ಭಾರತದ ಕನಸು ನನಸು: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಮತ್ತೊಮ್ಮೆ ಭಾರತದ ಕನಸು ನನಸಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಇನ್ನು ಎರಡು ವರ್ಷಗಳ ಅವಧಿಗೆ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭಾರತ ಆಯ್ಕೆಯಾಗಿದೆ.
ಭಾರತೀಯ ಸೈನಿಕರ 'ಆಕ್ರಮಣಶೀಲತೆ, ಲಜ್ಜೆಗೇಡಿತನ' ಗಾಲ್ವಾನ್ ಸಂಘರ್ಷಕ್ಕೆ ಕಾರಣ: ಚೀನಾ ವಿದೇಶಾಂಗ ಸಚಿವ ವಾಂಗ್ ಯೀಗಾಲ್ವಾನ್ ಸಂಘರ್ಷಕ್ಕೆ ಭಾರತೀಯ ಸೈನಿಕರ ಆಕ್ರಮಣಶೀಲತೆಯೇ ಕಾರಣ. ಉಭಯ ದೇಶಗಳ ನಡುವೆ ಶಾಂತಿ ಮಾತುಕತೆ ಚಾಲ್ತಿಯಲ್ಲಿರುವಾಗಲೇ ಸೈನಿಕರು ಲಜ್ಜೆಗೆಟ್ಟವರಂತೆ ವರ್ತಿಸಿದ್ದಾರೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯೀ ಹೇಳಿದ್ದಾರೆ.
ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ: ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಿಗೆ ಒಂದೇ ಹೆಜ್ಜೆ ಬಾಕಿ!ದಶಕಗಳಿಂದಲೂ ಮರೀಚಿಕೆಯಾಗಿದ್ದ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಸೇರುವ ಭಾರತದ ಕನಸು ನನಸಾಗುವ ಮತ್ತೊಂದು ಅಪೂರ್ವ ಅವಕಾಶ ಒದಗಿ ಬಂದಿದ್ದು, 2021–22ನೇ ಸಾಲಿನ ಖಾಯಂ ಅಲ್ಲದ ಸದಸ್ಯ ದೇಶಗಳ ಆಯ್ಕೆಗೆ ಚುನಾವಣೆ ಘೋಷಣೆಯಾಗಿದೆ.
ಕೊರೋನಾದಿಂದ ರಷ್ಯಾ ಅಧ್ಯಕ್ಷ ಪುಟಿನ್ ರಕ್ಷಣೆಗೆ ಡಿಸಿನ್ಫೆಕ್ಷನ್ ಸುರಂಗ ನಿರ್ಮಾಣ..!ರಷ್ಯಾದಲ್ಲಿ ಕೊರೊನಾ ವೈರಸ್ ಭಯ ಭೀತಿ ಸೃಷ್ಟಿಸಿರುವ ಹಿನ್ನಲೆಯಲ್ಲಿ ದೇಶದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಸೋಂಕು ತಗುಲದಂತೆ ಪ್ರತ್ಯೇಕ ಡಿಸ್ ಇನ್ ಫೆಕ್ಷನ್ ಸುರಂಗವೊಂದನ್ನು ವ್ಯವಸ್ಥೆ ಮಾಡಲಾಗಿದೆ ಎಂದು ರಷ್ಯ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲಡಾಕ್ ನ ಗಲ್ವಾನ್ ಕಣಿವೆ ಯಾವತ್ತಿಗೂ ನಮಗೆ ಸೇರಿದ್ದು: ಚೀನಾ ಪ್ರತಿಪಾದನೆಪೂರ್ವ ಲಡಾಕ್ ನ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರ ಮಧ್ಯೆ ನಡೆದ ಘರ್ಷಣೆ, ಅದರಲ್ಲಿ ಅನೇಕ ಯೋಧರ ಬಲಿದಾನದ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.
ವಿಶ್ವದಾದ್ಯಂತ ಕೊರೋನಾ ರಣಕೇಕೆ: 80 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 4.34 ಲಕ್ಷ ಮಂದಿ ಸಾವುವಿಶ್ವದಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ ಇದೀಗ 80 ಲಕ್ಷಯತ್ತ ಸಾಗುತ್ತಿದೆ. ಅಲ್ಲದೆ, 4.34 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ.
ಭಾರತ-ಚೀನಾ ಗಡಿ ಸಂಘರ್ಷವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ: ಅಮೆರಿಕಭಾರತ ಮತ್ತು ಚೀನಾ ಸೇನಾಪಡೆಗಳಿಂದ ಪೂರ್ವ ಲಡಾಕ್ ನ ಗಲ್ವಾನ್ ಕಣಿವೆಯಲ್ಲಿ ಘರ್ಷಣೆ ನಡೆದು ಎರಡೂ ದೇಶಗಳ ಸೈನಿಕರು ಹುತಾತ್ಮರಾಗಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಪ್ರತಿಕ್ರಿಯಿಸಿದ ಅಮೆರಿಕ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ ಎಂದು ಹೇಳಿದೆ.
ಭಾರತೀಯ ರಾಯಭಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ: ಆರೋಪ ನಿರಾಕರಿಸಿದ ಪಾಕಿಸ್ತಾನಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನು ಅಪಹರಿಸಿ, ಅವರ ಮೇಲೆ ದೌರ್ಜನ್ಯ ನಡೆಸಿದ ಭಾರತದ ಆರೋಪವನ್ನು ಪಾಕಿಸ್ತಾನ ಬುಧವಾರ ನಿರಾಕರಿಸಿದೆ.
ರಷ್ಯಾದಲ್ಲಿ ಕೋವಿಡ್ -19 ಲಸಿಕೆ ಮಾನವರ ಮೇಲೆ ಪರೀಕ್ಷಿಸಲು ಸಿದ್ಧತೆರಷ್ಯಾದಲ್ಲಿ, ಕೊರೊನಾ ವೈರಸ್ (ಕೋವಿಡ್ -19) ಲಸಿಕೆಯನ್ನು ಕೆಲವೇ ದಿನಗಳಲ್ಲಿ ಮಾನವರ ಮೇಲೆ ಪರೀಕ್ಷಿಸಲಾಗುವುದು.
ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ, ರೋಗಿಯ ಜೀವ ಉಳಿಸಬಲ್ಲ ಔಷಧಿ ಲಭ್ಯಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು, ಅತ್ಯಂತ ಗಂಭೀರವಾದ ಕೊವಿಡ್-19 ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ.
ಅಮೆರಿಕಾದಲ್ಲಿ ಬೃಹತ್ ಹಿಂದೂ ದೇವರ ವಿಗ್ರಹ! ಡೆಲಿವೇರ್ ನಲ್ಲಿ 25 ಅಡಿ ಹನುಮಂತನ ಪ್ರತಿಮೆ ಸ್ಥಾಪನೆ25 ಅಡಿ ಎತ್ತರದ ಬೃಹತ್ ಹನುಮಂತನ ಪ್ರತಿಮೆಯನ್ನು ಡೆಲವೇರ್ ನ ಹಾಕೆಸ್ಸಿನ್ ನಲ್ಲಿ ಪ್ರತಿಷ್ಠಾಪಿಸಲಾಗಿದೆ. “ಇದರ ತೂಕ ಸುಮಾರು 45 ಟನ್. ಇದನ್ನು ತೆಲಂಗಾಣದ ವಾರಂಗಲ್ ನಿಂದ ಡೆಲವೇರ್ ಗೆ ತರಲಾಗಿದೆ" ಎಂದು ಈ ಪ್ರಾಂತ್ಯದ ಹಿಂದೂ ದೇವಾಲಯ ಅಸೋಸಿಯೇಶನ್ನ ಅಧ್ಯಕ್ಷ ಪತಿಬಂದ ಶರ್ಮಾ ಹೇಳಿದ್ದಾರೆ.
ವಿಶ್ವಾದ್ಯಂತ ಐವರಲ್ಲಿ ಒಬ್ಬರಿಗೆ ಕೋವಿಡ್ ಅಪಾಯ ಕಟ್ಟಿಟ್ಟ ಬುತ್ತಿ: ಅಧ್ಯಯನ ವರದಿಜಾಗತಿಕವಾಗಿ ಐವರಲ್ಲಿ ಒಬ್ಬರಿಗೆ ದೈಹಿಕ ಆರೋಗ್ಯ ದೌರ್ಬಲ್ಯವಿದ್ದು ಇದು ಅವರನ್ನು ಕೋವಿಡ್-19 ನಂತಹಾ ಅಪಾಯ ತೀವ್ರವಾಗಿ ಬಾಧಿಸುವಂತೆ ಮಾಡಿದೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಈ ಅಧ್ಯಯನವು ಆರೋಗ್ಯದಲ್ಲಿ ಹೆಚ್ಚಿನ ತೊಂದರೆ ಹೊಂದಿರುವವರಿಗೆ ರಕ್ಷಣೆ ಒದಗಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಕೋವಿಡ್-19: ವಿಶ್ವದಾದ್ಯಂತ 4 ಲಕ್ಷ 31 ಸಾವಿರ ಜನರ ಸಾವು, 7.8 ಮಿಲಿಯನ್ ಗಡಿ ದಾಟಿದ ಸೋಂಕಿತರ ಸಂಖ್ಯೆಜಗತ್ತಿನಾದ್ಯಂತ ಮಾರಕ ಕೊರೋನಾವೈರಸ್ ಅಟ್ಟಹಾಸ ಮುಂದುವರೆದಿದ್ದು, ಈವರೆಗೂ ಸೋಂಕಿನಿಂದ 4,31000 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 7.8 ಮಿಲಿಯನ್ ಗಡಿ ದಾಟಿದೆ
ಕೋವಿಡ್ 19: ಕೈಗಾರಿಕಾ ಉತ್ಪಾದನೆಯಲ್ಲಿ ಮತ್ತೆ ಪುಟಿದು ನಿಂತ ಚೀನಾ, ಮೇ ತಿಂಗಳಲ್ಲಿ 4.4ಕ್ಕೆ ಏರಿಕೆ!ಕೋವಿಡ್ 19 ಹುಟ್ಟೂರು ಚೀನಾದಲ್ಲಿ ಪ್ರಪಾತಕ್ಕೆ ಕುಸಿದಿದ್ದ ಕೈಗಾರಿಕಾ ಉತ್ಪಾದನೆಯು ಮತ್ತೆ ಏರಿಕೆಯಾಗಿದೆ. ಈ ಮೂಲಕ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವುದರ ಮುನ್ಸೂಚನೆ ನೀಡಿದೆ.
ಕೊರೋನಾ ವಜ್ರಮುಷ್ಠಿಯಲ್ಲಿ ಇಡೀ ವಿಶ್ವ: 70 ಲಕ್ಷ ಗಡಿಯತ್ತ ಸೋಂಕಿತರ ಸಂಖ್ಯೆ, 4.27 ಲಕ್ಷ ಮಂದಿ ಸಾವುವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಕೊರೋನಾ ತನ್ನ ರಣಕೇಕೆಯನ್ನು ಮುಂದುವರೆಸಿದ್ದು, ಸೋಂಕಿತರ ಸಂಖ್ಯೆ 70 ಲಕ್ಷ ಗಡಿದಾಟಿದೆ. ಅಲ್ಲದೆ, 4.27 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ.