ರಸ್ತೆ ಕಾಮಗಾರಿಗೆ ಖಾಶೆಂಪುರ ಚಾಲನೆ
ಕನ್ನಡಪ್ರಭ ವಾರ್ತೆ, ಬೀದರ್, ಮಾ. 16
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಲ್ಲಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ಎರಡನೇ ಹಂತದಲ್ಲಿ ಕೈಗೆತ್ತಿಕೊಂಡ ರಸ್ತೆ ಕಾಮಗಾರಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪೂರ ಚಾಲನೆ ನೀಡಿದರು.
95 ಲಕ್ಷ ವೆಚ್ಚದಲ್ಲಿ ಖಾನಾಪೂರ ಕ್ರಾಸ್ನಿಂದ ಹೊನ್ನೆಕೇರಿ ಗ್ರಾಮದವರೆಗಿನ 2.22 ಕಿ.ಮೀ. ರಸ್ತೆಗೆ ಹೊನ್ನಿಕೇರಿ ಗ್ರಾಮದಲ್ಲಿ ಶಾಸಕರು ಚಾಲನೆ ನೀಡಿದರು. ಅನೇಕ ವರ್ಷಗಳಿಂದ ಯಾವ ಜನಪ್ರತಿನಿಧಿಗಳು ಈ ರಸ್ತೆ ನಿರ್ಮಾಣಕ್ಕೆ ಮನಸ್ಸು ಮಾಡಿಲ್ಲ. ಹೊನ್ನಿಕೇರಿ ಗ್ರಾಮದಲ್ಲಿ ಪ್ರತಿಷ್ಠಿತ ಸಿದ್ದೇಶ್ವರ ದೇವಸ್ಥಾನ ಇರುವುದರಿಂದ ಇಲ್ಲಿಗೆ ಪ್ರತಿದಿನ ಭಕ್ತರು ಆಗಮಿಸುತ್ತಿರುವರು. ಇದನ್ನು ಅರಿತು ಈ ರಸ್ತೆ ಅತ್ಯವಶ್ಯಕವೆಂದು ತಿಳಿದು ರಸ್ತೆ ಮಂಜೂರು ಮಾಡಿಸಿ ಚಾಲನೆ ನೀಡಿದ್ದೇನೆ ಎಂದರು.
ಅಭಿವೃದ್ಧಿ: ದೇವಸ್ಥಾನದ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು. ಇದಕ್ಕೂ ಮುನ್ನ ಗ್ರಾಮದಲ್ಲಿನ ಅನೇಕ ಮೂಲಭೂತ ಸೌಕರ್ಯಗಳ ವಿವಿಧ ಕಾಮಗಾರಿಗಳನ್ನು ಮಾಡಲಾಗಿದೆ. ಕುಡಿಯುವ ನೀರಿಗಾಗಿ ಅವಶ್ಯಕತೆ ಇದ್ದ ಕಡೆ ಕೊಳವೆ ಬಾವಿಗಳನ್ನು ಕೊರೆಯಿಸಲಾಗಿದೆ ಎಂದರು.
ಗ್ರಾಮದ ಮುಖಂಡರಾದ ಹಣಮಂತರಾವ್, ಚಂದ್ರಶೇಖರ, ಸುಭಾಷ ಪಾಟೀಲ್, ಗ್ರಾ.ಪಂ. ಸದಸ್ಯರಾದ ವೈಜಿನಾಥ, ಪರಶುರಾಮ, ಮಾಜಿ ಸದಸ್ಯ ಧನಸಿಂಗ್, ಬಸವರಾಜ ಮಾಳಗೆ ಕಪಲಾಪೂರ ಮತ್ತಿತರರು ಇದ್ದರು.
ಬಗದಲ್ನಿಂದ ಪಾತರಪಳ್ಳಿವರೆಗೆ ರು. 2.25 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಬಗದಲ್ದಿಂದ ಪಾತರಪಳ್ಳಿವರೆಗಿನ 5.04 ಕಿ.ಮೀ.ರಸ್ತೆಗೆ ಪಾತರಪಳ್ಳಿಯಲ್ಲಿ ಚಾಲನೆ ನೀಡಿ, ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳನ್ನು ಈ ಕ್ಷೇತ್ರದಲ್ಲಿ ಮಾಡಿದ್ದೇನೆ. ಗ್ರಾಮದಲ್ಲಿ ರಸ್ತೆ, ಚರಂಡಿ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ತಲೆದೋರಿತು. ಇದರಿಂದ ಗ್ರಾಮಸ್ಥರಿಗೆ ಸಂಕಷ್ಟ ಪಡಬೇಕಾಗಿತ್ತು.
ಸಂಚಾರಕ್ಕೆ ಉಪಯುಕ್ತ: ಜನರ ನೋವು ಅರಿತುಕೊಂಡು ಈ ಎಲ್ಲಾ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಕಾಮಗಾರಿ ಈಗಾಗಲೇ ಮಾಡಿ ಮುಗಿಸಿದ್ದೇನೆ. ಈಗ ಬಗದಲ್ನಿಂದ ಪಾತರಪಳ್ಳಿ ರಸ್ತೆಗೆ ಚಾಲನೆ ನೀಡಲಾಗಿದೆ. ಇದರಿಂದ ಜನರಿಗೆ ಸಂಚಾರಕ್ಕೆ ಉಪಯುಕ್ತವಾಗಲಿದೆ ಎಂದು ತಿಳಿಸಿದರು. ಜಿ.ಪಂ ಸದಸ್ಯ ಬಸವರಾಜ ಅಂಬಣ್ಣಾ, ಗ್ರಾಮದ ಮುಖಂಡರಾದ ಮಹಾಲಿಂಗ ಪಾಟೀಲ್, ಚಂದ್ರಶೇಖರ ತಾಂಡೂರೆ, ಮಲ್ಲಪ್ಪಾ, ಶಶಿಧರ, ಗೋವರ್ಧನ ರಾಠೋಡ, ದಶರಥ ರಾಜಕುಮಾರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಪಿ.ಕೊಟರ್ಕಿ ಸೇರಿದಂತೆ ಮತ್ತಿತರರು ಇದ್ದರು.
ಚೊಂಡಿ ತಾಂಡಾ ದಿಂದ ಚೊಂಡಿವರೆಗೆ ರು. 92.40 ಲಕ್ಷ ವೆಚ್ಚದಲ್ಲಿ ಚೊಂಡಿ ತಾಂಡಾದಿಂದ ಚೊಂಡಿ ಗ್ರಾಮದವರೆಗೆ ಸುಮಾರು 2.20 ಕಿ.ಮೀ. ರಸ್ತೆ ಕಾಮಗಾರಿಗೆ ಶಾಸಕ ಬಂಡೆಪ್ಪಾ ಖಾಸೆಂಪೂರ ಚೊಂಡಿ ತಾಂಡಾದಲ್ಲಿ ಚಾಲನೆ ನೀಡಿದರು.
ಪಾದಯಾತ್ರೆ: ನಂತರ ತಾಂಡಾದಲ್ಲಿ ಪಾದಯಾತ್ರೆಯ ಮೂಲಕ ಅಲ್ಲಿನ ಸಮಸ್ಯೆಗಳನ್ನು ಅರಿತುಕೊಂಡರು. ಬೇಸಿಗೆಯಲ್ಲಿ ತಾಂಡಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣವಾಗದಂತೆ ಮುನ್ನೆಚ್ಚರಿಕೆಯಾಗಿ ಇನ್ನೊಂದು ಕೊಳವೆ ಬಾವಿ ಕೊರೆಸಲಾಗುವುದು. ಈಗ ವಿದ್ಯುತ್ ಸಮಸ್ಯೆ ಇರುವುದರಿಂದ ನೀರಿನ ಸಮಸ್ಯೆ ಉಂಟಾಗಬಾರದೆಂದು ಭವಾನಿ ಮಂದಿರದ ಹತ್ತಿರ ಕೊಳವೆ ಬಾವಿಗೆ ಹ್ಯಾಂಡ್ ಪಂಪ್ ಅಳವಡಿಸಲಾಗುವುದೆಂದು ಭರವಸೆ ನೀಡಿದರು.
ಚೊಂಡಿ ಗ್ರಾಪಂ ಅಧ್ಯಕ್ಷ ಅಶೋಕ ದೇಸಾಯಿ, ಸಲಾವೋದ್ದಿನ್, ಶಂಕರ, ಜೈಸಿಂಗ್, ದಶರಥ, ಪ್ರಥಮ ದರ್ಜೆ ಗುತ್ತಿಗೆದಾರ ಪಿ.ಕೊಟರ್ಕಿ, ಎಇಇ ಚಂದ್ರಶೇಖರ ತಾಂಡೂರೆ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.