ಪಶ್ಚಿಮ ಏಷ್ಯಾ ಸಂಘರ್ಷಕ್ಕೆ ಬಿಗ್ ಟ್ವಿಸ್ಟ್: ಯುದ್ಧಕ್ಕೆ ಧುಮುಕಿತ್ತು UAE; ಇರಾನ್ ಮೇಲೆ ರಹಸ್ಯ ದಾಳಿ

ಇರಾನ್ ಈ ದಾಳಿಯನ್ನು ಶತ್ರುಗಳ ದಾಳಿ ಎಂದು ಭಾವಿಸಿತ್ತು ಮತ್ತು ನಂತರ ಪ್ರತೀಕಾರವಾಗಿ ಯುಎಇ ಹಾಗೂ ಕುವೈತ್ ವಿರುದ್ಧ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತ್ತು.
West Asia conflict: UAE carried out covert strikes on Iran
ಸಾಂದರ್ಭಿಕ ಚಿತ್ರ
Updated on

ಪಶ್ಚಿಮ ಏಷ್ಯಾ ಸಂಘರ್ಷ ಮತ್ತೊಂದು ತಿರುವು ಪಡೆದುಕೊಂಡಿದ್ದು, ಇತ್ತೀಚೆಗೆ ನಡೆದ ಸಂಘರ್ಷದ ಸಂದರ್ಭದಲ್ಲಿ ಯಾವುದೇ ಮಿಲಿಟರಿ ಭಾಗವಹಿಸುವಿಕೆಯನ್ನು ತಿರಸ್ಕರಿಸಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ) ಇದೀಗ ಇರಾನ್ ಮೇಲೆ ರಹಸ್ಯ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಈ ಮೂಲಕ ಗಲ್ಫ್ ರಾಜಪ್ರಭುತ್ವ ಯುದ್ಧಕ್ಕೆ ಧುಮುಕಿದೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

WSJ ವರದಿಯ ಪ್ರಕಾರ, ಏಪ್ರಿಲ್ ಆರಂಭದಲ್ಲಿ ಪರ್ಷಿಯನ್ ಕೊಲ್ಲಿಯಲ್ಲಿರುವ ಇರಾನ್‌ನ ಲಾವನ್ ದ್ವೀಪದಲ್ಲಿರುವ ಸಂಸ್ಕರಣಾಗಾರದ ಮೇಲೆ ದಾಳಿ ಸೇರಿದಂತೆ ಹಲವು ದಾಳಿಗಳನ್ನು ಯುಎಇ ನಡೆಸಿದೆ. ಅದೇ ಸಮಯದಲ್ಲಿ ಇಸ್ಲಾಮಿಕ್ ಗಣರಾಜ್ಯದ ವಿರುದ್ಧ ಐದು ವಾರಗಳ ಮಿಲಿಟರಿ ಕಾರ್ಯಾಚರಣೆಯ ನಂತರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಘೋಷಿಸಿದರು.

ಈ ದಾಳಿಯು ಸಂಸ್ಕರಣಾಗಾರದಲ್ಲಿ ದೊಡ್ಡ ಬೆಂಕಿಯನ್ನು ಉಂಟುಮಾಡಿತು ಮತ್ತು ಹಲವಾರು ತಿಂಗಳುಗಳ ಕಾಲ ಅದರ ಕಾರ್ಯಾಚರಣೆಯ ಸಾಮರ್ಥ್ಯವನ್ನು ಕುಗ್ಗಿಸಿತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

West Asia conflict: UAE carried out covert strikes on Iran
ಪಶ್ಚಿಮ ಏಷ್ಯಾ ಸಂಘರ್ಷ: ಇರಾನ್ ಜೊತೆಗಿನ ಶಾಂತಿ ಮಾತುಕತೆಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನಕ್ಕೆ ಪ್ರಯಾಣ?

ಆ ಸಮಯದಲ್ಲಿ ಇರಾನ್ ಈ ದಾಳಿಯನ್ನು ಶತ್ರುಗಳ ದಾಳಿ ಎಂದು ಭಾವಿಸಿತ್ತು ಮತ್ತು ನಂತರ ಪ್ರತೀಕಾರವಾಗಿ ಯುಎಇ ಹಾಗೂ ಕುವೈತ್ ವಿರುದ್ಧ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸಿತ್ತು.

ಯುಎಇ ತಾನು ಇರಾನ್ ಮೇಲೆ ದಾಳಿಗಳನ್ನು ನಡೆಸಿದ್ದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿಲ್ಲವಾದರೂ, ಅದರ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ದೇಶದ ಮಿಲಿಟರಿ ಸೇರಿದಂತೆ ಪ್ರತಿಕೂಲ ಕೃತ್ಯಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಹೊಂದಿರುವುದಾಗಿ ಪ್ರತಿಪಾದಿಸಿದೆ ಎಂದು WSJ ವರದಿ ಹೇಳಿದೆ.

ಆರೋಪಗಳ ಕುರಿತು ಪ್ರತಿಕ್ರಿಯಿಸಲು ಪೆಂಟಗನ್ ನಿರಾಕರಿಸಿದೆ. ಆದರೆ ಶ್ವೇತಭವನವು ಯುಎಇಯ ಒಳಗೊಳ್ಳುವಿಕೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com