'ಚಿಣ್ಣರ ಚಿಲಿಪಿಲಿ' ಉದ್ಘಾಟನೆ
ಕ.ಪ್ರ.ವಾರ್ತೆ, ಮೂಡಿಗೆರೆ, ಏ.1
ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ರಜೆ ದಿನವನ್ನು ಕಳೆಯಲು. ಟಿವಿ, ವಿಡಿಯೋಗೇವ್ ಗಳಿಗೆ ಮೊರೆ ಹೋಗುತ್ತಾರೆ. ಆದರೆ ಅದೇ ವಿದ್ಯಾರ್ಥಿಗಳನ್ನು ಶಿಬಿರದಲ್ಲಿ ಸೇರಿಸಿದಲ್ಲಿ ಅವರಲ್ಲಿರುವ ಪ್ರತಿಭೆ ಹೊಲಹೊಮ್ಮುವುದರೊಂದಿಗೆ ನೈತಿಕ ಮೌಲ್ಯ ಬೆಳಸಿಕೊಳ್ಳಲೂ ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್ ಎ.ವಿ. ರುದ್ರಪ್ಪಾಜಿ ರಾವ್ ಹೇಳಿದರು.
ಪಟ್ಟಣದ ಜೇಸಿ ಸಂಸ್ಥೆಯಿಂದ ಹಮ್ಮಿಕೊಳ್ಳಲಾಗಿದ್ದ “_y|ÁÚ _Ưƒ 9 ದಿನಗಳ ಕಾಲ ನಡೆಯುವ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷ ಪ್ರಸನ್ನ ಗೌಡಹಳ್ಳಿ ವಹಿಸಿದ್ದರು. ಜೇಸಿ ರೇಟ್ಸ್ ಅಧ್ಯಕ್ಷ ಸುಚಿತ್ರ ಪ್ರಸನ್ನ, ಲತಾಪ್ರಕಾಶ್, ಮಂಜುನಾಥ್, ಡಿಡಿಪಿಐ ಕಾಂತರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಕೋಮರಯ್ಯ, ಚನ್ನಬಸಪ್ಪ ಮೇಕಾಲಿ, ಅಧಿಕಾರಿ ಕೃಷ್ಣಪ್ಪ, ಶ್ರೀನಿವಾಸ್ ಗಣ್ಯರು ಇದ್ದರು.