ಸಟ್ಲುಜ್ ವಿವಾದ ಮತ್ತು ಓಟಿಟಿ 
ಬಾಲಿವುಡ್

Satluj ವಿವಾದ ಬೆನ್ನಲ್ಲೇ OTTಗಳಿಗೆ ಕೇಂದ್ರ ಮೂಗುದಾರ; ZEE5 ವಿರುದ್ಧ ಕಠಿಣ ಕ್ರಮ, CBFC ಪ್ರಮಾಣಪತ್ರ ಕಡ್ಡಾಯ?

ತಿದ್ದುಪಡಿ ಜಾರಿಗೆ ಬಂದರೆ, ಯಾವುದೇ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಮುನ್ನ ಕಡ್ಡಾಯವಾಗಿ ಸಿಬಿಎಫ್‌ಸಿ ಪ್ರಮಾಣಪತ್ರ ಹಾಗೂ ಅನುಮೋದನೆ ಪಡೆಯಬೇಕಾಗುತ್ತದೆ.

ನವದೆಹಲಿ: ತೀವ್ರ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದ್ದ Satluj ಚಿತ್ರವಿವಾದಗಳ ಬೆನ್ನಲ್ಲೇ OTT ಗಳಿಗೆ ಮೂಗುದಾರ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, CBFC ಪ್ರಮಾಣಪತ್ರ ಕಡ್ಡಾಯ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಹೌದು.. ಓಟಿಟಿ (OTT) ವೇದಿಕೆಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೂ ಇನ್ನು ಮುಂದೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (CBFC)ಯ ಪ್ರಮಾಣಪತ್ರ ಕಡ್ಡಾಯಗೊಳಿಸುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಸಟ್ಲುಜ್' ಚಿತ್ರದ ವಿವಾದದ ಬೆನ್ನಲ್ಲೇ ಈ ಮಹತ್ವದ ಕ್ರಮಕ್ಕೆ ಸರ್ಕಾರ ಮುಂದಾಗಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ವರದಿಗಳ ಪ್ರಕಾರ, ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು-2021ಕ್ಕೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ತಿದ್ದುಪಡಿ ಜಾರಿಗೆ ಬಂದರೆ, ಯಾವುದೇ ಸಿನಿಮಾ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗುವ ಮುನ್ನ ಕಡ್ಡಾಯವಾಗಿ ಸಿಬಿಎಫ್‌ಸಿ ಪ್ರಮಾಣಪತ್ರ ಹಾಗೂ ಅನುಮೋದನೆ ಪಡೆಯಬೇಕಾಗುತ್ತದೆ. ಪ್ರಸ್ತುತ ಓಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗುವ ಸಿನಿಮಾಗಳು ಮತ್ತು ವೆಬ್ ಸರಣಿಗಳು ಸಿಬಿಎಫ್‌ಸಿಯ ವ್ಯಾಪ್ತಿಗೆ ಒಳಪಡುತ್ತಿಲ್ಲ.

'ಸಟ್ಲುಜ್' ವಿವಾದದ ನಂತರ ZEE5 ವಿರುದ್ಧ ಕಠಿಣ ಕ್ರಮ

ಇನ್ನು ನಿರ್ದೇಶಕ ಹನಿ ತ್ರೇಹನ್ ನಿರ್ದೇಶನದ 'ಸಟ್ಲುಜ್' ಚಿತ್ರವನ್ನು ಸಿಬಿಎಫ್‌ಸಿ ಪ್ರಮಾಣಪತ್ರವಿಲ್ಲದೆ ZEE5ನಲ್ಲಿ ಬಿಡುಗಡೆ ಮಾಡಲಾಗಿತ್ತು. ನಂತರ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆತಂಕಗಳ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಚಿತ್ರವನ್ನು ವೇದಿಕೆಯಿಂದ ತೆಗೆದುಹಾಕಲಾಗಿತ್ತು.

ಚಿತ್ರ ಬಿಡುಗಡೆಯಾಗುವ ವೇಳೆಯಲ್ಲೇ ಅದು ಸಿಬಿಎಫ್‌ಸಿಯ ಪರಿಶೀಲನೆಯಲ್ಲಿದ್ದು, ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಿತ್ತು ಎನ್ನಲಾಗಿದೆ. ಆದರೂ ಸೆನ್ಸಾರ್ ಆಗದ ಆವೃತ್ತಿಯನ್ನು ZEE5 ಪ್ರಸಾರ ಮಾಡಿರುವ ಹಿನ್ನೆಲೆಯಲ್ಲಿ, ಆ ಮಧ್ಯವರ್ತಿ ವೇದಿಕೆಯ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿ ತಿಳಿಸಿದೆ.

ರಾಜ್ಯ ಸರ್ಕಾರಗಳ ಹೊಣೆ, ಐಟಿ ಕಾಯ್ದೆಯಡಿ ಸರ್ಕಾರಕ್ಕೆ ಅಧಿಕಾರ

ಸಿಬಿಎಫ್‌ಸಿ ಪ್ರಮಾಣಪತ್ರವಿಲ್ಲದೆ ಚಿತ್ರದ ಖಾಸಗಿ ಪ್ರದರ್ಶನ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು, ಇಂತಹ ಕಾನೂನು ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸಂಬಂಧಿತ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು-2021ರ ಭಾಗ-3ರ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ ಓಟಿಟಿ ವಿಷಯವನ್ನು ನಿಯಂತ್ರಿಸುವ ಅಧಿಕಾರವಿದೆ. ಈ ಸೆಕ್ಷನ್ ಅಡಿಯಲ್ಲಿ ದೇಶದ ಸಾರ್ವಭೌಮತೆ, ಏಕತೆ, ರಾಷ್ಟ್ರೀಯ ಭದ್ರತೆ, ರಕ್ಷಣಾ ಹಿತಾಸಕ್ತಿ, ವಿದೇಶಗಳೊಂದಿಗಿನ ಸ್ನೇಹ ಸಂಬಂಧ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಆನ್‌ಲೈನ್ ವಿಷಯವನ್ನು ಸರ್ಕಾರ ನಿರ್ಬಂಧಿಸಬಹುದು ಎಂದು ಹೇಳಿದರು.

ಜುಲೈ 3ರಂದು ಬಿಡುಗಡೆ, 2 ದಿನದಲ್ಲೇ ತೆರವು

'ಸಟ್ಲುಜ್' ಸಿನಿಮಾ ಜುಲೈ 3ರಂದು ZEE5ನಲ್ಲಿ ಬಿಡುಗಡೆಯಾಗಿದ್ದು, ಸರ್ಕಾರದ ಆದೇಶದ ಮೇರೆಗೆ ಜುಲೈ 5ರಂದು ವೇದಿಕೆಯಿಂದ ತೆಗೆದುಹಾಕಲಾಯಿತು. ಚಿತ್ರವು ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತವಾಗಿದೆ. 1984ರಿಂದ 1994ರ ಅವಧಿಯಲ್ಲಿ ಪಂಜಾಬ್‌ನಲ್ಲಿ ಗುರುತು ಪತ್ತೆಯಾಗದ ಸಾವಿರಾರು ಶವಗಳ ಅಂತ್ಯಸಂಸ್ಕಾರ ಪ್ರಕರಣಗಳನ್ನು ಖಲ್ರಾ ತನಿಖೆ ನಡೆಸಿದ್ದರು. ಬಳಿಕ 1995ರಲ್ಲಿ ಅವರನ್ನು ಅಪಹರಿಸಿ ಪೊಲೀಸ್ ಸಿಬ್ಬಂದಿಯೇ ಹತ್ಯೆ ಮಾಡಿದ್ದರು ಎಂಬ ಆರೋಪವಿದೆ.

ಖಾಸಗಿ ಪ್ರದರ್ಶನ

ಅತ್ತ ಕೇಂದ್ರ ಸರ್ಕಾರ ಓಟಿಟಿಯಿಂದ ಚಿತ್ರವನ್ನು ತೆಗೆದುಹಾಕಿದ್ದರೂ, ಪಂಜಾಬ್‌ನ ಹಲವು ಗುರುದ್ವಾರಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ 'ಸಟ್ಲುಜ್' ಚಿತ್ರದ ಖಾಸಗಿ ಪ್ರದರ್ಶನಗಳು ಮುಂದುವರಿದಿವೆ. ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ವಿಚಾರ ರಾಜಕೀಯ ಮಹತ್ವವನ್ನೂ ಪಡೆದುಕೊಂಡಿದೆ.

ನಿಷೇಧ ಮುಂದುವರಿಕೆ

ಇದಕ್ಕೂ ಮುನ್ನ ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿಯು 'ಸಟ್ಲುಜ್' ಚಿತ್ರದ ಕೆಲವು ದೃಶ್ಯಗಳು ಭಾರತದ ಸಾರ್ವಭೌಮತೆ ಮತ್ತು ಏಕತೆಗೆ ವಿರುದ್ಧವಾಗಿವೆ ಎಂದು ಅಭಿಪ್ರಾಯಪಟ್ಟಿದ್ದು, ಓಟಿಟಿ ಸೇರಿದಂತೆ ಸಾರ್ವಜನಿಕ ವೀಕ್ಷಣೆಗೆ ವಿಧಿಸಲಾಗಿರುವ ನಿಷೇಧವನ್ನು ಮುಂದುವರಿಸಬೇಕೆಂದು ಶಿಫಾರಸು ಮಾಡಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕರ್ನಾಟಕ SIR ಅವಧಿ ವಿಸ್ತರಣೆ: BLO ಮನೆಮನೆ ಭೇಟಿಗೆ ಆಗಸ್ಟ್ 8 ಕೊನೆ ದಿನ; 17ರಂದು ಕರಡು ಪಟ್ಟಿ ಪ್ರಕಟಣೆ!

ಧರ್ಮಸ್ಥಳ ಬುರಡೆ ಪ್ರಕರಣ: ಕೊನೆಗೂ ಬೆಳ್ತಂಗಡಿ ನ್ಯಾಯಾಲಯಕ್ಕೆ 7000 ಪುಟಗಳ ಅಂತಿಮ ವರದಿ ಸಲ್ಲಿಸಿದ SIT

ಹಾರ್ಮುಜ್ ಜಲಸಂಧಿಯಲ್ಲಿ ಹಡಗಿನ ಮೇಲೆ ಇರಾನ್ ದಾಳಿ; ಪುಣೆ ಮೂಲದ ಭಾರತೀಯ ನಾವಿಕ ಸಾವು

ಉಪ್ಪಿ ದಾದ ಬೆಡಗಿಗೆ ಸ್ತನ ಕ್ಯಾನ್ಸರ್: ಶಾಕಿಂಗ್ ಪೋಸ್ಟ್ ಹಂಚಿಕೊಂಡ ನಟಿ ಉಮಾ ಶಂಕರಿ; ಹೇಳಿದ್ದೇನು?

'ನಿಮ್ಮ ಅಂತ್ಯ ನೋಡುವವರೆಗೂ ನಾನು ಸಾಯಲ್ಲ': BJP ವಿರುದ್ಧ ದೀದಿ ಗುಡುಗು; 'ಮತ್ತೆ ಶೂನ್ಯದಿಂದ ಪಕ್ಷ ಕಟ್ಟುತ್ತೇನೆ' - Mamata Banerjee