ಮುಂಬೈ: ಐಸಿಸಿ ಟಿ20 ವಿಶ್ವಕಪ್ 2026ರ ಟೂರ್ನಿಯ 2ನೇ ಸೆಮಿ ಫೈನಲ್ ನಲ್ಲಿ ಭಾರತದ ವಿರುದ್ಧ ಸ್ಫೋಟಕ ಶತಕ ಗಳಿಸಿದ ಇಂಗ್ಲೆಂಡ್ ನ ಜೇಕಬ್ ಬೆಥೆಲ್ ದಾಖಲೆ ಸುರಿಮಳೆಗೆ ಪಾತ್ರರಾಗಿದ್ದಾರೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ-ಇಂಗ್ಲೆಂಡ್ ನಡುವಿನ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ 7 ರನ್ ಗಳ ವಿರೋಚಿತ ಗೆಲುವು ಸಾಧಿಸಿತು.
ಭಾರತ ನೀಡಿದ್ದ 254 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ್ದ ಇಂಗ್ಲೆಂಡ್ ತಂಡ ಜೇಕಬ್ ಬೆಥಲ್ ಅವರ ಅಮೋಘ ಶತಕದ ನೆರವಿನಿಂದ ಗೆಲುನಂಚಿಗೆ ಬಂದು ತಲುಪಿತ್ತು. ಆದರೆ ಭಾರತದ ಅನುಭವಿ ಬೌಲರ್ ಗಳ ಕರಾರುವಕ್ಕಾದ ಬೌಲಿಂಗ್ ದಾಳಿ ನೆರವಿನಿಂದ ಭಾರತ ಸೋಲಿನಿಂದ ಪಾರಾಯಿತು.
ಇನ್ನು ಈ ಪಂದ್ಯ ಸಿಡಿಲಬ್ಬರದ ಬ್ಯಾಟಿಂಗ್ ಗೆ ವೇದಿಕೆಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ನಿಗಧಿತ 20 ಓವರ್ ನಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ (89 ರನ್)ದ ನೆರವಿನಿಂದ 253 ರನ್ ಪೇರಿಸಿತು.
ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ತಂಡ ಕೂಡ ನಿಗಧಿತ 20 ಓವರ್ ನಲ್ಲಿ ಜೇಕಬ್ ಬೆಥೆಲ್ ಸ್ಫೋಟಕ ಶತಕದ ನೆರವಿನಿಂದ 246 ರನ್ ಗಳಿಸಿ ಕೇವಲ 7 ರನ್ ಅಂತರದಲ್ಲಿ ವಿರೋಚಿತ ಸೋಲು ಕಂಡಿತು. ಬೆಥೆಲ್ ಕೇವಲ 48 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 105 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಬೆಥೆಲ್ ಸಾಕಷ್ಟು ದಾಖಲೆಗಳಿಗೆ ಪಾತ್ರರಾಗಿದ್ದಾರೆ.
ಟಿ20 ವಿಶ್ವಕಪ್ ನಾಕೌಟ್ ನಲ್ಲಿ ಗರಿಷ್ಠ ಸ್ಕೋರ್
ಭಾರತದ ವಿರುದ್ಧದ 2ನೇ ಸೆಮಿ ಫೈನಲ್ ನಲ್ಲಿ 105 ರನ್ ಪೇರಿಸಿದ ಬೆಥೆಲ್ ಟಿ20 ವಿಶ್ವಕಪ್ ಇತಿಹಾಸದಲ್ಲೇ ನಾಕೌಟ್ ನಲ್ಲಿ ಗರಿಷ್ಠ ರನ್ ಪೇರಿಸಿದ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಇದಕ್ಕೂ ಮೊದಲು ಇದೇ ಟೂರ್ನಿಯ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನ ಫಿನ್ ಅಲೆನ್ ಅಜೇಯ ಶತಕ ಸಿಡಿಸಿದ್ದು ಈ ವರೆಗಿನ ಬ್ಯಾಟರ್ ವೊಬ್ಬರ ಗರಿಷ್ಠ ರನ್ ಗಳಾಗಿತ್ತು.
Highest individual scores in T20 WC knockouts
105 - Jacob Bethell vs IND, Mumbai WS, 2026
100* - Finn Allen vs SA, Kolkata, 2026 SF
96* - Tillakaratne Dilshan vs WI, The Oval, 2009 SF
89* - Virat Kohli vs WI, Mumbai WS, 2016 SF
89 - Sanju Samson vs ENG, Mumbai WS, 2026
(Three of the top five in ongoing edition)
ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ಪರ ಶತಕ
ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ಪರ ಶತಕ ಸಿಡಿಸಿದ ಆಟಗಾರರ ಪೈಕಿ ಜೇಕಬ್ ಬೆಥೆಲ್ 2ನೇ ಸ್ಥಾನಕ್ಕೇರಿದ್ದಾರೆ. ಇದಕ್ಕೂ ಮೊದಲು 2014ರಲ್ಲಿ ಅಲೆಕ್ಸ್ ಹೇಲ್ಸ್ (ಅಜೇಯ 116), 2021ರಲ್ಲಿ ಜಾಸ್ ಬಟ್ಲರ್ (ಅಜೇಯ 101), ಇದೇ ಟೂರ್ನಿಯ ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಹ್ಯಾರಿ ಬ್ರೂಕ್ ಶತಕ ಸಿಡಿಸಿದ್ದರು.
T20 WC hundreds for ENG
116* - Alex Hales vs SL, Chattogram, 2014
105 - Jacob Bethell vs IND, Mumbai WS, 2026
101* - Jos Buttler vs SL, Sharjah, 2021
100 - Harry Brook vs PAK, Pallekele, 2026*
6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದ ಬ್ಯಾಟರ್ ಗಳಿಂಗ ಗರಿಷ್ಠ ಸ್ಕೋರ್
ಅಂತೆಯೇ ಹಾಲಿ ಟೂರ್ನಿಯಲ್ಲಿ 6 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಗರಿಷ್ಟ ಸ್ಕೋರ್ ಮಾಡಿದ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ನ ವಿಲ್ ಜ್ಯಾಕ್ಸ್ ಅಗ್ರಸ್ಥಾನಕ್ಕೇರಿದ್ದಾರೆ.
ಹಾಲಿ ಟೂರ್ನಿಯಲ್ಲಿ ವಿಲ್ ಜ್ಯಾಕ್ಸ್ 176.56 ಸರಾಸರಿಯಲ್ಲಿ 226ರನ್ ಕಲೆಹಾಕಿದ್ದಾರೆ. ಇದಕ್ಕೂ ಮೊದಲು 2007ರಲ್ಲಿ ಪಾಕಿಸ್ತಾನದ ಮಿಸ್ ಬಾ ಉಲ್ ಹಕ್ 139.74 ಸರಾಸರಿಯಲ್ಲಿ 218ರನ್ ಕಲೆಹಾಕಿದ್ದರು.
Most runs from No.6 or lower in a T20 WC edition
226 - Will Jacks in 2026 (SR: 176.56)
218 - Misbah-ul-Haq in 2007 (SR: 139.74)
175 - Cameron White in 2010 (SR: 149.57)
171 - Michael Hussey in 2010 (SR: 172.72)
167 - Sam Curran in 2026 (SR: 120.14)