ಹಾರ್ಮುಜ್ ಜಲಸಂಧಿ ನಿಯಂತ್ರಿಸಲು ಬಂದರೆ ಕ್ಷಿಪಣಿ ದಾಳಿ: ಅಮೆರಿಕಾಗೆ ಇರಾನ್ ಕಠಿಣ ಎಚ್ಚರಿಕೆ..!

ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದರೆ, ಸಾವಿರಾರು ಅಮೆರಿಕನ್ ಸೈನಿಕರನ್ನು ಕೈದಿಗಳಾಗಿ ಮಾಡಿಕೊಳ್ಳಲಾಗುವುದು ಮತ್ತು ಪ್ರತಿ ಸೈನಿಕನ ಬಿಡುಗಡೆಗೆ ಒಂದು ಶತಕೋಟಿ ಡಾಲರ್ ಬೇಡಿಕೆ ಇಡಲಾಗುವುದು.
'No port in region will be safe': Iran vows to fight as US announces naval blockade of Hormuz
ಹಾರ್ಮುಜ್ ಜಲಸಂಧಿ
Updated on

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇನ್ನಷ್ಟು ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕಾಗೆ ಇರಾನ್ ಮತ್ತೊಂದು ಕಠಿಣ ಎಚ್ಚರಿಕೆ ನೀಡಿದೆ.

ಅಮೆರಿಕಾ ಹಾರ್ಮುಜ್ ಜಲಸಂಧಿಯನ್ನು (Strait of Hormuz) ನಿಯಂತ್ರಿಸಲು ಮುಂದಾದರೆ ಅಮೆರಿಕದ ನೌಕೆಗಳನ್ನು ಕ್ಷಿಪಣಿಗಳ ಮೂಲಕ ಹೊಡೆದುರುಳಿಸುತ್ತೇವೆಂದು ಎಚ್ಚರಿಕೆ ನೀಡಿದೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಮಿಲಿಟರಿ ಸಲಹೆಗಾರರಾದ ಮೊಹ್ಸನ್ ರೆಜೈ ಅಮೆರಿಕಾಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯನ್ನು (Strait of Hormuz) ನಿಯಂತ್ರಿಸಲು ಅಮೆರಿಕಾ ಮುಂದಾಗಿದ್ದೇ ಆದರೆ, ಅವರ ನೌಕೆಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸುವುದಾಗಿ ಗುಡುಗಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾರ್ಮುಜ್ ಜಲಸಂಧಿಯ ಪೊಲೀಸ್ ಆಗಲು ಯತ್ನಿಸುತ್ತಿದ್ದಾರೆ. ಇದು ನಿಜವಾಗಿಯೂ ಅವರ ಕೆಲಸವೇ?” ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ, “ಅಮೆರಿಕಾ ಹಡಗುಗಳು ನಮ್ಮ ಕ್ಷಿಪಣಿಗಳಿಗೆ ಗುರಿಯಾಗುತ್ತವೆ. ನಾವು ಅವುಗಳನ್ನು ಸುಲಭವಾಗಿ ನಾಶ ಮಾಡಬಹುದು” ಎಂದು ಅವರು ಸ್ಪಷ್ಟವಾಗಿ ಎಚ್ಚರಿಕೆ ನೀಡಿದ್ದಾರೆ.

'No port in region will be safe': Iran vows to fight as US announces naval blockade of Hormuz
ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನರಕ ಸೃಷ್ಟಿಸುತ್ತೇವೆ: ಅಮೆರಿಕಾ ಬೆದರಿಕೆಗೆ ಕ್ಯಾರೆ ಎನ್ನದ ಇರಾನ್; ಇಸ್ರೇಲ್-ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿ..!

ಒಂದು ವೇಳೆ ಅಮೆರಿಕವು ಇರಾನ್ ಭೂಮಿ ಮೇಲೆ ದಾಳಿ ನಡೆಸಿದರೆ, ಸಾವಿರಾರು ಅಮೆರಿಕನ್ ಸೈನಿಕರನ್ನು ಕೈದಿಗಳಾಗಿ ಮಾಡಿಕೊಳ್ಳಲಾಗುವುದು ಮತ್ತು ಪ್ರತಿ ಸೈನಿಕನ ಬಿಡುಗಡೆಗೆ ಒಂದು ಶತಕೋಟಿ ಡಾಲರ್ ಬೇಡಿಕೆ ಇಡಲಾಗುವುದು ಎಂದು ಹೇಳಿದ್ದಾರೆ.

ಇದೇ ವೇಳೆ, ಪ್ರಸ್ತುತ ಜಾರಿಯಲ್ಲಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಲು ನಾವು ವೈಯಕ್ತಿಕವಾಗಿ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.

ಮೊಹ್ಸನ್ ರೆಜೈ ಅವರು ಇರಾನ್‌ನ ಪ್ರಭಾವಿ ಸೇನಾ ನಾಯಕರಲ್ಲಿ ಒಬ್ಬರಾಗಿದ್ದು, 1981ರಿಂದ 1997ರವರೆಗೆ ರೆವಲ್ಯೂಷನರಿ ಗಾರ್ಡ್ಸ್ ಮುಖ್ಯಸ್ಥರಾಗಿದ್ದರು. ಇತ್ತೀಚೆಗೆ ಮೊಜ್ತಾಬಾ ಖಮೇನಿ ಅವರ ಸೈನಿಕ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ.

ಇತ್ತೀಚಿನ ವಾರಗಳಲ್ಲಿ ನಡೆದ ಯುದ್ಧದ ಹಿನ್ನೆಲೆಯಲ್ಲಿ, ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟವನ್ನು ಅಡ್ಡಿಪಡಿಸಿರುವುದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕಾ ಈ ಪ್ರಮುಖ ಜಲಮಾರ್ಗದಲ್ಲಿ ಸೈನಿಕ ನಿಯಂತ್ರಣ ಸ್ಥಾಪಿಸಲು ಯತ್ನಿಸುತ್ತಿದೆ ಎಂಬ ವರದಿಗಳು ಕೇಳಿ ಬಂದಿವೆ. ಇದರ ನಡುವೆಯೇ ಈ ಬೆದರಿಕೆ ಹೊರಬಿದ್ದಿದೆ. ಸದ್ಯ ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಿರುವ ಉಭಯ ರಾಷ್ಟ್ರಗಳ ನಡುವೆ ಶಾಂತಿ ಒಪ್ಪಂದ ಜಾರಿಯಲ್ಲಿದ್ದರೂ ಉದ್ವಿಗ್ನತೆ ಇನ್ನೂ ಕಡಿಮೆಯಾಗಿಲ್ಲ.

ಈ ನಡುವೆ, ಯುದ್ಧ ಆರಂಭವಾದ ನಂತರ ಅಮೆರಿಕಾ ಮತ್ತು ಇರಾನ್ ನಡುವೆ ನಡೆದ ಮೊದಲ ಮಾತುಕತೆ ಪಾಕಿಸ್ತಾನದಲ್ಲಿ ನಡೆದಿದ್ದು, ಅದನ್ನು ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಗಾಲಿಬಾಫ್ ಮುನ್ನಡೆಸಿದ್ದರು.

ಒಟ್ಟಾರೆ, ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಪರಿಸ್ಥಿತಿ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಯಾವುದೇ ಸಣ್ಣ ಉದ್ವಿಗ್ನತೆಯೂ ಜಾಗತಿಕ ಮಟ್ಟದಲ್ಲಿ ದೊಡ್ಡ ಪರಿಣಾಮ ಉಂಟುಮಾಡುವ ಸಾಧ್ಯತೆ ಇದೆ. ವಿಶೇಷವಾಗಿ ಇಂಧನ ಸರಬರಾಜು ಮತ್ತು ತೈಲ ಬೆಲೆಗಳ ಮೇಲೆ ಇದರ ನೇರ ಪರಿಣಾಮ ಬೀಳುವ ಭೀತಿ ಮುಂದುವರಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com