ಭೀಕರ ಅವಘಡ: ರಷ್ಯಾ-ಚೀನಾ ನಡುವಿನ 10 ಶತಕೋಟಿ ಡಾಲರ್ ಮೌಲ್ಯದ 'ಗ್ಯಾಸ್ ಕಾಂಪ್ಲೆಕ್ಸ್' ಬೆಂಕಿಗಾಹುತಿ; 7 ಮಂದಿ ಸಾವು, Video

ಈ ಘಟನೆಯಲ್ಲಿ ಆರು ಚೀನೀ ಪ್ರಜೆಗಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಘಟಕದ ಆಡಳಿತ ಮಂಡಳಿ ತಿಳಿಸಿದೆ.
Russia-China Gas Complex
ಗ್ಯಾಸ್ ಕಾಂಪ್ಲೆಕ್ಸ್' ಬೆಂಕಿಗಾಹುತಿ
Updated on: 

ಅಮೂರ್ : ರಷ್ಯಾದ ಪೂರ್ವ ಭಾಗದಲ್ಲಿರುವ 'ಅಮೂರ್ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್' (AGCC) ನಲ್ಲಿ ಭಾರಿ ಬೆಂಕಿ ಅವಘಡ ಮತ್ತು ಸ್ಫೋಟ ಸಂಭವಿಸಿದೆ. ಈ ಘಟಕ ಶೀಘ್ರದಲ್ಲೇ ಕಾರ್ಯಾರಂಭ ಮಾಡಲು ಸಿದ್ಧವಾಗುತ್ತಿತ್ತು ಮತ್ತು ಪ್ರಸ್ತುತ ಪೂರ್ವ-ಕಾರ್ಯಾರಂಭದ (pre-commissioning) ಹಂತದ ಕೆಲಸಗಳು ನಡೆಯುತ್ತಿದ್ದವು.

ಈ ಘಟನೆಯಲ್ಲಿ ಆರು ಚೀನೀ ಪ್ರಜೆಗಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಮತ್ತು ಒಂಬತ್ತು ಮಂದಿ ನಾಪತ್ತೆಯಾಗಿದ್ದಾರೆ ಎಂದು ಘಟಕದ ಆಡಳಿತ ಮಂಡಳಿ ತಿಳಿಸಿದೆ. ರಾಯಿಟರ್ಸ್ ವರದಿಯ ಪ್ರಕಾರ, ಗಾಯಗೊಂಡಿದ್ದ 152 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ 36 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ದೊಡ್ಡ ಕೈಗಾರಿಕಾ ಘಟಕವೊಂದರಲ್ಲಿ ಭೀಕರ ಬೆಂಕಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟಕದಿಂದ ಭಾರಿ ಜ್ವಾಲೆಗಳು ಹೊರಹೊಮ್ಮುತ್ತಿರುವುದನ್ನು ಮತ್ತು ಆಕಾಶದೆತ್ತರದ ದಟ್ಟವಾದ ಕಪ್ಪು ಹೊಗೆಯನ್ನು ಕಾಣಬಹುದು. ಘಟಕದ ಹಲವು ಭಾಗಗಳು ಬೆಂಕಿಗೆ ಆಹುತಿಯಾಗಿರುವಂತೆ ತೋರುತ್ತಿದೆ.

ಈ ಅಮೂರ್ ಸಂಕೀರ್ಣವು ರಷ್ಯಾದ ಪೆಟ್ರೋಕೆಮಿಕಲ್ ಕಂಪನಿ 'ಸಿಬೂರ್' (Sibur) ಮತ್ತು ಚೀನಾದ ಸರ್ಕಾರಿ ಸ್ವಾಮ್ಯದ ತೈಲ ಹಾಗೂ ಅನಿಲ ದೈತ್ಯ ಕಂಪನಿ 'ಸಿನೋಪೆಕ್' (Sinopec) ನಡುವಿನ ಜಂಟಿ ಉದ್ಯಮವಾಗಿದೆ. ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ನಿರ್ಮಾಣ ಕಾರ್ಯದ ಹಂತದಲ್ಲಿ ಸುಮಾರು 30,000 ನಿರ್ಮಾಣ ಕಾರ್ಮಿಕರು ಈ ಯೋಜನೆಯಲ್ಲಿ ತೊಡಗಿಸಿಕೊಂಡಿದ್ದರು.

ರಷ್ಯಾದ ಅಮೂರ್ ಪ್ರದೇಶದ ಸ್ವೊಬೊಡ್ನಿ (Svobodny) ಪಟ್ಟಣದ ಬಳಿ AGCC ಅನ್ನು ನಿರ್ಮಿಸಲಾಗುತ್ತಿದೆ. 'ಮಾಸ್ಕೋ ಟೈಮ್ಸ್' ಪ್ರಕಾರ, ಇದು ಸುಮಾರು 10 ಶತಕೋಟಿ ಡಾಲರ್ ಮೌಲ್ಯದ ಯೋಜನೆಯಾಗಿದ್ದು, ಪಾಲಿಥಿಲೀನ್ ಮತ್ತು ಪಾಲಿಪ್ರೊಪಿಲೀನ್ ಉತ್ಪಾದನೆಗೆ ವಿಶ್ವದ ಅತಿದೊಡ್ಡ ಘಟಕಗಳಲ್ಲಿ ಒಂದಾಗುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ.

ಹತ್ತಿರದಲ್ಲಿರುವ 'ಅಮೂರ್ ಗ್ಯಾಸ್ ಸಂಸ್ಕರಣಾ ಘಟಕ'ದಿಂದ (Amur GPP) ಬರುವ ಕಚ್ಚಾ ವಸ್ತುಗಳನ್ನು ಸಂಸ್ಕರಿಸಿ, ಪ್ಲಾಸ್ಟಿಕ್ ತಯಾರಿಕೆಗೆ ಬೇಕಾದ ಕಚ್ಚಾ ಸಾಮಗ್ರಿಗಳಾಗಿ ಪರಿವರ್ತಿಸುವ ಉದ್ದೇಶದಿಂದ ಈ ಸಂಕೀರ್ಣವನ್ನು ವಿನ್ಯಾಸಗೊಳಿಸಲಾಗಿದೆ.

ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಿದ ನಂತರ, ಈ ಸಂಕೀರ್ಣವು ವಾರ್ಷಿಕವಾಗಿ ಸುಮಾರು 2.3 ದಶಲಕ್ಷ ಟನ್ ಪಾಲಿಥಿಲೀನ್ ಮತ್ತು 400,000 ಟನ್ ಪಾಲಿಪ್ರೊಪಿಲೀನ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ.

Russia-China Gas Complex
ಚೀನಾದ ಶೂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ: 28 ಮಂದಿ ಸಜೀವ ದಹನ; ಜೀವ ಉಳಿಸಿಕೊಳ್ಳಲು ಪರದಾಟ, ಭಯಾನಕ Video!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com