ಭಾರತ–ಚೀನಾ “ನಾಗರಿಕತೆಯ ತೊಟ್ಟಿಲುಗಳು', ನಿಜವಾದ ನರಕಕೂಪ ನಿಮ್ಮದೇ: ಟ್ರಂಪ್'ಗೆ ಇರಾನ್ ತಿರುಗೇಟು

ಭಾರತ ಮತ್ತು ಚೀನಾ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ತೊಟ್ಟಿಲುಗಳು. ಇಂತಹ ರಾಷ್ಟ್ರಗಳನ್ನು ಅವಮಾನಿಸುವುದು ಅಸಮರ್ಥ ಮತ್ತು ಅಜ್ಞಾನಪೂರ್ಣ ನಡೆ.
Donald Trump- Iran's Supreme leader
ಡೊನಾಲ್ಡ್ ಟ್ರಂಪ್- ಇರಾನ್ ನ ಸರ್ವೋಚ್ಛ ನಾಯಕ online desk
Updated on

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನ್ಮಸಿದ್ಧ ಪೌರತ್ವ ಕುರಿತು ಹಂಚಿಕೊಂಡಿದ್ದ ವಿಡಿಯೋವೊಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಟ್ರಂಪ್ ಹೇಳಿಕೆ ಸಂಬಂಧ ಇರಾನ್ ಕೂಡ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇರಾನ್ ಭಾರತ ಮತ್ತು ಚೀನಾವನ್ನು “ನಾಗರಿಕತೆಯ ತೊಟ್ಟಿಲುಗಳು” ಎಂದು ಹೊಗಳಿದ್ದು, ಇಂತಹ ದೇಶಗಳನ್ನು ಅವಮಾನಿಸುವ ಹೇಳಿಕೆಗಳು ಅಸಮರ್ಪಕ ಮತ್ತು ಇತಿಹಾಸ ವಿರೋಧಿ ಎಂದು ಹೇಳಿದೆ.

ಇರಾನ್‌ನ ಹೈದರಾಬಾದ್ ಕಾನ್ಸುಲೇಟ್ ಜನರಲ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಭಾರತ ಮತ್ತು ಚೀನಾ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಾಗರಿಕತೆಯ ತೊಟ್ಟಿಲುಗಳು. ಇಂತಹ ರಾಷ್ಟ್ರಗಳನ್ನು ಅವಮಾನಿಸುವುದು ಅಸಮರ್ಥ ಮತ್ತು ಅಜ್ಞಾನಪೂರ್ಣ ನಡೆ ಎಂದು ಟೀಕಿಸಿದ್ದಾರೆ.

ಅಲ್ಲದೆ, ನಿಜವಾದ ನರಕದ ಕೂಪ ಇರುವುದು ಇರಾನ್‌ನ ನಾಗರಿಕತೆಯನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ ಯುದ್ಧಾಪರಾಧಿ ಅಧ್ಯಕ್ಷರ ಬಳಿ ಎಂದು ಹೇಳಿದ್ದಾರೆ.

Donald Trump- Iran's Supreme leader
ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

ಮುಂಬೈಯಲ್ಲಿರುವ ಇರಾನ್ ರಾಯಭಾರಿ ಅಧಿಕಾರಿ ಕೂಡ ಭಾರತದ ಸಂಸ್ಕೃತಿ, ಪರಂಪರೆ ಮತ್ತು ವೈವಿಧ್ಯತೆಯನ್ನು ಹೊಗಳುವ ವಿಡಿಯೋ ಹಂಚಿಕೊಂಡಿದ್ದಾರೆ,

ಅಲ್ಲದೆ, ಭಾರತಕ್ಕೆ ಬಂದು ಇಲ್ಲಿನ ಸಂಸ್ಕೃತಿಯನ್ನು ನೋಡುವಂತೆಯೂ ಟ್ರಂಪ್ ಅವರಿಗೆ ಆಹ್ವಾನ ನೀಡಿದ್ದು, “ಕಬಿ ಇಂಡಿಯಾ ಆಕೆ ದೇಖೋ, ಫಿರ್ ಬೋಲ್ನಾ” ಎಂದು ಹೇಳಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' (Truth Social) ಖಾತೆಯಲ್ಲಿ ವಿವಾದಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಅದರಲ್ಲಿ ಭಾರತ ಮತ್ತು ಚೀನಾವನ್ನು "ನರಕದ ಕೂಪಗಳೆಂದು" ಎಂದು ಸಂಬೋಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com