ಬೀದರ್: ಬೀದರ್ ದಕ್ಷಿಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ನಿರ್ಣಾ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಭೆ ಶುಕ್ರವಾರ ನಿರ್ಣಾ ಗ್ರಾಮದ ಭವಾನಿ ಮಂದಿರದಲ್ಲಿ ಜರುಗಿತು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವರಾಜ ಕುದುರೆ ಮಾತನಾಡಿ, ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಪಕ್ಷದ ಏಳ್ಗೆಗಾಗಿ ಮತ್ತು ಬೂತ್ ಮಟ್ಟದಿಂದ ಸಂಘಟನೆಗಾಗಿ ಎಲ್ಲರೂ ಗಮನಹರಿಸಬೇಕೆಂದು ಸಲಹೆ ನೀಡಿದರು. ಶಕ್ತಿ ಕೇಂದ್ರ ಪ್ರಮುಖರಾದ ಕಾಶಿನಾಥ ಸಲಹೆಗಾರ ಮಾತನಾಡಿ, ಅಭ್ಯರ್ಥಿ ಕುರಿತು ಚಿಂತಿಸದೇ, ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಕಾರ್ಯಗತರಾಗಬೇಕೆಂದರು. ದಕ್ಷಿಣ ಕ್ಷೇತ್ರದ ಮಂಡಲ್ ಅಧ್ಯಕ್ಷ ಸುರೇಶ ಮಾಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ದಕ್ಷಿಣ ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಮನ್ಮಥ ಕಾಡವಾದ, ರಾಜು ವಡ್ಡಿ, ಹಾಗೂ ಶಕ್ತಿ ಕೇಂದ್ರದ ಪ್ರಮುಖರಾದ ಶರಣು ಪಾಟೀಲ್, ಕಂಠೆಪ್ಪ ಬಿರಾದಾರ, ಭೀಮರಾವ್, ರಾಜಶೇಖರ ಕಲಹೋಲ್, ವೀರಶೇಟ್ಟಿ ಭದ್ರಪ್ಪನೋರ್, ಶಿವಕುಮಾರ ಹೋಳಕುಂದಿ, ವಿಜಯಕುಮಾರ ವಿಜಾಪೂರೆ, ಶಂಕರ ಉದಗೀರೆ ಇದ್ದರು. ಮನ್ಮಥ ಕಾಡವಾಡ ಸ್ವಾಗತಿಸಿದರೆ ಶರಣು ಪಾಟೀಲ ನಿರೂಪಿಸಿ ರಾಜು ವಡ್ಡಿ ವಂದಿಸಿದರು.
Subscribe and Receive exclusive content and updates on your favorite topics
Advertisement
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.