ಕಪಿಲ್ ದೇವ್ ಐತಿಹಾಸಿಕ ಕ್ಯಾಚ್ ಹಿಡಿದ '83' ಸಿನಿಮಾ ಟೀಸರ್ ಬಿಡುಗಡೆಗೊಳಿಸಿದ ನಟ ರಣ್ ವೀರ್ ಸಿಂಗ್
ವಿಶ್ವಕಪ್ ಪಂದ್ಯದಲ್ಲಿ ಕಪಿಲ್ ದೇವ್ ಅವರು ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿದ ಐತಿಹಾಸಿಕ ಘಟನೆಯ ಸಿನಿಮಾ ದೃಶ್ಯಾವಳಿ.
ಮುಂಬೈ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದ ಘಟನೆಯನ್ನು ಆಧರಿಸಿ ಸಿನಿಮಾ '83' ಸಿದ್ಧಗೊಳ್ಳುತ್ತಿರುವುದು ಕ್ರೀಡಾಭಿಮಾನಿಗಳಿಗೆ ಗೊತ್ತೇ ಇರುತ್ತದೆ.
83 ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರ ನಿರ್ವಹಿಸುತ್ತಿರುವ ರಣ್ ವೀರ್ ಸಿಂಗ್ ಸಿನಿಮಾದ ಟೀಸರ್ ಒಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ವಿಶ್ವಕಪ್ ಪಂದ್ಯದಲ್ಲಿ ಕಪಿಲ್ ದೇವ್ ಅವರು ವೆಸ್ಟ್ ಇಂಡೀಸ್ ಆಟಗಾರ ವಿವಿಯನ್ ರಿಚರ್ಡ್ಸ್ ಅವರ ಕ್ಯಾಚ್ ಹಿಡಿದ ಐತಿಹಾಸಿಕ ಘಟನೆಯ ಸಿನಿಮಾ ದೃಶ್ಯಾವಳಿಯನ್ನು ಟೀಸರ್ ಹೊಂದಿದೆ.
ಇದನ್ನೂ ಓದಿ: 'ಜಿಹಾದಿ ರಾಷ್ಟ್ರ' ಹೇಳಿಕೆ: ತನ್ನ ವಿರುದ್ಧ ಎಫ್‌ಐಆರ್‌ಗೆ ಪ್ರತ್ಯುತ್ತರವಾಗಿ ಹಾಟ್ ಫೋಟೋ ಹಂಚಿಕೊಂಡ ಕಂಗನಾ ರನೌತ್