ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ವಾರ್ಷಿಕ ರಥಯಾತ್ರಾ ಮಹೋತ್ಸವ

Lingaraj Badiger
Updated On : 2 Apr 2013, 10:50 am

ಕ.ಪ್ರವಾರ್ತೆ, ನರಸಿಂಹರಾಜಪುರಪುರ, ಏ.1
ಸಿಂಹನಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೆಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಬಸ್ತಿಮಠದ ಲಕ್ಷ್ಮೀಸೇನಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ 5 ದಿನಗಳ ಕಾಲ ನಡೆಯುವ ವಾರ್ಷಿಕ ರಥಯಾತ್ರಾ  ಮಹೋತ್ಸವ ಸೋಮವಾರದಿಂದ ಪ್ರಾರಂಭಗೊಂಡಿದೆ.
ಸೋಮವಾರ ಸಿಂಹನಗದ್ದೆ ಜ್ವಾಲಾಮಾಲಿನಿ ದೇವಿ ಸನ್ನಿಧಿಯಲ್ಲಿ ಇಂದ್ರ ಪ್ರತಿಷ್ಠೆ, ವಿಮಾನ ಶುದ್ದಿ, ಯಕ್ಷಪ್ರತಿಷ್ಠೆ,ಧ್ವಜಾರೋಹಣ, ಜ್ವಾಲಾಮಾಲಿನಿ ಅಮ್ಮನವರಿಗೆ ಉಯ್ಯಾಲೆ ಸೇವೆ, ಮಹಾ ನೈವೇದ್ಯಪೂಜೆ, ನಾಂದಿ  ಮಂಗಲ, ವಾಸ್ತು ಶಾಂತಿ, ಮೃತ್ತಿಕಾ ಸಂಗ್ರಹಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಮಂಗಳವಾರ ನಿತ್ಯವಿಧಿ ಸಹಿತ ವಜ್ರಪಂಜರ ಆರಾಧನೆ, ಜ್ವಾಲಾಮಾಲಿನಿ ಅಮ್ಮವರಿಗೆ ಉಯ್ಯಾಲೆ ಸೇವೆ  ನಡೆಯಲಿದೆ. ಬುಧವಾರ ನಿತ್ಯವಿಧಿ ಸಹಿತ ಜ್ವಾಲಾಮಾಲಿನಿ ಆರಾಧನೆ, ಜ್ವಾಲಾಮಾಲಿನಿ ಅಮ್ಮನವರಿಗೆ  ಉಯ್ಯಾಲೆ ಸೇವೆ, 1008 ಮಂತ್ರಪುಷ್ಪ ಸಮುದಾಯ, ಅಷ್ಟ ವಿಧಾರ್ಚನೆ, ಷೋಡಶೋಪಚಾರ ಹಾಗೂ ಸಂಜೆ ಧಾರ್ಮಿಕ ಸಭೆ ನಡೆಯಲಿದೆ.
ಗುರುವಾರ ರಥೋತ್ಸವ: ಗುರುವಾರ ನಿತ್ಯವಿಧಿ ಸಹಿತ ಮಹಾ ನೈವೇದ್ಯ ಪೂಜೆ, ರಥಾರೋಹಣಕ್ಕೆ ಜ್ವಾಲಾಮಾಲಿನಿ  ಅಮ್ಮನವರ ಸನ್ನಿಧಿಯಲ್ಲಿ ಪ್ರಸಾದ ಬೇಡಿಕೆ, ರಥಾರೋಹಣ ಮತ್ತು ಸ.7ಕ್ಕೆ ರಾಜಬೀದಿಯಲ್ಲಿ ಜ್ವಾಲಾಮಾಲಿನಿ ಅಮ್ಮನವರ ರಥಾಯಾತ್ರಾ ಮಹೋತ್ಸವ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement