ಪ್ರಿಯಾಂಕಾ ಕುಮಾರ್ ಮತ್ತು ಶ್ರೇಯಸ್ ಮಂಜು 
ಸಿನಿಮಾ ಸುದ್ದಿ

ಶ್ರೇಯಸ್ ಮಂಜು ರೊಮ್ಯಾಂಟಿಕ್ ಸಿನಿಮಾಗೆ ಪ್ರಿಯಾಂಕಾ ಕುಮಾರ್ ನಾಯಕಿ

ಶ್ರೇಯಸ್ ಮಂಜು ಮುಂದಿನ ಸಿನಿಮಾ ಕಾಲೇಜು ಲವ್ ಸ್ಟೋರಿಯಾಗಿದ್ದು, ನಿರ್ದೇಶಕರು ಪ್ರಿಯಾಂಕಾ ಕುಮಾರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಶ್ರೇಯಸ್ ಮಂಜು ಮುಂದಿನ ಸಿನಿಮಾ ಕಾಲೇಜು ಲವ್ ಸ್ಟೋರಿಯಾಗಿದ್ದು, ನಿರ್ದೇಶಕರು ಪ್ರಿಯಾಂಕಾ ಕುಮಾರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಮತ್ತು ವಿರಾಟ್ ನಟಿಸಿರುವ ನಿರ್ದೇಶಕ ಎಪಿ ಅರ್ಜುನ್ ಅವರ ಅದ್ಧೂರಿ ಲವರ್  ನಲ್ಲಿ ಪ್ರಿಯಾಂಕಾಕುಮಾರ್ ನಟಿಸಿದ್ದು, ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಇದು ಆಕೆಯ ಮೂರನೇ ಚಿತ್ರವಾಗಿದೆ.

ಆರ್ ಸಂತೋಷ್ ಕುಮಾರ್ ಅವರ ಬೆಂಬಲದೊಂದಿಗೆ, ಪ್ರಾಚೀನ ಮೂವೀಸ್ ಬ್ಯಾನರ್ ಅಡಿಯಲ್ಲಿ, ಈ ಸಿನಿಮಾವನ್ನು ಮಧು ಗೌಡ ಗಂಗೂರ್ ನಿರ್ದೇಶಿಸುತ್ತಿದ್ದಾರೆ.

ಮಧು ಗೌಡ ಗಂಗೂರ್ ಅವರ ಚೊಚ್ಚಲ ಸಿನಿಮಾ ಇದಾಗಿದ್ದು, ಏಪ್ರಿಲಿ ತಿಂಗಳಿಂದ ಶೂಟಿಂಗ್ ಆರಂಭವಾಗಲಿದೆ, ಬೆಂಗಳೂರು, ಕೊಡಗು, ಚಿಕ್ಕಮಗಳೂರು ಹಾಗೂ ಕೇರಳಗಳಲ್ಲಿ ಶೂಟಿಂಗ್ ನಡೆಯಲಿದೆ.

ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಚಿತ್ರಕ್ಕೆ ಗಗನ್ ಗೌಡ ಅವರ ಛಾಯಾಗ್ರಹಣವಿದೆ. ಏತನ್ಮಧ್ಯೆ, ಶ್ರೇಯಸ್, ವಿಕೆ ಪ್ರಕಾಶ್ ಅವರ ವಿಷ್ಣು ಪ್ರಿಯಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಇದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT