ಎತ್ತುಗಳ ಅಕ್ರಮ ಸಾಗಣೆ: ಆರೋಪಿಗಳ ಬಂಧನ
ಕ.ಪ್ರ. ವಾರ್ತೆ, ಕಮಲನಗರ, ಮಾ. 9
ಔರಾದ್ ತಾಲೂಕಿನ ಕಮಲನಗದ ನಾಂದೇಡ-ಬೀದರ್ ರಾಜ್ಯ ಹೆದ್ದಾರಿಯಲ್ಲಿ ಶನಿವಾರ ನಸುಕಿನ ಜಾವ ಮಹಾರಾಷ್ಟ್ರದಿಂದ ಆಂಧ್ರಪ್ರದೇಶದ ಕಡೆ ಲಾರಿಯಲ್ಲಿ ಎತ್ತುಗಳನ್ನು ತುಂಬಿ ಹೊಗುತ್ತಿದ್ದ ಲಾರಿಯನ್ನು ಕಮಲನಗರ ಜಪ್ತಿ ಮಾಡಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಹಳಿ ಹಂಡರಗುಳಿ ಗ್ರಾಮದಿಂದ ಆಂಧ್ರದ ಜಹಿರಾಬಾದಕ್ಕೆ ಸಾಗಿಸುತ್ತಿದ್ದ 23 ಎತ್ತುಗಳಿಂದ ತುಂಬಿದ್ದ ಕಂಟೇನ್‌ರನ್ನು ಕಮಲನಗರ ಸಿಪಿಐ ಬಿಪಿ ಚಂದ್ರಶೇಖರ್, ಪಿಎಸ್‌ಐ ಬಿಡಿ ಬುರ್ಲಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಸೇರೆ ಹಿಡಿದಿದ್ದಾರೆ.
ಸುಮಾರು ರು. 6.66 ಲಕ್ಷ ವೆಚ್ಚದ 23 ಎತ್ತುಗಳು ಜಹೀರಬಾದ್‌ನ ಕಸಾಯಿಖಾನೆಗೆ ಒಯ್ಯಲಾಗುತ್ತಿದೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ರಾಜಸ್ಥಾನದ ಅಲವಾರ ಜಿಲ್ಲೆಯ ಲಾರಿ ಚಾಲಕ ಮೊಸಮ ಬಂಬುಖಾನ ಉತ್ತರಪ್ರದೇಶ ಸಾರನಪೂರ ಜಿಲ್ಲೆಯ ಅಂಬೇಡಾ ಗ್ರಾಮದ ಅಬ್ದುಲ್ ರೆಹಮಾನ್ ಪಠಾಣ್‌ಗೆ ಬಂಧಿಸಿ, ಲಾರಿ ಜಪ್ತಿ ಮಾಡಿ ಎಲ್ಲ ಎತ್ತುಗಳನ್ನು ಔರಾದ್‌ನ ಗೋಶಾಲೆಗೆ ಸಾಗಿಸಲಾಗಿದೆ. ಈ ಕುರಿತು ಕಮಲನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.