ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

'ರಾಜಕಾರಣದಲ್ಲಿ ಪ್ರಾಮಾಣಿಕತೆ ಬೇಕು'

Lingaraj Badiger
Updated On : 2 Apr 2013, 11:02 am

ಕ.ಪ್ರ.ವಾರ್ತೆ ಹೊಸನಗರ ಏ.1
ರಾಜಕಾರಣದಲ್ಲಿ ಜನರ ನಂಬಿಕೆ, ವಿಶ್ವಾಸ ಹುಸಿಗೊಳಿಸದಂತ ಪ್ರಾಮಾಣಿಕತೆ ಬೇಕು ಎಂದು ಸಾಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಆರ್. ಜಯಂತ್ ಹೇಳಿದರು.
ಪಟ್ಟಣದ ಕೆಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ, ರಾಜಕೀಯದಲ್ಲಿ ಶುದ್ಧಹಸ್ತರಾಗದಿದ್ದಲ್ಲಿ ಜನರ ವಿಶ್ವಾಸಕ್ಕೆ ದ್ರೋಹ ಬಗೆದಂತಾಗುತ್ತದೆ ಎಂದ ಅವರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಅವಧಿಯಲ್ಲಿ ನಡೆದ ಹತ್ತು ಹಲವು ಜನಪರ ಕಾರ್ಯಕ್ರಮಗಳೇ ಜೀವಾಳವಾಗಿದ್ದು, ಕೆಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಬೇಕೆನ್ನುವ ಮಹದಾಸೆಯೊಂದಿಗೆ ಸ್ಪರ್ಧಿಸಿದ್ದೇನೆ ಎಂದರು.
ಶಾಂತವೇರಿ ಗೋಪಾಲಗೌಡರು ಹುಟ್ಟಿ ನಡೆದಾಡಿದ ಕ್ಷೇತ್ರದಲ್ಲಿ ಶುದ್ಧ ರಾಜಕೀಯಕ್ಕೆ ಖಂಡಿತ ಬೆಲೆ ಇದೆ ಎಂದು ಹೇಳಿದರು. ಪಕ್ಷದ ಪ್ರಮುಖರಾದ ಎನ್.ಆರ್. ದೇವಾನಂದ್, ವಾಟಗೋಡು ಸುರೇಶ್, ಬಿ. ಯುವರಾಜ್, ಮಾಸ್ತಿಕಕಟ್ಟೆ ಸುಬ್ರಹ್ಮಣ್ಯ, ದೊಡ್ಲೆಪಾಲ್ ಚಂದ್ರಶೇಖರ್, ಮೇಘರಾಜ್, ಹರತಾಳು ನಾಗರಾಜ್, ಲಕ್ಷ್ಮೀನಾರಾಯಣ, ಮಂಡಾನಿ ಮೋಹನ್, ಶಾವಿಲ್, ಶಿವಾನಂದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement