2025ರಲ್ಲಿ ಭಾರತ ಮತ್ತು ಚೀನಾಗಳು ತಮ್ಮ ರಾಜತಾಂತ್ರಿಕ ಸಂಬಂಧದ 75ನೇ ವರ್ಷವನ್ನು ಆಚರಿಸಲಿವೆ. ಉಭಯ ದೇಶಗಳ ಸಂಬಂಧ ಪರಸ್ಪರ ಸಹಕಾರ ಮತ್ತು ಚಕಮಕಿಗಳೆರಡಕ್ಕೂ ಸಾಕ್ಷಿಯಾಗಿದೆ. 1962ರ ಭಾರತ ಚೀನಾ ಯುದ್ಧದ ಬಳಿಕ, ನವದೆಹಲಿ ಮತ್ತು ಬೀಜಿಂಗ್ ನಡುವಿನ ವಿಶ್ವಾಸ ಕುಸಿತ ಕಂಡಿದೆ. ವರ್ಷಗಳು ಉರುಳಿದಂತೆ, ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಈ ಅಪನಂಬಿಕೆ ಇನ್ನಷ್ಟು ಹೆಚ್ಚಾಗುತ್ತಲೇ ಹೋಗಿದೆ. 2019ರಲ್ಲಿ ಭಾರತ ಪೂರ್ವದಲ್ಲಿ ಚೀನಾದೊಡನೆ ಗಡಿ ಹಂಚಿಕೊಳ್ಳುವ ಲಡಾಖ್ ಸೇರಿದಂತೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದ ಬಳಿಕ ಉದ್ವಿಗ್ನತೆ ಹೆಚ್ಚಾಯಿತು. ಭಾರತದ ಕ್ರಮವನ್ನು ಚೀನಾ ಬಲವಾಗಿ ವಿರೋಧಿಸಿತ್ತು.
2020ರಲ್ಲಿ, ಗಲ್ವಾನ್ ಕಣಿವೆಯ ವಿವಾದಿತ ಗಡಿಯಲ್ಲಿ ಚಕಮಕಿ ನಡೆದು, ಭಾರತ ಮತ್ತು ಚೀನಾ ಎರಡೂ ಪಡೆಗಳ ಸೈನಿಕರು ಪ್ರಾಣ ಕಳೆದುಕೊಂಡರು. ಆ ವರ್ಷ ಗಡಿ ಚಕಮಕಿಗಳು ಮುಂದುವರಿದಂತೆ, ಭಾರತ ಚೀನಾದ ವಿರುದ್ಧ ಕ್ರಮಗಳನ್ನು ಕೈಗೊಂಡು, ಭಾರತದಲ್ಲಿ ಚೀನಾದ ಹೂಡಿಕೆಯನ್ನು ಮಿತಿಗೊಳಿಸಿ, ಟಿಕ್‌ಟಾಕ್‌ನಂತಹ ಜನಪ್ರಿಯ ಚೀನೀ ಆ್ಯಪ್‌ಗಳನ್ನು ಭಾರತದಲ್ಲಿ ನಿಷೇಧಿಸಿತು. ಕೋವಿಡ್-19 ಸಾಂಕ್ರಾಮಿಕ ಕೊನೆಗೊಂಡ ಬಳಿಕವೂ ಚೀನಾಗೆ ನಾಗರಿಕ ವಿಮಾನ ಸಂಚಾರವನ್ನು ಭಾರತ ಪುನರಾರಂಭಿಸಲಿಲ್ಲ.
ಅಕ್ಟೋಬರ್ 2024ರಲ್ಲಿ ಭಾರತೀಯ ಸೇನೆ ತಾನು ಪೂರ್ವ ಲಡಾಖ್‌ನಲ್ಲಿ ಚೀನಾದ ಜೊತೆಗಿನ ಉದ್ವಿಗ್ನತೆಯನ್ನು ಕೊನೆಗೊಳಿಸಿರುವುದಾಗಿ ಘೋಷಿಸಿತ್ತು. ಗಲ್ವಾನ್ ಚಕಮಕಿ ನಡೆದು ಬಹುತೇಕ ಐದು ವರ್ಷಗಳ ಬಳಿಕ, ಉಭಯ ದೇಶಗಳು ತಮ್ಮ ಸಂಬಂಧವನ್ನು ಉತ್ತಮಗೊಳಿಸುವತ್ತ ಕಾರ್ಯಾಚರಿಸಲು ಮನಸ್ಸು ಮಾಡಿರುವಂತೆ ಕಾಣುತ್ತಿದೆ. ಕಳೆದ ಅಕ್ಟೋಬರ್ ತಿಂಗಳಲ್ಲಿ ರಷ್ಯಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಪರಸ್ಪರ ಮಾತುಕತೆ ನಡೆಸಿ, ಉಭಯ ದೇಶಗಳ ನಡುವೆ ಪರಸ್ಪರ ನಂಬಿಕೆ, ಗೌರವ, ಹಾಗೂ ಅರ್ಥೈಸಿಕೊಳ್ಳುವಿಕೆ ಬೆಳೆಯಬೇಕು ಎಂದು ಆಗ್ರಹಿಸಿದ್ದರು. ಅವರು ಪರಸ್ಪರ ಸಂವಹನವನ್ನು ಉತ್ತಮಗೊಳಿಸಿ, ಹೆಚ್ಚು ಆತ್ಮೀಯವಾಗಿ ಕಾರ್ಯಾಚರಿಸಲು ಒಪ್ಪಿಗೆ ಸೂಚಿಸಿದ್ದರು.
ಇತ್ತೀಚಿನ ಸುಧಾರಣೆಗಳ ಹೊರತಾಗಿಯೂ, ಪರಸ್ಪರ ಹಿತಾಸಕ್ತಿ ಸಂಘರ್ಷ ಮತ್ತು ಈ ಪ್ರದೇಶದಲ್ಲಿ ಬದಲಾಗುತ್ತಿರುವ ಅಧಿಕಾರ ಸಮತೋಲನದ ಕಾರಣದಿಂದ 2025ರಲ್ಲೂ ಭಾರತ - ಚೀನಾ ಸಂಬಂಧ ಉದ್ವಿಗ್ನವಾಗಿಯೇ ಮುಂದುವರಿಯುವ ಸಾಧ್ಯತೆಗಳಿವೆ. ಐತಿಹಾಸಿಕವಾಗಿಯೂ ಅಪನಂಬಿಕೆಗಳಿದ್ದು, ಚೀನಾದ ದಿಟ್ಟವಾದ ವಿದೇಶಾಂಗ ನೀತಿಯ ನಡುವೆ ಭಾರತ ನಿಜಕ್ಕೂ ಚೀನಾದೊಡನೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವೇ ಎಂಬುದು ಅನಿಶ್ಚಿತವಾಗಿದೆ. ಏಷ್ಯಾದಲ್ಲಿನ ಬದಲಾವಣೆಗಳು ದಕ್ಷಿಣ ಏಷ್ಯಾದ ಸಣ್ಣ ದೇಶಗಳ ಮೇಲೆ ಎಂತಹ ಪರಿಣಾಮ ಬೀರಲಿದೆ ಎನ್ನುವ ಪ್ರಶ್ನೆಗಳೂ ಮೂಡಿವೆ.
ಭಾರತ ಮತ್ತು ಚೀನಾಗಳ ನಡುವಿನ ಸುದೀರ್ಘ ಸಮಸ್ಯೆ ಎಂದರೆ, ಪರಿಹಾರ ಕಾಣದ ಗಡಿ ವಿವಾದ. ಭಾರತ ಮತ್ತು ಚೀನಾಗಳು 3,488 ಕಿಲೋಮೀಟರ್‌ಗೂ ಹೆಚ್ಚಿನ ಗಡಿಯನ್ನು ಹೊಂದಿದ್ದು, ಇದನ್ನು ಲೈನ್ ಆಫ್ ಆ್ಯಕ್ಚುವಲ್ ಕಂಟ್ರೋಲ್ ಎನ್ನಲಾಗುತ್ತದೆ. ಈ ಪ್ರದೇಶ ಸಾಕಷ್ಟು ಚಕಮಕಿ, ಉದ್ವಿಗ್ನತೆಗಳಿಗೆ ಸಾಕ್ಷಿಯಾಗಿದೆ. 2017ರ ದೋಕ್ಲಾಂ ಚಕಮಕಿ, 2020ರ ಗಲ್ವಾನ್ ಕಣಿವೆಯ ಸೆಣಸಾಟ ಮತ್ತು ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂಗಳಲ್ಲಿ ಮುಂದುವರಿದಿರುವ ಉದ್ವಿಗ್ನತೆಗಳು ಭಾರತ ಚೀನಾ ನಡುವಿನ ಶಾಂತಿ ಎಷ್ಟು ಸೂಕ್ಷ್ಮವಾದುದು ಎಂದು ಸಾಬೀತುಪಡಿಸಿವೆ.
ಕಳೆದ ವರ್ಷ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದ ಬಳಿಕವೂ ಉದ್ವಿಗ್ನತೆಗಳು ಹಾಗೆಯೇ ಮುಂದುವರಿದಿವೆ. ಇತ್ತೀಚೆಗೆ ಟಿಬೆಟ್‌ನಲ್ಲಿ ಚೀನಾ ನಿರ್ಮಿಸಲು ಉದ್ದೇಶಿಸಿರುವ ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಅಣೆಕಟ್ಟಿನ ಕುರಿತೂ ಭಾರತ ತನ್ನ ಕಳವಳಗಳನ್ನು ವ್ಯಕ್ತಪಡಿಸಿದೆ. ಭಾರತ ಮತ್ತು ಚೀನಾಗಳೆರಡೂ ತಮ್ಮ ಗಡಿಗಳ ಬಳಿ ರಸ್ತೆ, ರೈಲ್ವೇ ಮತ್ತು ಏರ್ ಸ್ಟ್ರಿಪ್‌ಗಳ ಜಾಲವನ್ನು ನಿರ್ಮಿಸಿಕೊಂಡಿದ್ದು, ಅಗತ್ಯ ಬಿದ್ದರೆ, ತಕ್ಷಣವೇ ತಮ್ಮ ಪಡೆಗಳನ್ನು ಗಡಿ ಪ್ರದೇಶಕ್ಕೆ ಸಾಗಿಸಬಲ್ಲವು. 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ, ಭಾರತ ಲಡಾಖ್‌ನಲ್ಲಿ ಗಡಿ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಿದ್ದು, ಫ್ರಾನ್ಸ್, ಜರ್ಮನಿ, ಮತ್ತು ಸ್ಪೇನ್‌ನಂತಹ ಯುರೋಪಿಯನ್ ದೇಶಗಳೊಡನೆ ರಕ್ಷಣಾ ಸಹಯೋಗವನ್ನು ಬಲಪಡಿಸಿದೆ. ಅದರೊಡನೆ, ಆಗ್ನೇಯ ಏಷ್ಯಾದಲ್ಲಿ ಫಿಲಿಪೈನ್ಸ್, ಇಂಡೋನೇಷ್ಯಾದಂತಹ ದೇಶಗಳೊಡನೆ ಪ್ರಬಲ ನೌಕಾ ಮೈತ್ರಿಕೂಟವನ್ನೂ ನಿರ್ಮಿಸಿದೆ.
ಭಾರತದ ಹೆಜ್ಜೆಗಳು ದೇಶದ ಭದ್ರತೆಯನ್ನು ಹೆಚ್ಚಿಸಿದ್ದರೂ, ಇದು ಪರಸ್ಪರ ಸ್ಪರ್ಧೆಯನ್ನು ಹೆಚ್ಚಿಸಿ, ಸಮುದ್ರದಲ್ಲಿ ತನ್ನ ಸ್ವತಂತ್ರ ಓಡಾಟದ ಕುರಿತು ಚೀನಾ ಚಿಂತೆಗೊಳಗಾಗುವಂತೆ ಮಾಡಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತ ಅಮೆರಿಕಾಗೆ ಹೆಚ್ಚು ಹತ್ತಿರಾಗಿದ್ದು, ಜಪಾನ್ ಮತ್ತು ಆಸ್ಟ್ರೇಲಿಯಾಗಳನ್ನೂ ಒಳಗೊಂಡಿರುವ ಭದ್ರತಾ ಸಹಯೋಗವಾದ ಕ್ವಾಡ್ ಒಕ್ಕೂಟದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸಿದೆ. ಕ್ವಾಡ್ ಒಕ್ಕೂಟ ಚೀನಾದ ಪ್ರಭಾವವನ್ನು ಕಡಿಮೆಗೊಳಿಸಿ, ಸಣ್ಣ ದೇಶಗಳು ಬೀಜಿಂಗ್‌ನ ಭಾರೀ ಸಾಲದ ಸುಳಿಗೆ ಸಿಲುಕದಂತೆ ತಡೆಯುವ ಭರವಸೆ ನೀಡಿದೆ.
ಚೀನಾ ಕ್ವಾಡ್ ಒಕ್ಕೂಟವನ್ನು ಅಮೆರಿಕಾಗೆ ತನ್ನ ಪಾರಮ್ಯವನ್ನು ಪ್ರದರ್ಶಿಸುವ ಒಂದು ಮಾರ್ಗ ಎಂದು ಪರಿಗಣಿಸಿದೆ. ಆದರೆ, ಅದರಿಂದ ಭಾರತ ಒಕ್ಕೂಟದಲ್ಲಿ ತನ್ನ ಪಾತ್ರವನ್ನು ಹೆಚ್ಚಿಸುವುದರಿಂದ ವಿಮುಖವಾಗಿಲ್ಲ. ಭಾರತ ಸಮುದ್ರಗಳನ್ನು ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದೆ. ಭಾರತ ತನ್ನ ನೌಕಾಪಡೆಗೆ ಇನ್ನಷ್ಟು ಶಕ್ತಿ ತುಂಬಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಲು ಅಮೆರಿಕಾ, ಜಪಾನ್‌ನಂತಹ ದೇಶಗಳೊಡನೆ ಭದ್ರವಾದ ರಕ್ಷಣಾ ಸಂಬಂಧವನ್ನು ಹೊಂದಿದೆ. ಚೀನಾದ ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್‌ಗೆ (ಬಿಆರ್‌ಐ) ಸವಾಲೊಡ್ಡುವ ಸಲುವಾಗಿ, ಭಾರತ ಜಿ-20ಯ ಗ್ಲೋಬಲ್ ಇನ್ಫ್ರಾಸ್ಟ್ರಕ್ಚರ್ ಫೆಸಿಲಿಟಿ ಮತ್ತು ಇಂಡಿಯಾ - ಮಿಡಲ್ ಈಸ್ಟ್ - ಯುರೋಪ್ ಎಕನಾಮಿಕ್ ಕಾರಿಡಾರ್‌ನಂತಹ ಮೂಲಭೂತ ಸೌಕರ್ಯ ಯೋಜನೆಗಳಿಗೆ ಕೈಜೋಡಿಸಿದೆ.
ಭಾರತ ಮತ್ತು ಚೀನಾಗಳ ನಡುವಿನ ವ್ಯಾಪಾರ ಮತ್ತು ಭಾರತದ ಪ್ರಮುಖ ಉದ್ಯಮಗಳಲ್ಲಿ ಚೀನಾದ ಹೂಡಿಕೆಯ ಕಾರಣದಿಂದಾಗಿ ಉಭಯ ದೇಶಗಳ ಸಂಬಂಧ ಉತ್ತಮಗೊಂಡಿದೆ. ಡಿಸೆಂಬರ್ ತಿಂಗಳಲ್ಲಿ, ಎರಡು ದೇಶಗಳ ಅಧಿಕಾರಿಗಳು ಭೇಟಿಯಾಗಿ, ಗಡಿಯಲ್ಲಿ ಶಾಂತಿ ಕಾಪಾಡುವ ಮತ್ತು ಸಂಬಂಧವನ್ನು ವೃದ್ಧಿಸುವ ಕುರಿತು ಸಮಾಲೋಚನೆ ನಡೆಸಿದ್ದರು.
ಜನವರಿ ಕೊನೆಯ ವೇಳೆಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ಬೀಜಿಂಗ್‌ಗೆ ತೆರಳಿ, ಚೀನೀ ಅಧಿಕಾರಿಗಳನ್ನು ಭೇಟಿಯಾದರು. ಎರಡೂ ದೇಶಗಳು ತಮ್ಮ ಸಂಬಂಧವನ್ನು ಉತ್ತಮಗೊಳಿಸುವತ್ತ ಹೆಜ್ಜೆ ಇಡಲು ಒಪ್ಪಿಕೊಂಡವು. ಅವರು ಟಿಬೆಟ್‌ನಲ್ಲಿನ ಪ್ರಸಿದ್ಧ ಹಿಂದೂ ಆರಾಧನಾ ಸ್ಥಳಕ್ಕೆ ಮರಳಿ ಪ್ರವೇಶ, ಬೀಜಿಂಗ್ ಮತ್ತು ನವದೆಹಲಿಯ ನಡುವೆ ನೇರ ವಿಮಾನ ಪುನರಾರಂಭ, ಪತ್ರಕರ್ತರು ಮತ್ತು ಸಂಶೋಧಕರಿಗೆ ವೀಸಾ ನೀಡುವಿಕೆ, ಗಡಿಗಳಲ್ಲಿ ಹರಿಯುವ ನದಿಗಳ ಕುರಿತು ಪರಸ್ಪರ ಮಾಹಿತಿ ವಿನಿಮಯದಂತಹ ಕ್ರಮಗಳಿಗೆ ಒಪ್ಪಿಗೆ ಸೂಚಿಸಿದರು.
ಆದರೆ, ಗಡಿಯಾದ್ಯಂತ ಈಗಲೂ ಕಾವಲು ಕಾಯುತ್ತಿರುವ ಅಪಾರ ಸಂಖ್ಯೆಯ ಸೇನಾಪಡೆಗಳನ್ನು ತಗ್ಗಿಸುವುದು ಹೇಗೆ ಎಂಬ ಕುರಿತು ಸಮಾಲೋಚನೆ ನಡೆಸಿಲ್ಲ. ಭಾರತ - ಚೀನಾ ಸಂಬಂಧಕ್ಕಿರುವ ಇನ್ನೊಂದು ಸವಾಲೆಂದರೆ, ಆರ್ಥಿಕ ಸಹಕಾರದಲ್ಲಿ ಸಮತೋಲನ ಸಾಧಿಸುವುದು ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ ಪರಸ್ಪರ ಮೇಲಿರುವ ಅವಲಂಬನೆಯನ್ನು ಕಡಿಮೆಗೊಳಿಸುವುದು. ಭಾರತ ಚೀನಾ ನಡುವಿನ ಸಂಬಂಧ ಉದ್ವಿಗ್ನಗೊಂಡಿದ್ದರೂ, 2024ರಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿ, ಮತ್ತೊಮ್ಮೆ ಭಾರತದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿತು. 2024ರಲ್ಲಿ ಭಾರತ ಚೀನಾದಿಂದ 100 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಸರಕುಗಳನ್ನು ಖರೀದಿಸಿತ್ತು.
ಡಿಸೆಂಬರ್‌ನಲ್ಲಿ ಮಾತುಕತೆಗಳಿಗೂ ಮುನ್ನ, ಭಾರತದ ಮುಖ್ಯ ಆರ್ಥಿಕ ಸಲಹೆಗಾರರು ಭಾರತ ಚೀನಾದಿಂದ ಇನ್ನೂ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಬೇಕು ಎಂದು ಸಲಹೆ ನೀಡುವ ವರದಿಯೊಂದನ್ನು ಬಿಡುಗಡೆಗೊಳಿಸಿದ್ದರು. ಚೀನೀ ಉತ್ಪನ್ನಗಳಿಗೆ ಭಾರತ ಒಂದು ಮುಖ್ಯ ಮತ್ತು ಬೃಹತ್ ಮಾರುಕಟ್ಟೆ. ಆದರೆ, ಚೀನಾ ವಿರೋಧಿ ಭಾವನೆಗಳು ಹೆಚ್ಚಿದ ಪರಿಣಾಮವಾಗಿ, ಅದರಲ್ಲೂ 2020 ಮತ್ತು 2021ರ ಗಡಿ ಚಕಮಕಿಯ ಬಳಿಕ, ಚೀನೀ ಹೂಡಿಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬಂದವು.
ಅಂದಿನಿಂದ ಭಾರತ ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಚೀನೀ ಉತ್ಪನ್ನಗಳ ಮೇಲಿನ ಅವಲಂವನೆಯನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸಿತು. ಇದಕ್ಕಾಗಿ ಭಾರತ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿ, ಬೇರೆ ಪೂರೈಕೆದಾರರನ್ನು ಹುಡುಕತೊಡಗಿತು. ಉದಾಹರಣೆಗೆ, 2021ರಲ್ಲಿ ಭಾರತದ ದೂರಸಂಪರ್ಕ ಸಚಿವಾಲಯ ಹುವಾವೇ ಮತ್ತು ಜ಼ೆಡ್‌ಟಿಇಯಂತಹ ಚೀನೀ ಕಂಪೆನಿಗಳನ್ನು ದೇಶದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷಿಸುವುದರಿಂದ ಹೊರಗಿಟ್ಟಿತು.
ಭಾರತ ಒಂದಷ್ಟು ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಬಯಸುತ್ತಿದ್ದು, ರಾಜಕೀಯವಾಗಿಯೂ ಇದು ಸರಿಯಾದ ನಿಲುವಾಗಿದೆ. ಆದರೆ, ವಾಸ್ತವವಾಗಿ ಅದು ಅಷ್ಟೊಂದು ಸರಳ ಮತ್ತು ಸುಲಭವಲ್ಲ. ಭಾರತ ತೈವಾನ್‌ನಿಂದ ಹೂಡಿಕೆ ತರಲು ಪ್ರಯತ್ನಿಸುತ್ತಿದ್ದು, ಸೆಮಿಕಂಡಕ್ಟರ್ ಉದ್ಯಮದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದೆ. ಆದರೆ, ಚೀನಾ ಭಾರತದಲ್ಲಿ ಬಲವಾದ ಆರ್ಥಿಕ ಉಪಸ್ಥಿತಿ ಹೊಂದಿದ್ದು, ಭಾರತಕ್ಕೆ ಚೀನಾದಿಂದ ಬೇರ್ಪಟ್ಟು, ತನ್ನದೇ ಆದ ಸಾಮರ್ಥ್ಯವನ್ನು ವೃದ್ಧಿಸಲು ಸುದೀರ್ಘ ಸಮಯ ಬೇಕಾಗುತ್ತದೆ. ಒಂದಷ್ಟು ರಾಜತಾಂತ್ರಿಕ ಸುಧಾರಣೆಗಳ ಹೊರತಾಗಿಯೂ, 2025ರಲ್ಲಿ ಚೀನಾ ಜೊತೆಗಿನ ಭಾರತದ ಆರ್ಥಿಕ ಸಂಬಂಧ ಉದ್ವಿಗ್ನವಾಗಿಯೇ ಇರುವ ನಿರೀಕ್ಷೆಗಳಿವೆ. ಭಾರತ ಟ್ರಂಪ್ ಆಡಳಿತದೊಡನೆ ಹೆಚ್ಚು ಆತ್ಮೀಯವಾಗುತ್ತಿರುವುದೂ ಇದಕ್ಕೆ ಕಾರಣವಾಗಿದ್ದು, ಇದು ಭಾರತದ ಕಾರ್ಯತಂತ್ರದ ನಿರ್ಧಾರಗಳ ಮೇಲೆ ಮತ್ತು ಚೀನಾವನ್ನು ನೋಡುವ ದೃಷ್ಟಿಕೋನದ ಮೇಲೆ ಪ್ರಭಾವ ಬೀರುತ್ತಿದೆ.
ಮೋದಿಯವರ ಅಮೆರಿಕಾ ಭೇಟಿಯೂ ಈ ಬದಲಾವಣೆಗಳತ್ತ ಬೆಳಕು ಚೆಲ್ಲಿದ್ದು, ಅಮೆರಿಕಾ ಹಾಗೂ ಚೀನಾ ನಡುವಿನ ಉದ್ವಿಗ್ನತೆಗಳು ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಒಂದು ವೇಳೆ ಭಾರತ ಏನಾದರೂ ಅಮೆರಿಕಾದತ್ತ ಇನ್ನೂ ಹೆಚ್ಚಿನ ಗಮನ ಹರಿಸಿದರೆ, ಅದರಿಂದ ಭಾರತಕ್ಕೆ ಹೆಚ್ಚೇನೂ ಪ್ರಯೋಜನವಾಗದು. ಆದರೆ, ಚೀನಾದ ಜೊತೆಗಿನ ಉದ್ಯಮ ಮತ್ತು ತಂತ್ರಜ್ಞಾನದ ಅವಕಾಶಗಳನ್ನು ಭಾರತ ಕಳೆದುಕೊಳ್ಳಬಹುದು. ಇದು ವಿಭಜಿತವಾದ ಪ್ರಪಂಚದಲ್ಲಿ ಸಂಬಂಧಗಳನ್ನು ನಿರ್ವಹಿಸುವುದು ಎಷ್ಟು ಕಷ್ಟ ಎಂಬುದನ್ನು ಪ್ರದರ್ಶಿಸಲಿದೆ. ತಮ್ಮ ಮಿಲಿಟರಿ ಮತ್ತು ಆರ್ಥಿಕ ಸಂಬಂಧವನ್ನು ಪ್ರತ್ಯೇಕವಾಗಿಸುವ ಜೊತೆಗೆ, ಭಾರತ ಮತ್ತು ಚೀನಾ ಜಾಗತಿಕ ರಾಜಕಾರಣದಲ್ಲಿ ತಮ್ಮ ಪೈಪೋಟಿಯನ್ನು ನಿರ್ವಹಿಸಲೂ ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ.
ದಕ್ಷಿಣ ಏಷ್ಯಾದಲ್ಲಿ ಚೀನಾ ಹೆಚ್ಚು ಶಕ್ತಿಶಾಲಿಯಾಗುತ್ತಿರುವುದು ಭಾರತಕ್ಕೆ ಸವಾಲಾಗಿದೆ. ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಭಾಗವಾಗಿರುವ ಚೈನಾ - ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಈಗ ಚೀನಾ ಮತ್ತು ಪಾಕಿಸ್ತಾನಗಳನ್ನು ಇನ್ನಷ್ಟು ಹತ್ತಿರ ಸೆಳೆದಿದೆ. ಪಾಕಿಸ್ತಾನದ ಜೊತೆ ಕಾಶ್ಮೀರದ ಗಡಿ ವ್ಯಾಜ್ಯ ಹೊಂದಿರುವ ಭಾರತ, ಈ ಯೋಜನೆ ತನ್ನ ನೆಲ ಮತ್ತು ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.
ಹಂಬಂಟೋಟ ಬಂದರನ್ನು ಚೀನಾದ ಸಂಸ್ಥೆಗೆ ಗುತ್ತಿಗೆಗೆ ನೀಡಿರುವುದರಿಂದ, ಶ್ರೀಲಂಕಾದಲ್ಲೂ ಚೀನಾದ ಪ್ರಭಾವ ಹೆಚ್ಚಾಗುತ್ತಿದೆ. ಇದು ಭಾರತಕ್ಕೆ ಆತಂಕ ಉಂಟುಮಾಡಿದ್ದು, ತನ್ನ ಗಡಿಗಳ ಬಳಿ ಚೀನಾದ ಉಪಸ್ಥಿತಿ ಹೆಚ್ಚಾಗುತ್ತಿದೆ ಎಂದು ಭಾರತ ಭಾವಿಸಿದೆ.
ಚೀನಾ ಹಂಬಂಟೋಟ ಬಂದರಿನಲ್ಲಿ ತನ್ನ ಸಂಶೋಧನಾ ನೌಕೆಗಳನ್ನು ನಿಲ್ಲಿಸಿದ್ದು, ಅದನ್ನು ಗುಪ್ತಚರ ಕಾರ್ಯಗಳಿಗೆ ಬಳಸಬಹುದು ಎಂದು ಭಾರತ ಆರೋಪಿಸಿದೆ. ಕಳೆದ ತಿಂಗಳು, ಶ್ರೀಲಂಕಾ ಚೀನಾದ ಇಂಧನ ಸಂಸ್ಥೆಯಾದ ಸಿನೊಪೆಕ್ ಜೊತೆ ಹಂಬಂಟೋಟದಲ್ಲಿ 3.7 ಬಿಲಿಯನ್ ಡಾಲರ್ ಮೌಲ್ಯದ ತೈಲ ಸಂಸ್ಕರಣಾಗಾರ ನಿರ್ಮಾಣದ ವೇಗವನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದೆ.
ಡಿಸೆಂಬರ್‌ನಲ್ಲಿ ನೇಪಾಳವೂ ಚೀನಾದ ಬಿಆರ್‌ಐ ಯೋಜನೆಗೆ ಸೇರ್ಪಡೆಗೊಂಡಿದ್ದು, ಅಂದಿನಿಂದ ಚೀನಾ ನೇಪಾಳದ ಮೂಲಭೂತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದೆ. ಇದು ನೇಪಾಳದೊಡನೆ ಆರ್ಥಿಕ ಸಂಬಂಧವನ್ನು ವೃದ್ಧಿಸುವ ಚೀನಾದ ಬೃಹತ್ ಯೋಜನೆಯ ಭಾಗವಾಗಿದೆ. ನೇಪಾಳದ ಪೊಖಾರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಚೀನಾ 200 ಮಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.
ಆದರೆ, ಚೀನಾ ಈ ವಿಮಾನ ನಿಲ್ದಾಣವನ್ನು ಮಿಲಿಟರಿ ಉದ್ದೇಶಗಳಿಗೆ ಬಳಸಬಹುದು ಎನ್ನುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಭಾರತ ಚೀನಾದ ಕ್ರಮಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ನೇಪಾಳಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳು, ಕೃಷಿ ಉತ್ಪನ್ನಗಳ ರಫ್ತು, ಹೆಚ್ಚು ಜಲ ವಿದ್ಯುತ್ ಖರೀದಿ, ಡ್ರೈ ಪೋರ್ಟ್ ನಿರ್ಮಾಣ ಯೋಜನೆ, ಭಾರತ - ನೇಪಾಳದ ನಡುವೆ ಸಾಂಸ್ಕೃತಿಕ ಬಾಂಧವ್ಯದಂತಹ ಹಲವು ಕ್ರಮಗಳನ್ನು ಕೈಗೊಂಡಿದೆ. ಡ್ರೈ ಪೋರ್ಟ್ ಎನ್ನುವುದು ಒಂದು ಭೂ ವ್ಯವಸ್ಥೆಯಾಗಿದ್ದು, ಇಲ್ಲಿ ಸರಕುಗಳ ಸಾಗಣೆ, ಸಂಗ್ರಹ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಸಮುದ್ರದ ಬಂದರಿನ ರೀತಿಯಲ್ಲಿ ಇದು ಭೂಮಿಯ ಬಂದರಾಗಿದೆ. ಆಗಸ್ಟ್ 2024ರಲ್ಲಿ ಪ್ರಧಾನಿ ಶೇಖ್ ಹಸೀನಾ ನಿರ್ಗಮನದ ಬಳಿಕ, ಚೀನಾ ಬಾಂಗ್ಲಾದೇಶದ ಮೇಲೆ ಪ್ರಭಾವ ಬೀರುವುದನ್ನು ತನ್ನ ಆದ್ಯತೆಯಾಗಿಸಿದೆ.
ಕಳೆದ ತಿಂಗಳು ಚೀನಾ ಬಿಆರ್‌ಐ ಯೋಜನೆಯಡಿ ಬಡ್ಡಿ ದರವನ್ನು ಕಡಿಮೆಗೊಳಿಸುವ ಭರವಸೆ ನೀಡಿ, ಸಾಲ ಮರುಪಾವತಿಗೆ ಬಾಂಗ್ಲಾದೇಶಕ್ಕೆ ಹೆಚ್ಚಿನ ಸಮಯ ನೀಡುವುದಾಗಿ ಹೇಳಿದೆ. ಈ ಮೂಲಕ ಬಾಂಗ್ಲಾದೇಶದ ತಾತ್ಕಾಲಿಕ ಸರ್ಕಾರದೊಡನೆ ಹೆಚ್ಚಿನ ಬಾಂಧವ್ಯವನ್ನು ಸಾಧಿಸಿದೆ. ಭಾರತ ಮತ್ತು ಚೀನಾ ಎರಡರೊಡನೆಯೂ ಗಡಿ ಹಂಚಿಕೊಳ್ಳುವ ಮಯನ್ಮಾರ್‌ನಲ್ಲಿ ದಂಗೆಯ ಬಳಿಕ ಸೇನೆ ಅಧಿಕಾರ ವಹಿಸಿಕೊಂಡ ಬಳಿಕ ಉದ್ವಿಗ್ನತೆ ನಿರಂತರವಾಗಿ ಮುಂದುವರಿದಿದೆ. ಚೀನಾ ಮಯನ್ಮಾರ್‌ನ ಮಿಲಿಟರಿ ಸರ್ಕಾರ ಮತ್ತು ಬಂಡಾಯ ಗುಂಪುಗಳೆರಡ ಜೊತೆಗೂ ಸಮಾಲೋಚಿಸಿದ್ದು, ಅವುಗಳಿಗೆ ಮಧ್ಯಸ್ಥಿಕೆ, ಆಯುಧ ಪೂರೈಕೆ ಎರಡನ್ನೂ ನಡೆಸಿದೆ. ಆದರೆ, ಭಾರತ ಇದರಲ್ಲಿ ಪಾಲ್ಗೊಳ್ಳದೆ, ತಟಸ್ಥವಾಗಿ ಉಳಿದಿದೆ.
ಭಾರತ ಮಯನ್ಮಾರ್ ವಿಚಾರದಲ್ಲಿ ಮಧ್ಯ ಪ್ರವೇಶಿಸದೆ ಉಳಿದರೂ, ಚೀನಾ ಮಯನ್ಮಾರ್ ಜೊತೆಗಿನ ಸಂಬಂಧವನ್ನು ವೃದ್ಧಿಸುತ್ತಿದೆ. ಚೀನಾ - ಮಯನ್ಮಾರ್ ಎಕನಾಮಿಕ್ ಕಾರಿಡಾರ್ ಯೋಜನೆಯ ಮೂಲಕ, ಚೀನಾ ಭಾರತದ ಬಳಿ ತನ್ನ ಪ್ರಭಾವವನ್ನು ಹೆಚ್ಚಿಸಿ, ಹಿಂದೂ ಮಹಾಸಾಗರದಲ್ಲೂ ತನ್ನ ಉಪಸ್ಥಿತಿಯನ್ನು ತೋರಿದೆ. ಇದು ನವದೆಹಲಿಗೆ ಕಾರ್ಯತಂತ್ರ ಮತ್ತು ಭದ್ರತೆಯ ಸವಾಲುಗಳನ್ನು ಸೃಷ್ಟಿಸಿದ್ದು, ಅದರ ಪೂರ್ವಕ್ಕೆ ಆದ್ಯತೆ ನೀತಿಯನ್ನು ಜಾರಿಗೊಳಿಸಿ, ಪ್ರಾದೇಶಿಕ ಸಂಬಂಧವನ್ನು ವೃದ್ಧಿಸಲು ಕಷ್ಟಕರವಾಗಿಸಿದೆ.
2025ರಲ್ಲೂ ಭಾರತ ಮತ್ತು ಚೀನಾದ ಸಂಬಂಧವನ್ನು ಅವುಗಳ ನಡುವಿನ ಪೈಪೋಟಿಯೇ ರೂಪಿಸಲಿದೆ. ಭಾರತ ಚೀನಾವನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದಿದ್ದರೂ, ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಚೀನಾದೊಡನೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಬೇಕಿದೆ. ದಕ್ಷಿಣ ಏಷ್ಯಾ ಈ ಸ್ಪರ್ಧೆಯ ಕೇಂದ್ರವಾಗಿದ್ದು, ಇಲ್ಲಿನ ಸಣ್ಣ ದೇಶಗಳು ಭಾರತದ ನಾಯಕತ್ವ ಮತ್ತು ಚೀನಾದ ಬೆಳೆಯುತ್ತಿರುವ ಶಕ್ತಿಯ ನಡುವೆ ಸಿಲುಕಿಕೊಂಡಿವೆ.
ಭಾರತ - ಚೀನಾ ಸಂಬಂಧಕ್ಕಿರುವ ಇನ್ನೊಂದು ಸವಾಲೆಂದರೆ, ಆರ್ಥಿಕ ಸಹಕಾರದಲ್ಲಿ ಸಮತೋಲನ ಸಾಧಿಸುವುದು ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ ಪರಸ್ಪರ ಮೇಲಿರುವ ಅವಲಂಬನೆಯನ್ನು ಕಡಿಮೆಗೊಳಿಸುವುದು. ಭಾರತ ಚೀನಾ ನಡುವಿನ ಸಂಬಂಧ ಉದ್ವಿಗ್ನಗೊಂಡಿದ್ದರೂ, 2024ರಲ್ಲಿ ಚೀನಾ ಅಮೆರಿಕಾವನ್ನು ಹಿಂದಿಕ್ಕಿ, ಮತ್ತೊಮ್ಮೆ ಭಾರತದ ಅತಿದೊಡ್ಡ ವ್ಯಾಪಾರ ಸಹಯೋಗಿಯಾಗಿ ಹೊರಹೊಮ್ಮಿತು. 2024ರಲ್ಲಿ ಭಾರತ ಚೀನಾದಿಂದ 100 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಸರಕುಗಳನ್ನು ಖರೀದಿಸಿತ್ತು. ಡಿಸೆಂಬರ್‌ನಲ್ಲಿ ಮಾತುಕತೆಗಳಿಗೂ ಮುನ್ನ, ಭಾರತದ ಮುಖ್ಯ ಆರ್ಥಿಕ ಸಲಹೆಗಾರರು ಭಾರತ ಚೀನಾದಿಂದ ಇನ್ನೂ ಹೆಚ್ಚಿನ ಹೂಡಿಕೆಗಳನ್ನು ಆಕರ್ಷಿಸಬೇಕು ಎಂದು ಸಲಹೆ ನೀಡುವ ವರದಿಯೊಂದನ್ನು ಬಿಡುಗಡೆಗೊಳಿಸಿದ್ದರು.
ಚೀನೀ ಉತ್ಪನ್ನಗಳಿಗೆ ಭಾರತ ಒಂದು ಮುಖ್ಯ ಮತ್ತು ಬೃಹತ್ ಮಾರುಕಟ್ಟೆ. ಆದರೆ, ಚೀನಾ ವಿರೋಧಿ ಭಾವನೆಗಳು ಹೆಚ್ಚಿದ ಪರಿಣಾಮವಾಗಿ, ಅದರಲ್ಲೂ 2020 ಮತ್ತು 2021ರ ಗಡಿ ಚಕಮಕಿಯ ಬಳಿಕ, ಚೀನೀ ಹೂಡಿಕೆಯ ಮೇಲೆ ಕಟ್ಟುನಿಟ್ಟಿನ ನಿಯಮಗಳು ಜಾರಿಗೆ ಬಂದವು. ಅಂದಿನಿಂದ ಭಾರತ ವಿಶೇಷವಾಗಿ ಇಲೆಕ್ಟ್ರಾನಿಕ್ಸ್ ಮತ್ತು ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಚೀನೀ ಉತ್ಪನ್ನಗಳ ಮೇಲಿನ ಅವಲಂವನೆಯನ್ನು ಕಡಿಮೆಗೊಳಿಸಲು ಪ್ರಯತ್ನ ನಡೆಸಿತು. ಇದಕ್ಕಾಗಿ ಭಾರತ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಿ, ಬೇರೆ ಪೂರೈಕೆದಾರರನ್ನು ಹುಡುಕತೊಡಗಿತು. ಉದಾಹರಣೆಗೆ, 2021ರಲ್ಲಿ ಭಾರತದ ದೂರಸಂಪರ್ಕ ಸಚಿವಾಲಯ ಹುವಾವೇ ಮತ್ತು ಜ಼ೆಡ್‌ಟಿಇಯಂತಹ ಚೀನೀ ಕಂಪೆನಿಗಳನ್ನು ದೇಶದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷಿಸುವುದರಿಂದ ಹೊರಗಿಟ್ಟಿತು.
ಭಾರತ ಒಂದಷ್ಟು ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಬಯಸುತ್ತಿದ್ದು, ರಾಜಕೀಯವಾಗಿಯೂ ಇದು ಸರಿಯಾದ ನಿಲುವಾಗಿದೆ. ಆದರೆ, ವಾಸ್ತವವಾಗಿ ಅದು ಅಷ್ಟೊಂದು ಸರಳ ಮತ್ತು ಸುಲಭವಲ್ಲ. ಭಾರತ ತೈವಾನ್‌ನಿಂದ ಹೂಡಿಕೆ ತರಲು ಪ್ರಯತ್ನಿಸುತ್ತಿದ್ದು, ಸೆಮಿಕಂಡಕ್ಟರ್ ಉದ್ಯಮದ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದೆ. ಆದರೆ, ಚೀನಾ ಭಾರತದಲ್ಲಿ ಬಲವಾದ ಆರ್ಥಿಕ ಉಪಸ್ಥಿತಿ ಹೊಂದಿದ್ದು, ಭಾರತಕ್ಕೆ ಚೀನಾದಿಂದ ಬೇರ್ಪಟ್ಟು, ತನ್ನದೇ ಆದ ಸಾಮರ್ಥ್ಯವನ್ನು ವೃದ್ಧಿಸಲು ಸುದೀರ್ಘ ಸಮಯ ಬೇಕಾಗುತ್ತದೆ. ಒಂದಷ್ಟು ರಾಜತಾಂತ್ರಿಕ ಸುಧಾರಣೆಗಳ ಹೊರತಾಗಿಯೂ, 2025ರಲ್ಲಿ ಚೀನಾ ಜೊತೆಗಿನ ಭಾರತದ ಆರ್ಥಿಕ ಸಂಬಂಧ ಉದ್ವಿಗ್ನವಾಗಿಯೇ ಇರುವ ನಿರೀಕ್ಷೆಗಳಿವೆ. ಭಾರತ ಟ್ರಂಪ್ ಆಡಳಿತದೊಡನೆ ಹೆಚ್ಚು ಆತ್ಮೀಯವಾಗುತ್ತಿರುವುದೂ ಇದಕ್ಕೆ ಕಾರಣವಾಗಿದ್ದು, ಇದು ಭಾರತದ ಕಾರ್ಯತಂತ್ರದ ನಿರ್ಧಾರಗಳ ಮೇಲೆ ಮತ್ತು ಚೀನಾವನ್ನು ನೋಡುವ ದೃಷ್ಟಿಕೋನದ ಮೇಲೆ ಪ್ರಭಾವ ಬೀರುತ್ತಿದೆ.
ಮೋದಿಯವರ ಅಮೆರಿಕಾ ಭೇಟಿಯೂ ಈ ಬದಲಾವಣೆಗಳತ್ತ ಬೆಳಕು ಚೆಲ್ಲಿದ್ದು, ಅಮೆರಿಕಾ ಹಾಗೂ ಚೀನಾ ನಡುವಿನ ಉದ್ವಿಗ್ನತೆಗಳು ಸನ್ನಿವೇಶವನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ. ಒಂದು ವೇಳೆ ಭಾರತ ಏನಾದರೂ ಅಮೆರಿಕಾದತ್ತ ಇನ್ನೂ ಹೆಚ್ಚಿನ ಗಮನ ಹರಿಸಿದರೆ, ಅದರಿಂದ ಭಾರತಕ್ಕೆ ಹೆಚ್ಚೇನೂ ಪ್ರಯೋಜನವಾಗದು. ಆದರೆ, ಚೀನಾದ ಜೊತೆಗಿನ ಉದ್ಯಮ ಮತ್ತು ತಂತ್ರಜ್ಞಾನದ ಅವಕಾಶಗಳನ್ನು ಭಾರತ ಕಳೆದುಕೊಳ್ಳಬಹುದು. ಇದು ವಿಭಜಿತವಾದ ಪ್ರಪಂಚದಲ್ಲಿ ಸಂಬಂಧಗಳನ್ನು ನಿರ್ವಹಿಸುವುದು ಎಷ್ಟು ಕಷ್ಟ ಎಂಬುದನ್ನು ಪ್ರದರ್ಶಿಸಲಿದೆ. ತಮ್ಮ ಮಿಲಿಟರಿ ಮತ್ತು ಆರ್ಥಿಕ ಸಂಬಂಧವನ್ನು ಪ್ರತ್ಯೇಕವಾಗಿಸುವ ಜೊತೆಗೆ, ಭಾರತ ಮತ್ತು ಚೀನಾ ಜಾಗತಿಕ ರಾಜಕಾರಣದಲ್ಲಿ ತಮ್ಮ ಪೈಪೋಟಿಯನ್ನು ನಿರ್ವಹಿಸಲೂ ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ.
ದಕ್ಷಿಣ ಏಷ್ಯಾದಲ್ಲಿ ಚೀನಾ ಹೆಚ್ಚು ಶಕ್ತಿಶಾಲಿಯಾಗುತ್ತಿರುವುದು ಭಾರತಕ್ಕೆ ಸವಾಲಾಗಿದೆ. ಬೆಲ್ಟ್ ಆ್ಯಂಡ್ ರೋಡ್ ಇನಿಷಿಯೇಟಿವ್ ಭಾಗವಾಗಿರುವ ಚೈನಾ - ಪಾಕಿಸ್ತಾನ್ ಎಕನಾಮಿಕ್ ಕಾರಿಡಾರ್ ಈಗ ಚೀನಾ ಮತ್ತು ಪಾಕಿಸ್ತಾನಗಳನ್ನು ಇನ್ನಷ್ಟು ಹತ್ತಿರ ಸೆಳೆದಿದೆ. ಪಾಕಿಸ್ತಾನದ ಜೊತೆ ಕಾಶ್ಮೀರದ ಗಡಿ ವ್ಯಾಜ್ಯ ಹೊಂದಿರುವ ಭಾರತ, ಈ ಯೋಜನೆ ತನ್ನ ನೆಲ ಮತ್ತು ಹಕ್ಕಿನ ಮೇಲೆ ಪರಿಣಾಮ ಬೀರುತ್ತದೆ ಎಂದು ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.
ಹಂಬಂಟೋಟ ಬಂದರನ್ನು ಚೀನಾದ ಸಂಸ್ಥೆಗೆ ಗುತ್ತಿಗೆಗೆ ನೀಡಿರುವುದರಿಂದ, ಶ್ರೀಲಂಕಾದಲ್ಲೂ ಚೀನಾದ ಪ್ರಭಾವ ಹೆಚ್ಚಾಗುತ್ತಿದೆ. ಇದು ಭಾರತಕ್ಕೆ ಆತಂಕ ಉಂಟುಮಾಡಿದ್ದು, ತನ್ನ ಗಡಿಗಳ ಬಳಿ ಚೀನಾದ ಉಪಸ್ಥಿತಿ ಹೆಚ್ಚಾಗುತ್ತಿದೆ ಎಂದು ಭಾರತ ಭಾವಿಸಿದೆ. ಚೀನಾ ಹಂಬಂಟೋಟ ಬಂದರಿನಲ್ಲಿ ತನ್ನ ಸಂಶೋಧನಾ ನೌಕೆಗಳನ್ನು ನಿಲ್ಲಿಸಿದ್ದು, ಅದನ್ನು ಗುಪ್ತಚರ ಕಾರ್ಯಗಳಿಗೆ ಬಳಸಬಹುದು ಎಂದು ಭಾರತ ಆರೋಪಿಸಿದೆ. ಕಳೆದ ತಿಂಗಳು, ಶ್ರೀಲಂಕಾ ಚೀನಾದ ಇಂಧನ ಸಂಸ್ಥೆಯಾದ ಸಿನೊಪೆಕ್ ಜೊತೆ ಹಂಬಂಟೋಟದಲ್ಲಿ 3.7 ಬಿಲಿಯನ್ ಡಾಲರ್ ಮೌಲ್ಯದ ತೈಲ ಸಂಸ್ಕರಣಾಗಾರ ನಿರ್ಮಾಣದ ವೇಗವನ್ನು ಹೆಚ್ಚಿಸಲು ಒಪ್ಪಂದ ಮಾಡಿಕೊಂಡಿದೆ.
ಡಿಸೆಂಬರ್‌ನಲ್ಲಿ ನೇಪಾಳವೂ ಚೀನಾದ ಬಿಆರ್‌ಐ ಯೋಜನೆಗೆ ಸೇರ್ಪಡೆಗೊಂಡಿದ್ದು, ಅಂದಿನಿಂದ ಚೀನಾ ನೇಪಾಳದ ಮೂಲಭೂತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿದೆ. ಇದು ನೇಪಾಳದೊಡನೆ ಆರ್ಥಿಕ ಸಂಬಂಧವನ್ನು ವೃದ್ಧಿಸುವ ಚೀನಾದ ಬೃಹತ್ ಯೋಜನೆಯ ಭಾಗವಾಗಿದೆ. ನೇಪಾಳದ ಪೊಖಾರಾದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಲು ಚೀನಾ 200 ಮಿಲಿಯನ್ ಡಾಲರ್‌ಗೂ ಹೆಚ್ಚು ಮೊತ್ತವನ್ನು ಹೂಡಿಕೆ ಮಾಡಿರುವುದು ಇದಕ್ಕೆ ಉದಾಹರಣೆಯಾಗಿದೆ.
ಆದರೆ, ಚೀನಾ ಈ ವಿಮಾನ ನಿಲ್ದಾಣವನ್ನು ಮಿಲಿಟರಿ ಉದ್ದೇಶಗಳಿಗೆ ಬಳಸಬಹುದು ಎನ್ನುವುದು ಭಾರತದ ಆತಂಕಕ್ಕೆ ಕಾರಣವಾಗಿದೆ. ಭಾರತ ಚೀನಾದ ಕ್ರಮಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ನೇಪಾಳಕ್ಕೆ ವಿವಿಧ ಅಭಿವೃದ್ಧಿ ಯೋಜನೆಗಳು, ಕೃಷಿ ಉತ್ಪನ್ನಗಳ ರಫ್ತು, ಹೆಚ್ಚು ಜಲ ವಿದ್ಯುತ್ ಖರೀದಿ, ಡ್ರೈ ಪೋರ್ಟ್ ನಿರ್ಮಾಣ ಯೋಜನೆ, ಭಾರತ - ನೇಪಾಳದ ನಡುವೆ ಸಾಂಸ್ಕೃತಿಕ ಬಾಂಧವ್ಯದಂತಹ ಹಲವು ಕ್ರಮಗಳನ್ನು ಕೈಗೊಂಡಿದೆ. ಡ್ರೈ ಪೋರ್ಟ್ ಎನ್ನುವುದು ಒಂದು ಭೂ ವ್ಯವಸ್ಥೆಯಾಗಿದ್ದು, ಇಲ್ಲಿ ಸರಕುಗಳ ಸಾಗಣೆ, ಸಂಗ್ರಹ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳನ್ನು ನಡೆಸಲಾಗುತ್ತದೆ. ಸಮುದ್ರದ ಬಂದರಿನ ರೀತಿಯಲ್ಲಿ ಇದು ಭೂಮಿಯ ಬಂದರಾಗಿದೆ.
ಆಗಸ್ಟ್ 2024ರಲ್ಲಿ ಪ್ರಧಾನಿ ಶೇಖ್ ಹಸೀನಾ ನಿರ್ಗಮನದ ಬಳಿಕ, ಚೀನಾ ಬಾಂಗ್ಲಾದೇಶದ ಮೇಲೆ ಪ್ರಭಾವ ಬೀರುವುದನ್ನು ತನ್ನ ಆದ್ಯತೆಯಾಗಿಸಿದೆ. ಕಳೆದ ತಿಂಗಳು ಚೀನಾ ಬಿಆರ್‌ಐ ಯೋಜನೆಯಡಿ ಬಡ್ಡಿ ದರವನ್ನು ಕಡಿಮೆಗೊಳಿಸುವ ಭರವಸೆ ನೀಡಿ, ಸಾಲ ಮರುಪಾವತಿಗೆ ಬಾಂಗ್ಲಾದೇಶಕ್ಕೆ ಹೆಚ್ಚಿನ ಸಮಯ ನೀಡುವುದಾಗಿ ಹೇಳಿದೆ. ಈ ಮೂಲಕ ಬಾಂಗ್ಲಾದೇಶದ ತಾತ್ಕಾಲಿಕ ಸರ್ಕಾರದೊಡನೆ ಹೆಚ್ಚಿನ ಬಾಂಧವ್ಯವನ್ನು ಸಾಧಿಸಿದೆ. ಭಾರತ ಮತ್ತು ಚೀನಾ ಎರಡರೊಡನೆಯೂ ಗಡಿ ಹಂಚಿಕೊಳ್ಳುವ ಮಯನ್ಮಾರ್‌ನಲ್ಲಿ ದಂಗೆಯ ಬಳಿಕ ಸೇನೆ ಅಧಿಕಾರ ವಹಿಸಿಕೊಂಡ ಬಳಿಕ ಉದ್ವಿಗ್ನತೆ ನಿರಂತರವಾಗಿ ಮುಂದುವರಿದಿದೆ.
ಚೀನಾ ಮಯನ್ಮಾರ್‌ನ ಮಿಲಿಟರಿ ಸರ್ಕಾರ ಮತ್ತು ಬಂಡಾಯ ಗುಂಪುಗಳೆರಡ ಜೊತೆಗೂ ಸಮಾಲೋಚಿಸಿದ್ದು, ಅವುಗಳಿಗೆ ಮಧ್ಯಸ್ಥಿಕೆ, ಆಯುಧ ಪೂರೈಕೆ ಎರಡನ್ನೂ ನಡೆಸಿದೆ. ಆದರೆ, ಭಾರತ ಇದರಲ್ಲಿ ಪಾಲ್ಗೊಳ್ಳದೆ, ತಟಸ್ಥವಾಗಿ ಉಳಿದಿದೆ. ಭಾರತ ಮಯನ್ಮಾರ್ ವಿಚಾರದಲ್ಲಿ ಮಧ್ಯ ಪ್ರವೇಶಿಸದೆ ಉಳಿದರೂ, ಚೀನಾ ಮಯನ್ಮಾರ್ ಜೊತೆಗಿನ ಸಂಬಂಧವನ್ನು ವೃದ್ಧಿಸುತ್ತಿದೆ. ಚೀನಾ - ಮಯನ್ಮಾರ್ ಎಕನಾಮಿಕ್ ಕಾರಿಡಾರ್ ಯೋಜನೆಯ ಮೂಲಕ, ಚೀನಾ ಭಾರತದ ಬಳಿ ತನ್ನ ಪ್ರಭಾವವನ್ನು ಹೆಚ್ಚಿಸಿ, ಹಿಂದೂ ಮಹಾಸಾಗರದಲ್ಲೂ ತನ್ನ ಉಪಸ್ಥಿತಿಯನ್ನು ತೋರಿದೆ. ಇದು ನವದೆಹಲಿಗೆ ಕಾರ್ಯತಂತ್ರ ಮತ್ತು ಭದ್ರತೆಯ ಸವಾಲುಗಳನ್ನು ಸೃಷ್ಟಿಸಿದ್ದು, ಅದರ ಪೂರ್ವಕ್ಕೆ ಆದ್ಯತೆ ನೀತಿಯನ್ನು ಜಾರಿಗೊಳಿಸಿ, ಪ್ರಾದೇಶಿಕ ಸಂಬಂಧವನ್ನು ವೃದ್ಧಿಸಲು ಕಷ್ಟಕರವಾಗಿಸಿದೆ.
2025ರಲ್ಲೂ ಭಾರತ ಮತ್ತು ಚೀನಾದ ಸಂಬಂಧವನ್ನು ಅವುಗಳ ನಡುವಿನ ಪೈಪೋಟಿಯೇ ರೂಪಿಸಲಿದೆ. ಭಾರತ ಚೀನಾವನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದಿದ್ದರೂ, ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಚೀನಾದೊಡನೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಬೇಕಿದೆ. ದಕ್ಷಿಣ ಏಷ್ಯಾ ಈ ಸ್ಪರ್ಧೆಯ ಕೇಂದ್ರವಾಗಿದ್ದು, ಇಲ್ಲಿನ ಸಣ್ಣ ದೇಶಗಳು ಭಾರತದ ನಾಯಕತ್ವ ಮತ್ತು ಚೀನಾದ ಬೆಳೆಯುತ್ತಿರುವ ಶಕ್ತಿಯ ನಡುವೆ ಸಿಲುಕಿಕೊಂಡಿವೆ.
ಇದು ನವದೆಹಲಿಗೆ ಕಾರ್ಯತಂತ್ರ ಮತ್ತು ಭದ್ರತೆಯ ಸವಾಲುಗಳನ್ನು ಸೃಷ್ಟಿಸಿದ್ದು, ಅದರ ಪೂರ್ವಕ್ಕೆ ಆದ್ಯತೆ ನೀತಿಯನ್ನು ಜಾರಿಗೊಳಿಸಿ, ಪ್ರಾದೇಶಿಕ ಸಂಬಂಧವನ್ನು ವೃದ್ಧಿಸಲು ಕಷ್ಟಕರವಾಗಿಸಿದೆ. 2025ರಲ್ಲೂ ಭಾರತ ಮತ್ತು ಚೀನಾದ ಸಂಬಂಧವನ್ನು ಅವುಗಳ ನಡುವಿನ ಪೈಪೋಟಿಯೇ ರೂಪಿಸಲಿದೆ. ಭಾರತ ಚೀನಾವನ್ನು ಸಂಪೂರ್ಣವಾಗಿ ನಂಬಲು ಸಾಧ್ಯವಿಲ್ಲದಿದ್ದರೂ, ತನ್ನ ಆರ್ಥಿಕ ಹಿತಾಸಕ್ತಿಗಳನ್ನು ಕಾಪಾಡಲು ಚೀನಾದೊಡನೆ ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಬೇಕಿದೆ. ದಕ್ಷಿಣ ಏಷ್ಯಾ ಈ ಸ್ಪರ್ಧೆಯ ಕೇಂದ್ರವಾಗಿದ್ದು, ಇಲ್ಲಿನ ಸಣ್ಣ ದೇಶಗಳು ಭಾರತದ ನಾಯಕತ್ವ ಮತ್ತು ಚೀನಾದ ಬೆಳೆಯುತ್ತಿರುವ ಶಕ್ತಿಯ ನಡುವೆ ಸಿಲುಕಿಕೊಂಡಿವೆ.
ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಇಮೇಲ್: girishlinganna@gmail.com