ರವಿಶಾಸ್ತ್ರಿ 
ಕ್ರಿಕೆಟ್

ಕೊಹ್ಲಿಯಂತೆ ತಂಡ ಮುನ್ನಡೆಸಿದ ಯಾವ ನಾಯಕರೂ ಇಲ್ಲ; ನಾಯಕತ್ವ ವಿಚಾರವನ್ನು ಇನ್ನೂ ಉತ್ತಮವಾಗಿ ನಿಭಾಯಿಸಬಹುದಿತ್ತು: ರವಿಶಾಸ್ತ್ರಿ

ಭಾರತ ಕ್ರಿಕೆಟ್ ತಂಡವನ್ನು ವಿರಾಟ್ ಕೊಹ್ಲಿಯಂತೆ ಯಶಸ್ವಿಯಾಗಿ ಮುನ್ನಡೆಸಿದ ಯಾವ ನಾಯಕರೂ ಇಲ್ಲ.. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವ ವಿಚಾರವನ್ನು ಬಿಸಿಸಿಐ ಇನ್ನೂ ಉತ್ತಮವಾಗಿ ಬಗೆಹರಿಸಬಹುದಿತ್ತು ಎಂದು ಮಾಜಿ ಕೋಚ್ ರವಿಶಾಸ್ತ್ರಿ  ಹೇಳಿದ್ದಾರೆ.

ನವದೆಹಲಿ: ಭಾರತ ಕ್ರಿಕೆಟ್ ತಂಡವನ್ನು ವಿರಾಟ್ ಕೊಹ್ಲಿಯಂತೆ ಯಶಸ್ವಿಯಾಗಿ ಮುನ್ನಡೆಸಿದ ಯಾವ ನಾಯಕರೂ ಇಲ್ಲ.. ಇಂತಹ ಪರಿಸ್ಥಿತಿಯಲ್ಲಿ ನಾಯಕತ್ವ ವಿಚಾರವನ್ನು ಬಿಸಿಸಿಐ ಇನ್ನೂ ಉತ್ತಮವಾಗಿ ಬಗೆಹರಿಸಬಹುದಿತ್ತು ಎಂದು ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ  ಭಾರತೀಯ ಕ್ರಿಕೆಟ್‌ನಲ್ಲಿ  ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಟೀಂ ಇಂಡಿಯಾ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದು,  ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ನಾಯಕ ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದು ಅಪ್ರಸ್ತುತ. ಸ್ವಲ್ಪ ಯೋಚಿಸಿ ಇದನ್ನು ಬಗೆಹರಿಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. 

ಆದರೆ, ಸೀಮಿತ ಓವರ್‌ಗಳ ನಾಯಕರಾಗಿ ರೋಹಿತ್ ಶರ್ಮಾ ಅವರನ್ನು ನೇಮಿಸಿದ ಹಿನ್ನೆಲೆಯಲ್ಲಿ, ಟಿ-20 ನಾಯಕತ್ವದಿಂದ ಕೆಳಗಿಳಿಯದಂತೆ ಈ ಹಿಂದೆ ತಾವು ಕೊಹ್ಲಿಗೆ ಸಲಹೆ ನೀಡಿದ್ದಾಗಿ, ಆದರೆ ನನ್ನ ಮಾತು ಅವರು ಕೇಳಲಿಲ್ಲ ಎಂದು ಗಂಗೂಲಿ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ್ದ  ಕೊಹ್ಲಿ, ದಾದಾ ತಮ್ಮೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಬಿಸಿಸಿಐ ಅಧ್ಯಕ್ಷರಿಂದ ಇಂತಹ ಮಾತು ತಾವು ನಿರೀಕ್ಷಿಸಿರಲಿಲ್ಲ ಎಂದು ಕಟು ಟೀಕೆ ಮಾಡಿದ್ದಾರೆ. ಆದರೆ, ಗಂಗೂಲಿ ಮಾತ್ರ ಕೊಹ್ಲಿ ಹೇಳಿಕೆಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಮಾತನಾಡಿದ ರವಿಶಾಸ್ತ್ರಿ, ವಿರಾಟ್ ತಾವು ಏನು ಹೇಳಬೇಕು ಎಂದುಕೊಂಡಿದ್ದರೋ  ಅದನ್ನು ಹೇಳಿಬಿಟ್ಟಿದ್ದಾರೆ. ಈಗ ಮಂಡಳಿಯ ಅಧ್ಯಕ್ಷರು ತಮ್ಮ ಅಭಿಪ್ರಾಯ ಹೇಳಬೇಕು. ಯಾರು ಸುಳ್ಳು ಹೇಳುತ್ತಿದ್ದಾರೆ. ಯಾರು ಸತ್ಯ ಹೇಳುತ್ತಿದ್ದಾರೆ ಎಂಬುದು ಇಲ್ಲಿ ವಿಷಯವಲ್ಲ ಎಂದಿದ್ದಾರೆ.

ವಾಸ್ತವವಾಗಿ ಅವರ ನಡುವೆ ನಡೆದ ಮಾತುಕತೆ ಸಂಪೂರ್ಣವಾಗಿ ತಿಳಿಯುವವರೆಗೆ ಯಾರು ಯಾವುದೇ ವ್ಯಾಖ್ಯಾನ ಮಾಡಬಾರದು. ಇಬ್ಬರ ನಡುವೆ ಯಾವುದೇ ಹೊಂದಾಣಿಕೆ ಇದ್ದಿದ್ದರೆ ಸಮಸ್ಯೆ ಇಲ್ಲಿಯವರೆಗೆ ಬರುತ್ತಿರಲಿಲ್ಲ. ಏಕದಿನ, ಟಿ-20 ನಾಯಕರಾಗಿ ರೋಹಿತ್ ಶರ್ಮಾ ನೇಮಕವನ್ನು ಸಮರ್ಥಿಸಿಕೊಂಡ ರವಿಶಾಸ್ತ್ರಿ, ಸದ್ಯ ಟೆಸ್ಟ್ ನಲ್ಲಿ ಕೊಹ್ಲಿ ವಿಶ್ವದ ನಂಬರ್ ಒನ್ ನಾಯಕ ಎಂದು ಹೊಗಳಿದ್ದಾರೆ. ‘ಕೊಹ್ಲಿ ಅವರಷ್ಟು ಸಮರ್ಪಣಾ ಮನೋಭಾವದಿಂದ ತಂಡವನ್ನು ಮುನ್ನಡೆಸಿದ ಯಾವ ನಾಯಕರೂ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ನಾನು ಕೊಹ್ಲಿಯೊಂದಿಗೆ ಬಹಳ ಸಮಯ ಪ್ರಯಾಣಿಸಿದ್ದೇನೆ. ಅವರೊಂದಿಗಿನ ಬಾಂಧವ್ಯ ಅದ್ವಿತೀಯ. ಆತ್ಮ ವಿಶ್ವಾಸದಿಂದ ತಂಡ ಗೆಲ್ಲಿಸಲು ಅವರು ಕಠಿಣ ಆಟವಾಡುತ್ತಾರೆ’ ಎಂದು ಕೊಹ್ಲಿಯನ್ನು ಹೊಗಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಕ್ಷಣಾ, ಭದ್ರತಾ ಒಪ್ಪಂದ ಬಲವರ್ಧನೆ: ಭಾರತ- ಜರ್ಮನಿ ಮಹತ್ವದ ಕ್ರಮಗಳ ಘೋಷಣೆ!

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

'ಅಜ್ಮೀರ್' ದರ್ಗಾ ಶಿವ ದೇಗುಲವಾಗಿತ್ತು: ಕೋರ್ಟ್ ಮೆಟ್ಟಿಲೇರಿದ ವಿವಾದ!

'ವಿಬಿ-ಜಿ-ರಾಮ್' ಕಾಯ್ದೆ ವಿರುದ್ಧ ಕಾನೂನು ಸಮರ: ವಿಶೇಷ ಅಧಿವೇಶನ ಕರೆದು ಚರ್ಚೆ- ಸಿಎಂ ಸಿದ್ದರಾಮಯ್ಯ

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT