ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೀದರ್

ವೇಳಾಪಟ್ಟಿಯಂತೆ ಪರೀಕ್ಷಾ ಸಿದ್ಧತೆ ನಡೆಸಿ

Parashurama
Updated On : 10 Feb 2013, 10:59 am

ಬೀದರ್: ಪರೀಕ್ಷೆಯ ಸಿದ್ಧತೆ ದೃಷ್ಟಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳು ಓದುವ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಹೇಗೆ ಓದಬೇಕು, ಯಾವ ಪಾಠಗಳಿಗೆ ಎಷ್ಟು ಮಹತ್ವ ನೀಡಬೇಕು ಎನ್ನುವ ಕುರಿತು ಹೈದ್ರಾಬಾದ್‌ನ ಜ್ಞಾನ ಟ್ರೀಯ ಮುಖ್ಯ ಕಾರ್ಯನಿರ್ವಾಹಕ ಹಾಗೂ ಮಕ್ಕಳ ಮನೋವಿಕಾಸ ತಜ್ಞರಾದ ವೈಶಾಲಿ ನಿಟ್ಟೂರಕರ ತಿಳಿಸಿದರು.
  ನಗರದ ರಂಗಮಂದಿರದಲ್ಲಿ ಪರೀಕ್ಷಾ ಪೂರ್ವ ಸಿದ್ಧತೆ ಕುರಿತು ಕಲ್ಯಾಣ ಕರ್ನಾಟಕ ಪ್ರತಿಷ್ಠಾನ ಹಾಗೂ ಶಾಹಿನ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜಿಲ್ಲೆಯ ವಿವಿಧ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಎರಡು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿ, ಓದುವುದಕ್ಕೆ ಎಷ್ಟು ಸಮಯ ಕೊಡಬೇಕು ಎನ್ನುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟು ಪರಿಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಕಲೆಯನ್ನು ತಿಳಿಸಿಕೊಟ್ಟರು.
50 ದಿನ ಸಮಯಾವಕಾಶ: ವಿದ್ಯಾರ್ಥಿಗಳು ಓದಬೇಕಾದ ರೀತಿ, ಪರೀಕ್ಷೆ ಬರೆಯುವ ಪದ್ಧತಿ, ಸ್ಮರಣಶಕ್ತಿ ಹೆಚ್ಚಿಸಿಕೊಳ್ಳುವ ಕೌಶಲ್ಯಗಳನ್ನು ಕಲಿಸಿ ಕೊಟ್ಟು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿದ ಅವರು, ಎಸ್ಸೆಸ್ಸೆಲ್ಸಿ ಪರಿಕ್ಷೆಗೆ 50 ದಿನಗಳ ಸಮಯಾವಕಾಶ ಇದೆ. ಇರುವ ಸಮಯವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಬೇಕೆಂದರು.
  ಜ್ಞಾನ ಟ್ರೀಯ ಮುಖ್ಯಸ್ಥ ಹೇಮಂತ ನಿಟ್ಟೂರಕರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕನಸನ್ನು ತುಂಬಿ, ಸಾಧಿಸಬೇಕಾದ ಉನ್ನತ ಗುರಿಯನ್ನು ತಲುಪಲು ನಮ್ಮ ಮನಸ್ಥಿತಿ ಹೇಗೆ ಸಿದ್ಧಪಡಿಸಿಕೊಳ್ಳಬೇಕು, ಸೋಲುಗಳಾದಾಗ ಎದೆಗುಂದದೆ ಧೈರ್ಯವಾಗಿ ಗುರಿಯನ್ನು ಹೇಗೆ ತಲುಪಬೇಕೆಂಬುದನ್ನು ವಿವರವಾಗಿ ತಿಳಿಸಿದರು.
  ಶಾಹಿನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಖದೀರ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಪ್ರತಿಷ್ಠಾನದ ಅಧ್ಯಕ್ಷ ಬಸವಕುಮಾರ ಪಾಟೀಲ್ ಪ್ರಸ್ತಾವಿಕ ಮಾತನಾಡಿದರು.
  ಮುಖ್ಯ ಅತಿಥಿಯಾಗಿ ಬೀದರ್ ಅಭಿವೃದ್ಧಿ ವೇದಿಕೆಯ ಅಧ್ಯಕ್ಷ ಡಾ. ಚನ್ನಬಸಪ್ಪ ಹಾಲಹಳ್ಳಿ, ಡಿಸಿಸಿ ಬ್ಯಾಂಕ್ ನಿವೃತ್ತ ಅಧಿಕಾರಿ ರಾಮಶೆಟ್ಟಿ ಹಾವಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕ ಶರಣಪ್ಪ ಜಲದೆ, ನಾಮದೇವರಾವ ಪಾಲ್ಗೊಂಡಿದ್ದರು.
ಸನ್ಮಾನ: ಇದೇ ವೇಳೆ ಆದರ್ಶ ಶಿಕ್ಷಕರಾದ ಕರ್ನಾಟಕ ಪ್ರೌಢಶಾಲೆಯ ರಫೀ ತಾಳಿಕೋಟಿ, ಅಮಲಾಪುರ ಪ್ರೌಢ ಶಾಲೆಯ ದೇವಿಪ್ರಸಾದ ಕಲಾಲ್, ಸರ್ಕಾರಿ ಸಂಯುಕ್ತ ಪಪೂ(ಕನ್ಯಾ) ಕಾಲೇಜಿನ ಶಿಕ್ಷಕರಾದ ಬಸಪ್ಪ ಪೂಜಾರಿ, ಹಳ್ಳಿಖೇಡ(ಬಿ)ನ ಗಣಪತಿ ಸಿದ್ದೇಶ್ವರ, ಶಿವಲಿಂಗ ಹಿರೇಮಠ, ಬಲ್ಲೂರ ಪ್ರೌಢಶಾಲೆಯ ಕಾವ್ಯನಂದಿನಿ, ಯುನಿಕ್ ಪಬ್ಲಕ್ ಶಾಲೆಯ ರಾಜೇಶ್ವರಿ, ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವ ಮದರಗಾಂವ ಗೆಳೆಯರ ಬಳಗದ ಪ್ರತಿನಿಧಿ ಸಂದೀಪ ಅವರಿಗೆ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments