ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಪ್ರೀಮಿಯರ್ ಪದ್ಮಿನಿ ಭಾಗ 2 ಪ್ರೇಕ್ಷಕರಿಗೆ ಜಾಲಿ ರೈಡ್ ಅನುಭವ ನೀಡಲಿದೆ: ಜಗ್ಗೇಶ್

ಮೊದಲ ಭಾಗದಲ್ಲಿ ಗಮನ ಸೆಳೆದಿದ್ದ ಜಗ್ಗೇಶ್ ಪ್ರಮೋದ್ ಜೋಡಿ ಎರಡನೇ ಭಾಗದಲ್ಲಿಯೂ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.

ನಿರ್ದೇಶಕ ರಮೇಶ್ ಇಂದಿರಾ, ಪ್ರಮೋದ್, ಜಗ್ಗೇಶ್ ಮತ್ತು ಶ್ರುತಿ ನಾಯ್ಡು
Harshavardhan M
Updated On : 28 Sept 2021, 12:52 pm

ಬೆಂಗಳೂರು: ಯುವರತ್ನ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಅವರ 'ರಾಘವೇಂದ್ರ ಸ್ಟೋರ್ಸ್' ಸಿನಿಮಾ ಪಾತ್ರದಲ್ಲಿ ನಾಯಕನಾಗಿ ಜಗ್ಗೇಶ್ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇತ್ತೀಚಿಗಷ್ಟೆ ಹೊರಬಂದಿತ್ತು. 

ಇದನ್ನೂ ಓದಿ: ರಾಘವೇಂದ್ರ ಸ್ಟೋರ್ಸ್ ಸಿನಿಮಾ ಸ್ಕ್ರಿಪ್ಟ್ ಗೆ ಮಂತ್ರಾಲಯದಲ್ಲಿ ದೊರೆತ ಪ್ರೇರಣೆ ಕಾರಣ: ನಟ ಜಗ್ಗೇಶ್

ರಾಘವೇಂದ್ರ ಸ್ಟೋರ್ಸ್ ಗುಂಗಿನಿಂದ ಪ್ರೇಕ್ಷಕ ಹೊರಬರುವ ಮುನ್ನವೇ ಜಗ್ಗೇಶ್ ಪ್ರೀಮಿಯರ್ ಪದ್ಮಿನಿ ಸಿನಿಮಾದ ಎರಡನೇ ಭಾಗ ಸಿನಿಮಾ ಘೋಷಣೆ ಮಾಡಿದ್ದಾರೆ.

Advertisement

Advertisement

ಪ್ರೀಮಿಯರ್ ಪದ್ಮಿನಿ ನಿರ್ದೇಶಕ ರಮೇಶ್ ಇಂದಿರಾ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ಇತ್ತೀಚಿಗಷ್ಟೆ ಸಿನಿಮಾ ಕಥೆ ಕುರಿತು ಮಾತುಕತೆ ನಡೆಸುವ ಸಲುವಾಗಿ ಜಗ್ಗೇಶ್ ಅವರನ್ನು ಭೇಟಿ ಮಾಡಿದ್ದಾಗಿ ಶ್ರುತಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ ಜಗ್ಗೇಶ್, ಪ್ರಮೋದ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಯುತ್ತಿದೆ.

ಇದನ್ನೂ ಓದಿ: ಕೆಜಿಎಫ್ ನಿರ್ಮಿಸಿದ ಹೊಂಬಾಳೆ ಫಿಲ್ಮ್ಸನಿಂದ ಜಗ್ಗೇಶ್ ಸಿನಿಮಾ: ಸಂತೋಷ್ ಆನಂದ್ ರಾಮ್ ನಿರ್ದೇಶನ

ಈ ಸಿನಿಮಾದ ಪ್ರಾಜೆಕ್ಟ್ ವರ್ಷದ ಹಿಂದೆಯೇ ಶುರುವಾಗಬೇಕಿತ್ತು. ಕೊರೊನಾ ಸಾಂಕ್ರಾಮಿಕ ಕಾರಣದಿಂದ ಸಿನಿಮಾಪ್ ರಾಜೆಕ್ಟ್ ಮುಂದೂಡಲ್ಪಟ್ಟಿತ್ತು. ಈ ಹಿಂದೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಪ್ರೀಮಿಯರ್ ಪದ್ಮಿನಿ ಸಿನಿಮಾದಲ್ಲಿ ಜಗ್ಗೇಶ್, ಪ್ರಮೋದ್, ಮಧು, ಸುಧಾರಾಣಿ, ಹಿತ ಚಂದ್ರಶೇಖರ್, ವಿವೇಕ್ ಸಿಂಹ ರಮೇಶ್ ಇಂದಿರಾ, ದತ್ತಣ್ಣ, ಭಾರ್ಗವಿ ನಾರಾಯಣ್ ಮತ್ತಿತರರು ನಟಿಸಿದ್ದರು.

ಇದನ್ನೂ ಓದಿ: ಹೆಣ್ಣನ್ನು ಗೌರವಿಸದವರು ರಕ್ಕಸರು! ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು: ನಟ ಜಗ್ಗೇಶ್

Related Article

ಮೈಸೂರು ಗ್ಯಾಂಗ್ ರೇಪ್ ಪ್ರಕರಣ: ನಟ ಜಗ್ಗೇಶ್‌ ರಿಂದ ಪೊಲೀಸರಿಗೆ 1 ಲಕ್ಷ ರೂ. ಬಹುಮಾನ!

ಅಧಮ, ನಾಯಿ ಪದ ಬಳಕೆ ಮಾಡಿದ್ದ ಜಗ್ಗೇಶ್ ವಿರುದ್ಧ ದೂರು ದಾಖಲು

ಮಹಾನಟಿ ಜಯಂತಿಯವರದು ಮಗುವಿನಂತಹ ಮನಸ್ಸು, 'ಲವ್ ಯೂ ಅಮ್ಮ': ನಟ ಜಗ್ಗೇಶ್

ಚಿತ್ರರಂಗ ಬೀದಿಚರ್ಚೆಗೆ ವಿಷಯವಾಗದಿರಲಿ: ದರ್ಶನ್-ಇಂದ್ರಜಿತ್ ಪ್ರಕರಣಕ್ಕೆ ಜಗ್ಗೇಶ್ ಪ್ರತಿಕ್ರಿಯೆ

ನಾನು ಚಪ್ಪಲಿಯಲ್ಲಿ ಹೊಡೆದಿದ್ದು ನಿಜವೇ ಆಗಿದ್ದರೇ ಜಗ್ಗೇಶ್ ರಾಯರ ಮೇಲೆ ಆಣೆ ಮಾಡಲಿ: ವಿಜಯಲಕ್ಷ್ಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments