ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳಪೆ ಕಾಮಗಾರಿ: ಪ್ರತಿಭಟನೆ

Lingaraj Badiger
Updated On : 2 Apr 2013, 10:50 am

ಕನ್ನಡಪ್ರಭ ವಾರ್ತೆ ಕೊಪ್ಪ  ಏ.1
ತಾಲೂಕಿನ ಹರಿಹರಪುರ ಸಮೀಪದ  ಜಯನಗರ ಕಾಲೋನಿಯಲ್ಲಿ ರು.  25 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳಪೆ ಮಟ್ಟದ ದಿಂದ ಕೂಡಿದ್ದು, ಕಾಮಗಾರಿ ಕೂಡಲೆ ನಿಲ್ಲಿಸ ಬೇಕೆಂದು ಆಗ್ರಹಿಸಿ ಕಾಲೋನಿಯ ವಾಸಿಗಳು ಆಗ್ರಹಿಸಿ ಕಾಮಗಾರಿಯನ್ನು ಸೋಮವಾರ ಸ್ಥಗಿತ ಗೋಳಿಸಿದರು.
ಕಾಲೋನಿಗಳ ಅಭಿವೃದ್ಧಿಪಡಿಸುವ ಯೋಜನೆಯಡಿ ಜಯನಗರ ಕಾಲೋನಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ರಸ್ತೆ 400 ಮೀಟರ್ ಉದ್ದ ಮತ್ತು 3.70 ಮೀಟರ್ ಅಗಲದ, 1 ಅಡಿ ದಪ್ಪದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಬೇಕಿತ್ತು. ಆದರೆ ರಸ್ತೆ ನಿರ್ಮಾಣ ಕಾಮಗಾರಿ ಕಳಪೆ ಕೆಲಸ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಕಾಮಗಾರಿಯನ್ನು ಕೂಡಲೇ ಸ್ಥಗಿತ ಗೊಳಿಸಿ ಸಂಬಂದ ಪಟ್ಟ ಎಂಜಿನೀಯರ್ ಸ್ಥಳಕ್ಕೆ ಕರೆಸುವಂತೆ ಪಟ್ಟು ಹಿಡಿದರು.
ನಂತರ ಸ್ಥಳಕ್ಕೆ ಬಂದ ಎಂಜಿನಿಯರ್ ಪಾನಮತ್ತಾರಾಗಿದ್ದರಿಂದ ಗ್ರಾಮಸ್ಥರೊಂದಿಗೆ ಮಾತನಾಡುವ ಸ್ಥಿತಿಯಲ್ಲಿ ಇರದ ಕಾರಣ ಗುತ್ತಿಗೆದಾರ ಗುಣ ಮಟ್ಟದ ಕಾಮಗಾರಿ ಮಾಡುವುದಾಗಿ ಬರವಸೆ ನೀಡಿದ್ದರಿಂದ ಮತ್ತೆ ಕಾಮಗಾರಿಯ ಚಾಲನೆಗೆ ಅನುಮತಿ ನೀಡುವುದಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement