ಒಂದು ಕಡೆ ಪಾಕಿಸ್ತಾನದಲ್ಲಿ ಶಾಂತಿ ಮಾತುಕತೆ, ಮತ್ತೊಂದು ಕಡೆ ಲೆಬನಾನ್‌ ಮೇಲೆ ದಾಳಿ ಮುಂದುವರೆಸಿದ ಇಸ್ರೇಲ್

ಕಳೆದ 24 ಗಂಟೆಗಳಲ್ಲಿ ತನ್ನ ವಾಯುಪಡೆಯು ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಮೂಲಸೌಕರ್ಯವನ್ನು ನಾಶಪಡಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.
Israel says it struck 200 Hezbollah targets in Lebanon
ಲೆಬನಾನ್‌ ಮೇಲೆ ದಾಳಿ
Updated on: 

ಮಧ್ಯಪ್ರಾಚ್ಯದಲ್ಲಿ ತೀವ್ರ ಸಂಘರ್ಷದ ನಡುವೆ ಇರಾನ್ ಜೊತೆ ಮಾತುಕತೆ ನಡೆಸಲು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಶನಿವಾರ ಇಸ್ಲಾಮಾಬಾದ್ ಆಗಮಿಸಿದ್ದಾರೆ.

ಒಂದು ಕಡೆ ಪಾಕಿಸ್ತಾನದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನೇರ ಶಾಂತಿ ಮಾತುಕತೆ ನಡೆಯುತ್ತಿದೆ. ಮತ್ತೊಂದು ಕಡೆ ಇಸ್ರೇಲ್, ಲೆಬನಾನ್‌ ಮೇಲೆ ದಾಳಿ ಮುಂದುವರಿಸಿರುವುದಾಗಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ ತನ್ನ ವಾಯುಪಡೆಯು ಲೆಬನಾನ್‌ನಲ್ಲಿರುವ ಇರಾನ್ ಬೆಂಬಲಿತ ಉಗ್ರಗಾಮಿ ಗುಂಪಿನ ಮೂಲಸೌಕರ್ಯವನ್ನು ನಾಶಪಡಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Israel says it struck 200 Hezbollah targets in Lebanon
ಇಸ್ಲಾಮಾಬಾದ್‌ಗೆ ಆಗಮಿಸಿದ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕ್‌ನ ಐದು ಎಫ್-16 ಎಸ್ಕಾರ್ಟ್; Video ನೋಡಿ

ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕ ನಡುವೆ ಶನಿವಾರ ಪ್ರಾರಂಭವಾದ ಮೂರು ದೇಶಗಳ ಮಾತುಕತೆಯಲ್ಲಿ ಹೆಜ್ಬೊಲ್ಲಾ ಮೇಲೆ ಇಸ್ರೇಲಿ ದಾಳಿಗಳನ್ನು ನಿಲ್ಲಿಸುವಂತೆ ಟೆಹ್ರಾನ್ ಒತ್ತಾಯಿಸುತ್ತಿರುವಾಗಲೇ ಇಸ್ರೇಲ್ ಈ ಹೇಳಿಕೆ ನೀಡಿದೆ.

1979 ರ ಇಸ್ಲಾಮಿಕ್ ಕ್ರಾಂತಿಯ ನಂತರ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಅತ್ಯುನ್ನತ ಮಟ್ಟದ ಮುಖಾಮುಖಿ ಮಾತುಕತೆ ಇಂದು ಪಾಕಿಸ್ತಾನದಲ್ಲಿ ನಡೆಯುತ್ತಿದ್ದು, ಇದೊಂದು ಐತಿಹಾಸಿಕ ಕ್ಷಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com