ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭ್ರಷ್ಟ ಮುಕ್ತ ಸಮಾಜ ನಿರ್ಮಾಣ ಅಗತ್ಯ

Lingaraj Badiger
Updated On : 2 Apr 2013, 10:57 am

ಕಪ್ರವಾರ್ತೆ,ನರಸಿಂಹರಾಜಪುರ, ಏ.1
ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಲು ವಿದ್ಯಾರ್ಥಿಗಳು ಪಣ ತೊಡಬೇಕು ಎಂದು ಕ್ಷೇತ್ರ ಸಂಪನ್ಮೂಲ ಕೇಂದ್ರದ ಪ್ರಸನ್ನ ಸಲಹೆ ನೀಡಿದರು.
  ಅವರು ಸೋಮವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸ.ಪ್ರ.ದ. ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ ಯುವ ಸಮ್ಮೇಳನ ಕಾರ್ಯಗಾರದಲ್ಲಿ ಮತದಾನದ ಮಹತ್ವ ಎಂಬ ವಿಷಯವಾಗಿ ಮಾತನಾಡಿದರು.
ಮಾಹಿತಿ ಅಗತ್ಯ: ಜನವರಿ 1ನೇ ತಾರೀಕಿಗೆ 18 ವರ್ಷ ತುಂಬಿದವರಿಗೆ ಮತದಾನ ಮಾಡುವ ಹಕ್ಕು ಬರುತ್ತದೆ. ಮತದಾನ ನಮ್ಮ ಹಕ್ಕಾಗಿದ್ದು, ಯಾವುದೇ ಸಂದರ್ಭದಲ್ಲೂ ಮತದಾನದಲ್ಲಿ ತಪ್ಪಿಸಿಕೊಳ್ಳಬಾರದು. ಅನಕ್ಷರಸ್ಥರಿಗೆ ಮತಯಂತ್ರದ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಬೇಕು. ಏಪ್ರಿಲ್ 7ರಂದು ಮತದಾನ ಪಟ್ಟಿಗೆ ಹೊಸ  ಹೆಸರು ಸೇರಿಸಲು ಕೊನೆಯ ದಿನವಾಗಿದೆ ಎಂದು ಅವರು ತಿಳಿಸಿದರು.
 ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಕೆ. ಉಮೇಶ್ ಮಾತನಾಡಿ, ರಾಷ್ಟೀಯ ವಿಪತ್ತು ನಿರ್ವಹಣೆಗಾಗಿ ರಾಷ್ಟೀಯ ವಿಪತ್ತು ನಿಧಿಯನ್ನು ವಿಶ್ವಸಂಸ್ಥೆ ಪ್ರಾರಂಭಿಸಿದೆ. ಮನುಷ್ಯರ ಗಮನಕ್ಕೆ ಬರದೇ ಸಂಭವಿಸಬಹುದಾದ ಭೂಕಂಪ, ಬಿರುಗಾಳಿ, ಸುನಾಮಿಯು ಮನುಷ್ಯನನ್ನು ದುರಂತದ ಸ್ಥಿತಿ ತಲುಪಿಸುತ್ತದೆ. ದೇಶದಲ್ಲಿ ಶೇ. 50 ಇರುವ ಯುವ ಶಕ್ತಿ ಮನಸ್ಸು ಮಾಡಿದರೆ ದೇಶವನ್ನು ಭ್ರಷ್ಟಾಚಾರ ಮುಕ್ತ ರಾಷ್ಟವನ್ನಾಗಿ  ಮಾಡಬಹುದಾಗಿದೆ ಎಂದರು.
   ಬಿ.ಎ. ಸಚಿನ್ ಗ್ರಾಮ ಸಭೆಗಳಲ್ಲಿ ವಿದ್ಯಾರ್ಥಿಗಳ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಕೆ. ಪೂರ್ಣೇಶ್ ವಹಿಸಿದ್ದರು. ಮೋನಿಕಾ ಪ್ರಾರ್ಥಿಸಿದರು. ಕೃಷ್ಣಪ್ರಸಾದ್ ಸ್ವಾಗತಿಸಿದರು. ಪ್ರತಿಮಾ ನಿರೂಪಿಸಿದರು. ಸುಬ್ರಮಣ್ಯ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement