ಅಮೆರಿಕಕ್ಕೆ 'ಅವಮಾನ'ವಾಗುವವರೆಗೂ ಯುದ್ಧ ಮುಂದುವರಿಯುತ್ತದೆ: ಟ್ರಂಪ್ ಹೇಳಿಕೆ ತಳ್ಳಿಹಾಕಿದ ಇರಾನ್ ಸೇನೆ!

ಸಂಘರ್ಷದ ಮಧ್ಯೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಟೆಹ್ರಾನ್‌ನ ಸಾಮರ್ಥ್ಯವನ್ನು 'ಮೊಟಕುಗೊಳಿಸಲಾಗಿದೆ' ಎಂಬ ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದರು.
Israel-Iran war
ಇಸ್ರೇಲ್-ಇರಾನ್ ಯುದ್ಧ
Updated on

ಟೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೀಡಿದ ಹೇಳಿಕೆಗಳಿಗೆ ಇರಾನ್ ಸೇನೆ ಗುರುವಾರ ಬಲವಾದ ಪ್ರತಿಕ್ರಿಯೆ ನೀಡಿದೆ. ವಾಷಿಂಗ್ಟನ್ 'ಶಾಶ್ವತ ಅವಮಾನ, ವಿಷಾದ ಮತ್ತು ಶರಣಾಗತಿ'ಯಾಗುವವರೆಗೂ ಸದ್ಯ ನಡೆಯುತ್ತಿರುವ ಸಂಘರ್ಷ ಮುಂದುವರಿಯುತ್ತದೆ ಎಂದು ಇರಾನ್ ರಾಜ್ಯ ಮಾಧ್ಯಮ ಪ್ರೆಸ್ ಟಿವಿ ವರದಿ ಮಾಡಿದೆ.

ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿ ವಕ್ತಾರರು ಬಿಡುಗಡೆ ಮಾಡಿದ ಹೇಳಿಕೆ ಪ್ರಕಾರ, ಇರಾನ್‌ನ ಮಿಲಿಟರಿ ಮೂಲಸೌಕರ್ಯ ಮತ್ತು ಸಾಮರ್ಥ್ಯಗಳಿಗೆ ಹಾನಿಯಾಗಿರುವ ಅಮೆರಿಕದ ಹೇಳಿಕೆಗಳನ್ನು ಇರಾನ್ ತಿರಸ್ಕರಿಸಿದೆ. ಇರಾನ್‌ನ ಮಿಲಿಟರಿ ಬಲದ ಬಗ್ಗೆ ಅಮೆರಿಕದ ಗುಪ್ತಚರಕ್ಕೆ ಇರುವ ಮಾಹಿತಿ 'ಅಪೂರ್ಣ' ಎಂದು ಪ್ರತಿಪಾದಿಸಿದೆ.

ಇಸ್ಲಾಮಿಕ್ ಗಣರಾಜ್ಯದ 'ವಿಶಾಲವಾದ ಕಾರ್ಯತಂತ್ರದ ಸಾಮರ್ಥ್ಯಗಳ' ಬಗ್ಗೆ ವಾಷಿಂಗ್ಟನ್‌ಗೆ ತಿಳಿದಿಲ್ಲ ಎಂದು ವಕ್ತಾರರು ಹೇಳಿದರು. ಸಂಘರ್ಷದ ಮಧ್ಯೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಟೆಹ್ರಾನ್‌ನ ಸಾಮರ್ಥ್ಯವನ್ನು 'ಮೊಟಕುಗೊಳಿಸಲಾಗಿದೆ' ಎಂಬ ಟ್ರಂಪ್ ಹೇಳಿಕೆಯನ್ನು ತಳ್ಳಿಹಾಕಿದರು.

'ನಮ್ಮ ಮಿಲಿಟರಿ ಶಕ್ತಿ ಮತ್ತು ಸಲಕರಣೆಗಳ ಕುರಿತು ನಿಮ್ಮ ಗುಪ್ತಚರ ಮಾಹಿತಿ ಅಪೂರ್ಣವಾಗಿದೆ. ನಮ್ಮ ಅಗಾಧವಾದ ಕಾರ್ಯತಂತ್ರದ ಸಾಮರ್ಥ್ಯಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ. ನಮ್ಮ ಕ್ಷಿಪಣಿ ಉತ್ಪಾದನಾ ತಾಣಗಳು, ದೀರ್ಘ-ಶ್ರೇಣಿಯ ದಾಳಿ ಮತ್ತು ಉನ್ನತ ಶ್ರೇಣಿಯ ಡ್ರೋನ್‌ಗಳು, ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ವಾರ್ ಫೇರ್ ಅಥವಾ ವಿಶೇಷ ಉಪಕರಣಗಳನ್ನು ನೀವು ನಾಶಪಡಿಸಿದ್ದೀರಿ ಎಂದು ಭಾವಿಸಬೇಡಿ. ಅಂತಹ ಊಹೆಗಳು ನಿಮ್ಮನ್ನು ಇನ್ನಷ್ಟು ಆಳಕ್ಕೆ ತಳ್ಳುತ್ತವೆ. ನೀವು ದಾಳಿ ಮಾಡಿರುವ ಪ್ರದೇಶಗಳು ಅತಿ ಮುಖ್ಯ ಎಂದು ನೀವು ಭಾವಿಸುತ್ತೀರಿ; ಆದರೆ, ನಮ್ಮ ಮಿಲಿಟರಿ ಉತ್ಪಾದನೆಯು ನಿಮಗೆ ತಿಳಿದಿಲ್ಲದ ಮತ್ತು ಎಂದಿಗೂ ತಲುಪದ ಸ್ಥಳಗಳಲ್ಲಿ ನಡೆಯುತ್ತದೆ. ನಮ್ಮ ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಕಾರ್ಯತಂತ್ರದ ವ್ಯವಸ್ಥೆಗಳನ್ನು ಎಣಿಸಲು ಪ್ರಯತ್ನಿಸಬೇಡಿ; ನೀವು ಅದರಿಂದ ಏನನ್ನೂ ಸಾಧಿಸುವುದಿಲ್ಲ' ಎಂದು ವಕ್ತಾರರು ಹೇಳಿದರು.

Israel-Iran war
ಇರಾನ್ ಯುದ್ಧ ಮುಕ್ತಾಯ ಹಂತದಲ್ಲಿದೆ, ಇನ್ನು 2-3 ವಾರ ಟೆಹ್ರಾನ್ ಮೇಲೆ ದಾಳಿ ತೀವ್ರ: ದೇಶವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಭಾಷಣ-Video

ಸೆಂಟ್ರಲ್ ಖತಮ್ ಅಲ್-ಅನ್ಬಿಯಾ ಪ್ರಧಾನ ಕಚೇರಿಯು ಇರಾನ್‌ನ ಅತ್ಯುನ್ನತ ಕಾರ್ಯಾಚರಣಾ ಕಮಾಂಡ್ ಘಟಕವಾಗಿದ್ದು, ಇದು ಇರಾನಿನ ಸೈನ್ಯ ಮತ್ತು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ನಡುವಿನ ಕಾರ್ಯಾಚರಣೆಗಳನ್ನು ಸಂಘಟಿಸುತ್ತದೆ.

'ನಮ್ಮ ಗೌರವಾನ್ವಿತ, ಪ್ರೀತಿಯ, ಮುಸ್ಲಿಂ ರಾಷ್ಟ್ರದ ವಿರುದ್ಧ ನೀವು ಪ್ರಾರಂಭಿಸಿದ ಆಕ್ರಮಣಕ್ಕೆ ತಕ್ಕ ಬೆಲೆ ತೆರಲೇಬೇಕು. ನೀವು ಶಾಶ್ವತ ಅವಮಾನ, ವಿಷಾದ ಮತ್ತು ಶರಣಾಗತಿಯನ್ನು ಎದುರಿಸುವವರೆಗೂ ಈ ಯುದ್ಧ ಮುಂದುವರಿಯುತ್ತದೆ. ನೀವು ಈಗಾಗಲೇ ನಡೆಸಿರುವ ದಾಳಿ ಪರಿಣಾಮವಾಗಿ ನಮ್ಮಿಂದ ಇನ್ನಷ್ಟು ಹೀನಾಯ ಮತ್ತು ವಿನಾಶಕಾರಿ ದಾಳಿಗಳನ್ನು ನಿರೀಕ್ಷಿಸಿ' ಎಂದು ಹೇಳಿರುವುದಾಗಿ ಪ್ರೆಸ್ ಟಿವಿ ಉಲ್ಲೇಖಿಸಿದೆ.

ಫೆಬ್ರುವರಿ ಅಂತ್ಯದಲ್ಲಿ ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕದ ಯುದ್ಧ ಪ್ರಾರಂಭವಾಯಿತು. ಬುಧವಾರ ಸಂಜೆ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಟ್ರಂಪ್, ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ನಡೆಸಿದ 'ನಿರ್ಣಾಯಕ' ದಾಳಿಗಾಗಿ ಅಮೆರಿಕನ್ ಮಿಲಿಟರಿಯನ್ನು ಹೊಗಳಿದರು. ಈ ಅಭಿಯಾನದ ಮೂಲ ಉದ್ದೇಶವು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಹೇಳಿದ ನಂತರ ಇರಾನ್ ಪ್ರತಿಕ್ರಿಯೆ ನೀಡಿದೆ.

'ಇರಾನ್‌ನ ನೌಕಾಪಡೆ ನಾಶವಾಗಿದೆ, ಅದರ ವಾಯುಪಡೆ ಹಾಳಾಗಿದೆ ಮತ್ತು ಅದರ ನಾಯಕರು, ಅವರಲ್ಲಿ ಹೆಚ್ಚಿನವರು ಭಯೋತ್ಪಾದಕರು, ಈಗ ಸತ್ತಿದ್ದಾರೆ. ದೇಶದ ವಿಶಾಲ ಮಿಲಿಟರಿ ಮೂಲಸೌಕರ್ಯವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಅಲ್ಲದೆ, 'ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ನಾಟಕೀಯವಾಗಿ ಮೊಟಕುಗೊಳಿಸಲಾಗಿದೆ' ಎಂದು ಟ್ರಂಪ್ ಘೋಷಿಸಿದರು.

ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್‌ಗಳನ್ನು ತುಂಡು ತುಂಡಾಗಿ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೇ ಉಳಿದಿವೆ ಮತ್ತು ಯುನೈಟೆಡ್ ಸ್ಟೇಟ್ಸ್ 'ಹಿಂದೆಂದಿಗಿಂತಲೂ ಈಗ ದೊಡ್ಡ ಗೆಲುವು ಸಾಧಿಸುತ್ತಿದೆ' ಎಂದು ಹೇಳಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com