ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೀದರ್

ಅಪೌಷ್ಟಿಕತೆ ತೊಲಗಿಸಲು ಅಧಿಕಾರಿಗಳ ಜವಾಬ್ದಾರಿ ಮುಖ್ಯ: ಘೋಷ್

Parashurama
Updated On : 10 Feb 2013, 10:53 am

ಬೀದರ್: ಮಕ್ಕಳಲ್ಲಿನ ಅಪೌಷ್ಟಿಕತೆ ಹೊಗಲಾಡಿಸಲು ಸಂಬಂಧಪಟ್ಟ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಜ್ವಲಕುಮಾರ ಘೋಷ್ ಕರೆ ನೀಡಿದರು.
  ಜಿಲ್ಲಾ ತರಬೇತಿ ಕೇಂದ್ರದ ಪ್ರಾಯೋಜಕತ್ವದಲ್ಲಿ ಆಡಳಿತ ತರಬೇತಿ ಸಂಸ್ಥೆ ಮೈಸೂರು ಮತ್ತು ಜಿಪಂ ಆಶ್ರಯದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳಿಗೆ ಪೌಷ್ಟಿಕಾಂಶ ಪರಿಣಾಮಕಾರಿ ಅನುಷ್ಠಾನ ಕುರಿತು ಜಿಪಂ ಸಭಾಂಗಣದಲ್ಲಿ ಎರಡು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಶಿಶು ಸಮಾಜದ ಸಂಪತ್ತು ಅದಕ್ಕಾಗಿ ಮಕ್ಕಳಲ್ಲಿನ ಅಪೌಷ್ಟಿಕತೆ ಕುರಿತು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕೆಂದರು.
ಸಹಕಾರ: ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಪತ್ತೆಗೆ ಸಮಿತಿ ರಚಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸಿ ಪೌಷ್ಟಿಕಾಂಶ ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಇದಕ್ಕಾಗಿ ಜಿಪಂ ಎಲ್ಲಾ ಸಹಕಾರ ಒದಗಿಸುವುದಾಗಿ ಹೇಳಿದರು. ಕಾರ್ಯಾಗಾರದ ಸದ್ಬಳಕೆ ಮಾಡಿಕೊಂಡು ಪೌಷ್ಟಿಕತೆ, ಅಪೌಷ್ಟಿಕತೆ ಕುರಿತು ಪಾಲಕರಲ್ಲಿ ಜಾಗೃತಿ ಮೂಡಿಸಿ ಅದನ್ನು ಹೊಗಲಾಡಿಸುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡಬೇಕೆಂದು ಹೇಳಿದರು.
  ಕೃಷಿ ವಿಜ್ಞಾನ ಕೇಂದ್ರದ ಡಾ.ಕೆ.ಭವಾನಿ ಉಪನ್ಯಾಸಕರಾಗಿ ಮಾತನಾಡಿ, ಚಿಕ್ಕ ಮಕ್ಕಳಲ್ಲಿ, ಗರ್ಭಿಣಿಯರಲ್ಲಿ, ಹಾಲುಣಿಸುವ ತಾಯಂದಿರಲ್ಲಿ, ಗ್ರಾಮೀಣ ಭಾಗದ ಅನಕ್ಷರಸ್ಥರಲ್ಲಿ ಅಪೌಷ್ಟಿಕತೆ ಹೆಚ್ಚಾಗಿ ಕಂಡು ಬರುತ್ತದೆ. ಮಗು ಹುಟ್ಟಿದ ಅರ್ಧ ಗಂಟೆಯೊಳಗೆ ಎದೆಹಾಲು ಕುಡಿಸುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಗುವಿಗೆ ಕನಿಷ್ಠ 6 ತಿಂಗಳವರೆಗೆ ಹಾಲು ಕುಡಿಸುವುದರಿಂದ ಯಾವುದೇ ಸೊಂಕು ಬಾರದಂತೆ ತಡೆಯಬಹುದು. ಅಲ್ಲದೇ ಎದೆಹಾಲಿನ ಜೊತೆಗೆ ಪೂರಕ ಆಹಾರವಾದ ಬೆಳೆಯ ತಿಳಿ, ಹಣ್ಣಿನ ರಸ, ಚೆನ್ನಾಗಿ ಬೆಯಿಸಿದ ತರಕಾರಿ ನೀಡಬೇಕು. ಈ ಪೂರಕ ಆಹಾರದೊಂದಿಗೆ ಮಗುವಿಗೆ ಎರಡು ವರ್ಷದ ವರೆಗೂ ಎದೆಹಾಲು ಕಡ್ಡಾಯವಾಗಿ ಉಣಿಸಬೇಕು.
ಉದಾಹರಣೆ: ಆಯಾ ಕಾಲದಲ್ಲಿ ಸಿಗುವ ಎಲ್ಲಾ ತರಕಾರಿ ಹಣ್ಣುಗಳು ಸೇವನೆ ಮಾಡಬೇಕು. ಇದರಿಂದ ಅವುಗಳ ಬೆಲೆಯೂ ಕಡಿಮೆಯಾಗುತ್ತವೆ. ಬೇಕರಿ ಪದಾರ್ಥಗಳು ತಿನ್ನಲೆಬಾರದು. ಜೋಳ, ಗೋಧಿಯೊಂದಿಗೆ ಕಿರುಧಾನ್ಯಗಳಾದ ನವಣೆ ಅಕ್ಕಿ, ಸಜ್ಜೆರೊಟ್ಟಿ ಇವುಗಳು ಬಳಸುವುದರಿಂದ ಹೆಚ್ಚಿನ ಜೀವಸತ್ವ ಸಿಗುತ್ತವೆ ಎಂದರು. ಕ್ಯಾರೆಟ್, ಬಿಟ್ರೂಟ್, ಮೂಲಂಗಿ, ಗಡ್ಡೆಕೋಸು, ಕಾಳುಬೆಳೆ ಸಿಪ್ಪೆ ಸಹಿತ ಬಳಸಬೇಕೆಂದು ತಿಳಿಸಿದ ಅವರು ಹೀಗೆ ಆಹಾರ ಬಳಕೆ ಕುರಿತು ಹತ್ತು ಹಲವಾರು ಉದಾಹರಣೆಗಳ ಮೂಲಕ ವಿವರಿಸಿದರು.
  ಮೈಸೂರಿನ ಸಿ.ಅಶೋಕ ಪ್ರಾಸ್ತಾವಿಕ ಮಾತನಾಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಶಾಂತಕುಮಾರ ಪಾಟೀಲ ವಂದಿಸಿದರು.
  ಜಿಲ್ಲಾ ಅಭಿವೃದ್ಧಿ ಕೇಂದ್ರದ ಸಹಾಯಕ ಪ್ರಾಂಶುಪಾಲರಾದ ಬಿ.ಎಮ್. ಸ್ವಾಮಿ ಮತ್ತು ವಿನಾಯಕ ಬಿರಾದಾರ ಸೇರಿದಂತೆ ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments