ಸಿನಿಮಾ ಸುದ್ದಿ

ಫೋನ್ ನಿಮ್ಮ ಗೆಳೆಯನೂ ಹೌದು, ಶತ್ರುವೂ ಹೌದು, '100' ಸಿನಿಮಾದಲ್ಲಿ ಆ ಬಗ್ಗೆ ಸಾಮಾಜಿಕ ಸಂದೇಶವಿದೆ: ರಚಿತಾ ರಾಮ್

Harshavardhan M

ಬೆಂಗಳೂರು: ನಟ ರಮೇಶ್ ಅವರ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎನ್ನುವ ರಚಿತಾ ರಾಮ್ ಆಸೆ, ಸೈಬರ್ ಕ್ರೈಮ್ ಥ್ರಿಲ್ಲರ್ ಸಿನಿಮಾ 100 ಮೂಲಕ ನೆರವೇರಿದೆ. 

100 ಸಿನಿಮಾ ನವೆಂಬರ್ 19ರಂದು ಬಿಡುಗಡೆಯಾಗುತ್ತಿದೆ. ರಮೇಶ್ ಅರವಿಂದ್ ಸಿನಿಮಾದಲ್ಲಿ ನಾಯಕ ನಟರಾಗಿ ಅಭಿನಯಿಸಿರುವುದರ ಜೊತೆಗೆ ನಿರ್ದೇಶನದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

ರಚಿತಾ ರಾಮ್ ಅವರು ಈ ಹಿಂದೆ ರಮೇಶ್ ಅರವಿಂದ್ ಅವರ ಜೊತೆ ಪುಷ್ಪಕ ವಿಮಾನ ಸಿನಿಮಾದಲ್ಲಿ ನಟಿಸಿದ್ದರು. ರಮೇಶ್ ನಿರ್ದೇಶನದ ರಾಮ ಶಾಮ ಭಾಮ, ವೆಂಕಟ ಇನ್ ಸಂಕಟ, ಆಕ್ಸಿಡೆಂಟ್, ಉತ್ತಮ ವಿಲನ್ ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿರುವ ರಚಿತಾ ರಾಮ್ ರಮೇಶ್ ಅವರನ್ನು ಇಂಟೆಲಿಜೆಂಟ್ ಫಿಲಂ ಮೇಕರ್ ಎಂದು ಶ್ಲಾಘಿಸಿದ್ದಾರೆ.

ಕೊರೊನಾ ಪೂರ್ವಕಾಲದ ಕಥೆಯನ್ನು ಹೊಂದಿದ್ದರೂ ಇಂದಿಗೂ 100 ಸಿನಿಮಾದ ಕಥಾವಸ್ತು ಪ್ರಸ್ತುತತೆ ಪಡೆದುಕೊಳ್ಳುತ್ತದೆ ಎನ್ನುವುದು ರಚಿತಾ ಅವರ ಅಭಿಪ್ರಾಯ. ಇಂದಿನ ದಿನದಲ್ಲಿ ಅತಿ ದುರುಪಯೋಗಕ್ಕೆ ಒಳಗಾಗುತ್ತಿರುವ ವಸ್ತು ಎಂದರೆ ಫೋನ್. 

ಒಂದಿನವೂ ನಾವು ಅದನ್ನು ಬಿಟ್ಟಿರುವುದಿಲ್ಲ. ಅದರಿಂದಾಗಿ ನಮ್ಮ ದೈನಂದಿನ ಕೆಲಸ ಕಾರ್ಯಗಳು ಸುಲಭವಾಗಿವೆ ನಿಜ. ಆದರೆ ಅದೇ ಸಮಯದಲ್ಲಿ ಅದರಿಂದಾಗಿ ನಮ್ಮ ಜೀವನದ ಮುಖ್ಯ ಸಂಗತಿಗಳನ್ನು ಕಡೆಗಣಿಸುತ್ತಿದ್ದೇವೆ ಎನ್ನುತ್ತಾರೆ ರಚಿತಾ ರಾಮ್. ಅವರು ಸಿನಿಮಾದಲ್ಲಿ ರಮೇಶ್ ತಂಗಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. 

ಜನರು ನಟನೆ ಕನಸನ್ನು ನನಸಾಗಿಸಿಕೊಳ್ಳಲು ಸಾಮಾಜಿಕ ಜಾಲತಾಣಗಳ ಮೊರೆ ಹೋಗುತ್ತಿದ್ದಾರೆ. ರಿಯಾಲಿಟಿ ಶೋ ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಒಳ್ಳೆಯ ಲಕ್ಷಣ. ಇನ್ನೊಂದೆಡೆ ಹಲವು ವಿಷಯಗಳ ಕುರಿತಾಗಿ ಕಮೆಂಟ್ ಮಾಡಿ ವಿವಾದಗಳೂ ಸೃಷ್ಟಿಗೂ ಸಾಮಾಜಿಕ ಜಾಲತಾಣಗಳು ಕಾರಣವಾಗುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

SCROLL FOR NEXT