ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಕಲಾವಿದರಿಗೆ ಸೋಷಿಯಲ್ ಮೀಡಿಯಾ ಪ್ರೆಸೆನ್ಸ್ ಅನಿವಾರ್ಯ, ಆದರೆ ಅದೇ ಎಲ್ಲವೂ ಅಲ್ಲ: ನಿಕ್ಕಿ ಗಲ್ರಾನಿ 

ವರ್ಷಕ್ಕೆ ಎರಡೇ ಸಿನಿಮಾಗಳಲ್ಲಿ ನಟಿಸಿದರೂ ಅದು ಒಳ್ಳೆಯದಾಗಿದ್ದರೆ ಸಾಕು ಎನ್ನುವ ಪಾಠವನ್ನು ನಿಕ್ಕಿ ಚಿತ್ರರಂಗದಿಂದ ಕಲಿತಿದ್ದಾರೆ.

ನಿಕ್ಕಿ ಗಲ್ರಾನಿ
Harshavardhan M
Updated On : 7 Dec 2021, 7:43 pm

ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ ಅವರ ಸಹೋದರಿ ನಿಕ್ಕಿ ಗಲ್ರಾನಿ ಅವರು ಮಲಯಾಳಂ ಚಿತ್ರ 1983 ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರ ಹೊಸ ಸಿನಿಮಾ ರಾಜವಂಶಂ ಇತ್ತೀಚಿಗೆ ಬಿಡುಗಡೆ ಕಂಡಿದೆ. 

ಇದನ್ನೂ ಓದಿ: ಯೋಗರಾಜ್ ಭಟ್ 'ಗರಡಿ' ಮನೆಯಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್

ಮೊದಲು ತಾವು ಒಬ್ಬ ಕಲಾವಿದೆಯಾಗಿ ಆದಷ್ಟೂ ಹೆಚ್ಚಿನ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದೆ. ಆದರೆ ನಿಧಾನವಾಗಿ ಆ ಅಭಿಪ್ರಾಯ ಬದಲಾಯಿತು. ಸಂಖ್ಯೆಯನ್ನು ಲೆಕ್ಕಿಸದೆ ಗುಣಮಟ್ಟದತ್ತ ಗಮನ ನೀಡತೊಡಗಿದೆ. ಎಂದು ನಿಕ್ಕಿ ಹೇಳಿದ್ದಾರೆ.

Advertisement

Advertisement

ಇದನ್ನೂ ಓದಿ: ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ

ವರ್ಷಕ್ಕೆ ಎರಡೇ ಸಿನಿಮಾಗಳಲ್ಲಿ ನಟಿಸಿದರೂ ಅದು ಒಳ್ಳೆಯದಾಗಿದ್ದರೆ ಸಾಕು ಎನ್ನುವ ಪಾಠವನ್ನು ನಿಕ್ಕಿ ಚಿತ್ರರಂಗದಿಂದ ಕಲಿತಿದ್ದಾರೆ. ಇದೇ ವೇಳೆ ಸಾಮಾಜಿಕ ಜಾಲತಾಣಗಳ ಬಗ್ಗೆ ಮಾತನಾಡಿರುವ ನಟಿ, ಇಂದು ಕಲಾವಿದರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುವುದನ್ನು ಒಪ್ಪಿಕೊಳ್ಳುತ್ತಾರೆ. 

ಇದನ್ನೂ ಓದಿ: ಪದವಿ ಪೂರ್ವ ಸಿನಿಮಾಗೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಲೇಟೆಸ್ಟ್ ಸೇರ್ಪಡೆ

ಅದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿನ ಪಾಪ್ಯುಲಾರಿಟಿ ಎಲ್ಲವೂ ಅಲ್ಲ ಎನ್ನ್ವುವುದನ್ನೂ ಹೇಳುತ್ತಾರೆ. ಫ್ಯಾನ್ಸ್ ಜೊತೆ ಸಂಪರ್ಕದಲ್ಲಿರುವುದು ಮುಖ್ಯವಾದರೂ, ಅದಕ್ಕಿಂತ ಹೆಚ್ಚಾಗಿ ತಮ್ಮದೇ ಬದುಕನ್ನು ಎಂಜಾಯ್ ಮಾಡುವುದು ಅಷ್ಟೇ ಮುಖ್ಯ ಎನ್ನುವುದನ್ನೂ ನಿಕ್ಕಿ ಅರಿತಿದ್ದಾರೆ.

ಇದನ್ನೂ ಓದಿ:  ಶಾನ್ವಿ, ರಘು ದೀಕ್ಷಿತ್ ನಟನೆಯ 'ಬ್ಯಾಂಗ್' ಸಿನಿಮಾದ ಫರ್ಸ್ಟ್ ಲುಕ್, ಟೀಸರ್ ಬಿಡುಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement