ವಿವಿಧ ಕಾಮಗಾರಿಗಳಿಗೆ ರು. 28 ಲಕ್ಷ ಮಂಜೂರು
ಹುಮನಾಬಾದ್: ಪಟ್ಟಣದಲ್ಲಿ ಮುಖ್ಯ ದ್ವಾರ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ರು. 28 ಲಕ್ಷ ಮಂಜೂರಾಗಿದೆ ಎಂದು ಶಾಸಕ ರಾಜಶೇಖರ ಪಾಟೀಲ್ ತಿಳಿಸಿದರು.
ಪಟ್ಟಣದ ಶಿವಚಂದ್ರ ವೃತ್ತದ ಬಳಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳ ಸಾರ್ವಜನಿಕರು ಬಂದು ಹೋಗುವ ಮುಖ್ಯ ಪಟ್ಟಣವಾಗಿದ್ದು, ಪಟ್ಟಣದ ಸೌಂದರ್ಯ ಹೆಚ್ಚಿಸಲು ಮುಖ್ಯದ್ವಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಶಿವಪುರ ಬೇಸ್ ಬಳಿ ಇರುವ ಅಗಸಿಯನ್ನು ನವಿಕರಣಗೊಳಿಸಿ ಗಡಿಯಾರ ಕೂಡಿಸಲಾಗುವುದು. ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ವೃತ್ತದ ಸುತ್ತು ವಿಸ್ತರಣೆ ಹಾಗೂ ಬಸವೇಶ್ವರ ವೃತ್ತದ ಸುಧಾರಣೆ ಸೇರಿ ಸುಮಾರು 28 ಲಕ್ಷ ಅನುದಾನ ಬಿಡುಗಡೆಯಾಗಿದೆ ಕಾಮಗಾರಿ ಪೂರ್ಣಗೊಂಡ ನಂತರ ಸುಂದರ ಪಟ್ಟಣವನ್ನಾಗುವುದು ಎಂದರು. ಪುರಸಭೆ ಅಧ್ಯಕ್ಷ ಪದ್ಮಾವತಿ ಮಚೂಕುರಿ, ಉಪಾಧ್ಯಕ್ಷ ಬಾಸಿದ್, ಸ್ಥಾಯಿ ಸಮಿತಿ ಗೊರೆಮಿಯ್ಯ, ಸತೀಶ ಗುಡ್ಡೆ, ಪುರಸಭೆ ಸದಸ್ಯರು, ಅಧಿಕಾರಿಗಳು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.