸಿದ. ನಂತರ ಮತ್ತೊಬ್ಬ ವ್ಯಕ್ತಿ ಆ ವ್ಯಕ್ತಿಗೆ ಗುಂಡು ಹಾರಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡ. ಬಳಿಕ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರು ವ್ಯಕ್ತಿಗಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇಬ್ಬರೂ ವ್ಯಕ್ತಿಗಳು 20-30ರ ಹರೆಯದವರಾಗಿದ್ದು, ಇಬ್ಬರೂ ಪರಸ್ಪರ ತಿಳಿದಿರುವಂತೆ ತೋರುತ್ತಿದೆ, ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ. ಗುಂಡಿನ ದಾಳಿಯ ಹಿಂದಿರುವ ಉದ್ದೇಶ ತಿಳಿದುಬಂದಿಲ್ಲ. ಆರೋಪಿಗಳಿಗಾಗಿ ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ನಡುವೆ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com