ಉಪನ್ಯಾಸಕರ ಕಾಯಂಗೆ ಆಗ್ರಹ
ಬೀದರ್: ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ಗಳಲ್ಲಿ 1995ರಿಂದ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುವವರನ್ನು ಕಾಯಂ ಹುದ್ದೆಯಲ್ಲಿ ವಿಲೀನಗೊಳಿಸಬೇಕೆಂದು ಆಗ್ರಹಿಸಿ ಬುಧವಾರ ಔರಾದ್ ಪಟ್ಟಣದ ಪಾಲಿಟೆಕ್ನಿಕ್ ಕಾಲೇಜು ಪ್ರಾಂಗಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಯಿತು. ಅಖಿಲ ಕರ್ನಾಟಕ ಗ್ರಾಜ್ಯುವೇಟ್ ವೆಲ್ಫೇಯರ್ ಜಿಲ್ಲಾಧ್ಯಕ್ಷ ಬಿ. ಪ್ರಲ್ಹಾದ್ ನೇತೃತ್ವದಲ್ಲಿ ನಡೆದ ಧರಣಿ ಸತ್ಯಾಗ್ರಹದಲ್ಲಿ ತಹಸೀಲ್ದಾರ್ ಮೂಲಕ ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಕಳುಹಿಸಲಾಯಿತು. ಕಳೆದ 2011-12ರಲ್ಲಿ ಅರೆಕಾಲಿಕ ಉಪನ್ಯಾಸಕರ ಭತ್ಯೆ ಡಿ. 22ರಿಂದ ಏಪ್ರಿಲ್ 18ರವರೆಗೆ ಭತ್ಯೆ ನೀಡಿಲ್ಲ. ಈ ಬಗ್ಗೆ ಪರಿಶೀಲಿಸಿ ಭತ್ಯೆ ಬಿಡುಗಡೆ ಮಾಡಬೇಕು, ಸುಮಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರನ್ನು ಕಡೆಗಣಿಸಿ ಹೊಸ ಅರೆಕಾಲಿಕರನ್ನು ನೇಮಕ ಮಾಡಬಾದದೆಂದು ಆಗ್ರಹಿಸಲಾಯಿತು. ಸತ್ಯಾಗ್ರಹದಲ್ಲಿ ಬಸವರಾಜ ಯಡವೇ, ಶಿವಕುಮಾರ ಪಾಟೀಲ್, ಗಣಪತರಾವ ಚಲವಾ, ದೇವೇಂದ್ರಪ್ಪ ಇದ್ದರು. ಸತ್ಯಾಗ್ರಹಕ್ಕೆ ಎಬಿವಿಪಿ, ಸರ್ಕಾರಿ ಪ್ರಾಚಾರ್ಯರು ಬೆಂಬಲ ನೀಡಿದರು.
ಶಿಷ್ಯವೇತನದಲ್ಲಿ ಅವ್ಯವಹಾರ
ಹುಮನಾಬಾದ್: ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು ಮಕ್ಕಳಿಗೆ ನೀಡದೆ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಪಟ್ಟಣದ ಅಲ್-ಅಮೀನ್ ಶಾಲೆಯ ಮುಖ್ಯಗುರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 2011- 12ನೇ ಸಾಲಿನ 366 ವಿದ್ಯಾರ್ಥಿಗಳು ಅಲ್-ಅಮೀನ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆಂದು ಪಟ್ಟಿ ದಾಖಲಿಸಲಾಗಿತ್ತು. ಅದರಂತೆ 366 ವಿದ್ಯಾರ್ಥಿಗಳಿಗೆ ತಲಾ 1 ಸಾವಿರದಂತೆ ಶಿಷ್ಯ ವೇತನ ಮಂಜೂರಾಗಿದೆ. ಈ ಪೈಕಿ 245 ವಿದ್ಯಾರ್ಥಿಗಳು ಮಾತ್ರ ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಅವರಿಗೆ ಚೆಕ್ಗಳನ್ನು ವಿತರಿಸಲಾಗಿದೆ. 131 ವಿದ್ಯಾರ್ಥಿಗಳು ಈ ಶಾಲೆಗೆ ಸಂಬಂಧವಿಲ್ಲ ಆದರೂ ಶಿಷ್ಯ ವೇತನ ಮಂಜೂರಾಗಿದೆ. ಇವುಗಳನ್ನು ಪಟ್ಟಣದ ಅಂಚೆ ಕಚೇರಿ ಮೂಲಕ ಅಲ್- ಅಮೀನ್ ಆಂಗ್ಲ ಮಾಧ್ಯಮ ಶಾಲೆಯ ಹೆಸರು ಬಳಿಸಿ ವಿದ್ಯಾರ್ಥಿಗಳ ಶಿಷ್ಯವೇತನ ಲಪಟಾಯಿಸಲಾಗಿದೆ. ಪಟ್ಟಣದಲ್ಲಿ ಆಂಗ್ಲ ಮಾಧ್ಯಮ ಶಾಲೆಯೇ ಇಲ್ಲ. ಹೀಗೆ ಸರ್ಕಾರದ ಹಣವನ್ನು ದುರ್ಬಳಕೆ ಮಾಡಿರುವುದು ಬಿಇಒ ನೀಡಿರುವ ದೂರಿನ ಮೇರೆಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುದಾಳೆ ಆಯ್ಕೆ
ಬೀದರ್: ಜಿಲ್ಲೆಯ ವಾರಪತ್ರಿಕೆ, ಪಾಕ್ಷಿಕ, ಮಾಸ ಪತ್ರಿಕೆಯ ಸಂಪಾದಕರ ಸಭೆಯಲ್ಲಿ ರಾಜ್ಯ ತನಿಖಾ ಪತ್ರಕರ್ತರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನಡೆದ ಸಭೆಯಲ್ಲಿ ಎಂ.ಪಿ. ಮುಧಾಳೆ- ಅಧ್ಯಕ್ಷರು, ಸುನೀಲ್ ಭಾವಿಕಟ್ಟಿ- ಉಪಾಧ್ಯಕ್ಷರು. ಅನೀಲಕುಮಾರ ಕಮಠಾಣೆ- ಪ್ರಧಾನ ಕಾರ್ಯದರ್ಶಿ, ದೇವಿದಾಸ ಚಿಲ್ಲರ್ಗಿ-ಸಂಘಟನಾ ಕಾರ್ಯದರ್ಶಿ, ನಾಗಶೆಟ್ಟಿ ಧರಂಪೂರ- ಖಜಾಂಚಿ, ಶಂಕರ ದೊಡ್ಡಮನಿ ಮತ್ತು ಶಿವಕುಮಾರ ಕೋಲಿರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತೆಂದು ಅನೀಲ್ ಕಮಠಾಣೆ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.