ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಾಣಿಜ್ಯ

ತನ್ನ ಇಡೀ ಸಾಮ್ರಾಜ್ಯವನ್ನ ಒಂದೇ ಸೂರಿನಡಿ ತರಲು ಮುಂದಾದ ಮಸ್ಕ್: ಸ್ಪೇಸ್‌ಎಕ್ಸ್-ಟೆಸ್ಲಾ ವಿಲೀನದಿಂದ ಇತಿಹಾಸದ ಅತಿದೊಡ್ಡ ಆಲ್-ಸ್ಟಾಕ್ ಡೀಲ್ ಸಾಧ್ಯತೆ!

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಒಡೆತನದ ಎರಡು ದೈತ್ಯ ಕಂಪನಿಗಳಾದ ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾ ವಿಲೀನಗೊಳ್ಳಲು ಸಿದ್ಧತೆ ನಡೆಸಿದ್ದು, ಇತಿಹಾಸದ ಅತಿದೊಡ್ಡ ಕಾರ್ಪೊರೇಟ್ 'ಆಲ್-ಸ್ಟಾಕ್ ಡೀಲ್' ಆಗಲಿದೆ ಎಂದು ವರದಿಯಾಗಿದೆ. ಆ ಕುರಿತ ವರದಿ ಇಲ್ಲಿದೆ:

ಎಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್-ಟೆಸ್ಲಾ ಬೃಹತ್ ವಿಲೀನಕ್ಕೆ ಸಿದ್ಧತೆ — AI Image
Hruthin H P
Updated On : 25 Nov 2026, 12:59 pm

ಕ್ಯಾಲಿಫೋರ್ನಿಯಾ (ಅಮೆರಿಕ): ವಿಶ್ವದ ಅತ್ಯಂತ ಶ್ರೀಮಂತ ಎಲಾನ್ ಮಸ್ಕ್ ಅವರ ಒಡೆತನದ ಎರಡು ದೈತ್ಯ ಕಂಪನಿಗಳಾದ ಸ್ಪೇಸ್‌ಎಕ್ಸ್ (SpaceX) ಮತ್ತು ಟೆಸ್ಲಾ (Tesla) ಕಂಪನಿಗಳು ವಿಲೀನಗೊಳ್ಳಲು ಮುಂದಾಗಿದ್ದು, ಇದು ಸುಮಾರು 3.2 ರಿಂದ 3.5 ಟ್ರಿಲಿಯನ್ ಡಾಲರ್ ಮೌಲ್ಯದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ 'ಆಲ್-ಸ್ಟಾಕ್ ಡೀಲ್' (All-stock deal) ಒಪ್ಪಂದವಾಗುವ ನಿರೀಕ್ಷೆಯಿದೆ. ಎಲೆಕ್ಟ್ರಿಕ್ ವಾಹನಗಳು, ಬಾಹ್ಯಾಕಾಶ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ರೊಬೊಟಿಕ್ಸ್ ಕ್ಷೇತ್ರಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಈ ಮಹತ್ವದ ಹೆಜ್ಜೆ ಇಡಲಾಗುತ್ತಿದೆ. ಆ ಕುರಿತ ವರದಿ ಇಲ್ಲಿದೆ:

ವಿಲೀನದ ಹಿಂದಿನ ಪ್ರಮುಖ ಉದ್ದೇಶವೇನು?

Advertisement

Advertisement

Also Read

TVS ಕುಟುಂಬದಲ್ಲಿ ಆಸ್ತಿ ವಿವಾದ ಸ್ಫೋಟ: ತಂದೆ ವೇಣು ಶ್ರೀನಿವಾಸ್​ಗೆ ಆಸ್ತಿಯಲ್ಲಿ ಸಮಾನ ಪಾಲು ಕೋರಿ ಪುತ್ರಿ ಲಕ್ಷ್ಮಿ ವೇಣು ನೋಟಿಸ್

ಮಾತುಕತೆಗಾಗಿ ವಿಶೇಷ ಸಮಿತಿಗಳ ರಚನೆ

ಎಲಾನ್ ಮಸ್ಕ್ ಎರಡೂ ಕಂಪನಿಗಳ ಸಿಇಒ ಮತ್ತು ಪ್ರಮುಖ ಷೇರುದಾರರಾಗಿರುವುದರಿಂದ, ಕಾರ್ಪೊರೇಟ್ ನಿಯಮಗಳ ಪ್ರಕಾರ ಅವರು ನೇರವಾಗಿ ಈ ಮಾತುಕತೆಯಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಎರಡೂ ಕಂಪನಿಗಳು ಸ್ವತಂತ್ರ ನಿರ್ದೇಶಕರನ್ನು ಒಳಗೊಂಡ ವಿಶೇಷ ಸಮಿತಿಗಳನ್ನು ಹಾಗೂ ಹೂಡಿಕೆ ಬ್ಯಾಂಕ್‌ಗಳನ್ನು ನೇಮಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement