ಅವತಾರ್ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಅವತಾರ್ 2 ಬಿಡುಗಡೆ ದಿನಾಂಕ ಘೋಷಣೆ

ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ.

ಹಾಲಿವುಡ್: ಬ್ಲಾಕ್ ಬಸ್ಟರ್ ಹಾಲಿವುಡ್ ನ ಅವತಾರ್ ಸಿನಿಮಾದ ಎರಡನೇ ಅವತರಣಿಕೆಯ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಬಹಿರಂಗಗೊಳಿಸಿದೆ. ಮುಂದಿನ ವರ್ಷ ಡಿಸೆಂಬರ್ 16 ರಂದು ಅವತಾರ್2,  ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. 

ಅವತಾರ್ ಮೊದಲ ಭಾಗದಲ್ಲಿ ನಾಯಕ ನಾಯಕಿ ಪಾತ್ರ ನಿರ್ವಹಿಸಿದ್ದ ಸ್ಯಾಮ್ ವರ್ದಿಂಗ್ಟನ್ ಮತ್ತು ಜೋಯಿ ಸಲ್ದಾನ ಎರಡನೇ ಭಾಗದಲ್ಲೂ ಮುಂದುವರಿದಿದ್ದಾರೆ.

ಇನ್ನುಳಿದಂತೆ ಮೊದಲ ಭಾಗದ ಕೆಲ ನಟರನ್ನಷ್ಟೇ ಉಳಿಸಿಕೊಳ್ಲಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಎರಡನೇ ಭಾಗದಲ್ಲಿ ಟೈಟಾನಿಕ್ ಹೀರೋಯಿನ್ ಕೇಟ್ ವಿನ್ಸ್ ಲೆಟ್ ಸೇರ್ಪಡೆಗೊಂಡಿದ್ದಾರೆ ಎನ್ನುವುದು ಅಭಿಮಾನಿಗಳಿಗೆ ಸಂತಸವನ್ನುಂಟು ಮಾಡುವ ವಿಷಯ.

ಇದರೊಂದಿಗೆ ಡಿಸ್ನಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಡಿಸ್ನಿ ತನ್ನ ಸಂಸ್ಥೆಯಿಂದ ಮುಂಬರಲಿವ ಸಿನಿಮಾಗಳ ದಿನಾಂಕಗಳನ್ನು ಬಿಡುಗಡೆ ಮಾಡಿದೆ. ಡಾಕ್ಟರ್ ಸ್ಟ್ರೇಂಜ್ ಮುಂದಿನ ವರ್ಷ ಮಾರ್ಚ್ 25, ಥಾರ್ ಮುಂದಿನ ವರ್ಷ ಮೇ6, ಬ್ಲ್ಯಾಕ್ ಪ್ಯಾಂಥರ್ ಜುಲೈ8, ಬ್ಲೇಡ್ 2022 ಅಕ್ಟೋಬರ್ 7 ಮಾರ್ವೆಲ್ಸ್ 2022 ನವೆಂಬರ್ 22ರಂದು ಬಿಡುಗಡೆಗೊಳ್ಳುತ್ತಿರುವುದಾಗಿ ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!