ಇರಾನ್ ವಿರುದ್ಧ ಮತ್ತೆ ಹೊಸದಾಗಿ ಯುದ್ಧ ಆರಂಭಿಸಲು ಇಸ್ರೇಲ್ ತಯಾರಿ!

ಇಸ್ರೇಲ್ ರಕ್ಷಣಾ ಪಡೆಗಳು "ಖಮೇನಿ ಕುಟುಂಬ ನಿರ್ಮೂಲನೆಯನ್ನು ಪೂರ್ಣಗೊಳಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿವೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಜೆರುಸಲೆಂ: ಇರಾನ್ ವಿರುದ್ಧ ಮಿಲಿಟರಿ ಕ್ರಮವನ್ನು ಹೆಚ್ಚಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಆದರೆ ಮುಂದಿನ ಕಾರ್ಯಾಚರಣೆ ಮುಂದುವರಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಹೇಳಲಾಗಿದೆ.

ಗುರುವಾರ ನಡೆದ ಭದ್ರತಾ ಮೌಲ್ಯಮಾಪನದ ಸಂದರ್ಭದಲ್ಲಿ, ಇಸ್ರೇಲ್ ಮಿಲಿಟರಿ ವಿಸ್ತೃತ ಕಾರ್ಯಾಚರಣೆಗಳಿಗೆ ಸಜ್ಜಾಗಿದೆ. ಇರಾನ್ ವಿರುದ್ಧ ಹೊಸದಾದ ಯುದ್ಧ ನಡೆಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಅವರು ಹೇಳಿದರು.

ಇಸ್ರೇಲ್ ರಕ್ಷಣಾ ಪಡೆಗಳು ಖಮೇನಿ ಕುಟುಂಬ ನಿರ್ಮೂಲನೆಯನ್ನು ಪೂರ್ಣಗೊಳಿಸಲು ಅಮೆರಿಕದ ಒಪ್ಪಿಗೆಗಾಗಿ ಕಾಯುತ್ತಿವೆ ಎಂದು ಜೆರುಸಲೆಂ ಪೋಸ್ಟ್‌ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Casual Images
ಭಾರತ-ಚೀನಾ 'ನಾಗರಿಕತೆಯ ತೊಟ್ಟಿಲುಗಳು'; ನಿಜವಾದ ನರಕಕೂಪ ನಿಮ್ಮದೇ: ಟ್ರಂಪ್'ಗೆ ಇರಾನ್ ತಿರುಗೇಟು

ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಕ್ರಮದ ಸಿದ್ಧತೆ ಕುರಿತು ಮಾಹಿತಿ ನೀಡಲಾಗಿದ್ದು, IDF ರಕ್ಷಣೆ ಮತ್ತು ದಾಳಿ ಎರಡಕ್ಕೂ ಸಿದ್ಧವಾಗಿದ್ದು, ಗುರಿಗಳನ್ನು ಗುರುತಿಸಲಾಗಿದೆ. ಇರಾನ್‌ನ ಆಂತರಿಕ ಭದ್ರತೆ ಕುರಿತು ಪ್ರತಿಕ್ರಿಯಿಸಿದ ಕ್ಯಾಟ್ಜ್, ಇರಾನ್‌ನಲ್ಲಿನ ಭಯೋತ್ಪಾದಕ ಆಡಳಿತ ಮುಖ್ಯವಾಗಿ ಕ್ರಾಂತಿಕಾರಿ ಗಾರ್ಡ್‌ಗಳು ಜನರ ಆಂತರಿಕ ದಮನದಲ್ಲಿ ಪರಿಣತಿ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಇರಾನ್ ಆರ್ಥಿಕ ದಬ್ಬಾಳಿಕೆ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದು, ಜಾಗತಿಕ ತೈಲ ಬೆಲೆಗಳನ್ನು ಹೆಚ್ಚಿಸುವ ಬೆದರಿಕೆಯೊಂದಿಗೆ ಇಂಧನ ಸುಲಿಗೆ ಮಾಡುತ್ತಿದೆ ಎಂದು ಕಿಡಿಕಾರುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com