ಪಾಂಡುರಂಗ ಭಕ್ತರಿಂದ ಪೂಜೆ
ಕನ್ನಡಪ್ರಭ ವಾರ್ತೆ, ಬೀದರ್, ಮಾ. 9
ಪ್ರತಿ ವರ್ಷದಂತೆ ಈ ವರ್ಷವೂ ಪಾಂಡುರಂಗನ ಭಕ್ತರು ಪಂಡರಪುರದಿಂದ ಪಾದಯಾತ್ರೆ ಮೂಲಕ ಬೀದರ್ ಕೋಟೆಗೆ ಆಗಮಿಸಿ ಇಲ್ಲಿರುವ ಪಾಂಡುರಂಗನ ಪಾದ ಇಟ್ಟ ಸ್ಥಳದಲ್ಲಿ ಪೂಜೆ ಸಲ್ಲಿಸಿ ಮೊಸರಿನ ಗಡಿಗೆ ಒಡೆದರು.
ಪಂಡರಾಪುರದ ಏಕನಾಥ ಮಹಾರಾಜ ಹುಂಡೆ ನೇತೃತ್ವದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಭಕ್ತರು ಸದರಿ ಕಾರ್ಯಕ್ರಮ ಭಕ್ತಿಯಿಂದ ಆಚರಿಸಿದರು. ಇಡೀ ದಿನ ಭಜನೆ, ಕೀರ್ತನೆ ನಡೆಸಿ ಸಾಯಂಕಾಲ ಅದೇ ಸ್ಥಳದಲ್ಲಿ ಮೊಸರಿನ ಗಡಿಗೆ ಒಡೆದರು.
ಪಾದಯಾತ್ರೆಯಲ್ಲಿ ಠಾಕೂರ ಸಚಿನ್ ಸಿಂಗ್, ಯುವರಾಜ ಸಿಂಗ್, ವೀರೇಂದ್ರ ಸಿಂಗ್, ಮಹೇಂದ್ರ ಸಿಂಗ್, ವಿಜಯಸಿಂಗ್, ವಿಶಾಲ್ ಸಿಂಗ್, ಸುರೇಶ ಸಿಂಗ್, ದಿನೇಶ ಸಿಂಗ್, ಕುಲದೀಪ ಸಿಂಗ್, ರವೀಂದ್ರ ಸಿಂಗ್, ನರೇಶ ಶಾಮಲಾಲ್, ನರಸಿಂಗ್, ಮಧುಕರ ಸೇಠ್, ಇಕ್ಬಾಲ್ ಸೇಠ್, ಕಾಳೆಕರ್ ಮತ್ತಿತರ ಮುಖಂಡರ ನೇತೃತ್ವದಲ್ಲಿ ನೂರಾರು ಜನರು ಇದ್ದರು. ಭಾನುವಾರ ಮಹಾಶಿವರಾತ್ರಿ ದಿನ ಪಾಪನಾಶ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಇಡೀ ರಾತ್ರಿ ಭಜನೆ, ಕೀರ್ತನೆ ನಡೆಸುವರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.