ಮತಕ್ಕಾಗಿ ಹಣ ಹಂಚುವ ಸಂಸ್ಕೃತಿ ನಮ್ಮದಲ್ಲ: ರವಿ
ಚಿಕ್ಕಮಗಳೂರು: ಮತಕ್ಕಾಗಿ ಹಣ, ಹೆಂಡ ಹಂಚುವ ಸಂಸ್ಕೃತಿ ನಮ್ಮದಲ್ಲ. ಜನರಿಗೆ ಕೊಟ್ಟ ಆಶ್ವಾಸನೆಯಂತೆ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ. ನಾನು ಮಾಡಿರುವ ಕ್ಷೇತ್ರದ ಅಭಿವೃದ್ಧಿ ತಮಗೆ ತೃಪ್ತಿ ನೀಡಿದ್ದಲ್ಲಿ ಮಾತ್ರ ಚುನಾವಣೆಯಲ್ಲಿ ನನಗೆ ಮತ ನೀಡಿ ಎಂದು ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಹೇಳಿದ್ದಾರೆ. ತಾಲೂಕಿನ ಶಿರವಾಸೆ ಗ್ರಾಮದಲ್ಲಿ ನಡೆದ ಜಾಗರ ಹೋಬಳಿ ಶಕ್ತಿ ಕೇಂದ್ರದ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ರು. 800 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ಶಿರವಾಸೆ ಗ್ರಾಪಂಗೆ ರು. 9 ಕೋಟಿಗೂ ಅಧಿಕ ಅನುದಾನ ನೀಡಿದ್ದೇವೆ ಎಂದು ಅವರು ಹೇಳಿದರು.