ವೀರೇಂದ್ರ ಹೆಗ್ಗಡೆಯವರ ಸೇವೆ ಶ್ಲಾಘನೀಯ
ಕೊಪ್ಪ: ಡಾ. ವಿರೇಂದ್ರ ಹೆಗ್ಗಡೆಯವರು ಮಾನವೀಯ ಮೌಲ್ಯಕ್ಕಾಗಿ ಜನರಿಗೆ ನೆರವು ನೀಡುತ್ತಿರುವುದು ಶ್ಲಾಘನೀಯ ಎಂದು ಸಹಾಯಕ ಪ್ರಧ್ಯಾಪಕ ಶ್ರೀಪತಿ ಹಳಗುಂದ ತಿಳಿಸಿದರು.
ಸೋಮವಾರ ಇಲ್ಲಿನ ಬಾಳಗಡಿಯ ಒಕ್ಕಲಿಗರ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಸಬಾ ವಲಯದ ಕೊಪ್ಪ ಪಟ್ಟಣ, ಗ್ರಾಮಾಂತರ, ಬಿಂತ್ರವಳ್ಳಿ ಕಾರ್ಯಕ್ಷೇತ್ರದ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ನಡೆದ ಪದಗ್ರಹಣ ಸಮಾರಂಭದ ಉದ್ಘಾಟನೆ ನೇರವೇರಿಸಿ ಮಾತನಾಡಿ, ಧರ್ಮಗಳ ಬೇದವಿಲ್ಲದೆ ಕೊಟ್ಯಂತರ ರು.ಗಳ ಸಾಲ ನೀಡುವ ಮೂಲಕ ನಮ್ಮ ಸಂಸ್ಕೃತಿಗೆ ದಕ್ಕೆ ಬಾರದ ರೀತಿಯಲ್ಲಿ ಪುರಷರ ಜೊತೆ ಸ್ತ್ರೀಯರಿಗೂ ಸಬಲತೆ ಕಲ್ಪಿಸುವ ಮೂಲಕ ಡಾ. ವೀರೇಂದ್ರ ಹೆಗ್ಡೆಯವರು ಅವತಾರ ಪುರುಷ ಎಂದು ಜನರಿಂದ ಪ್ರಶಂಶೆ ನೀಡುತ್ತಿರುವುದ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಎಲ್‌ಎನ್ ರಾವ್. ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಂಜಯ್ ವಹಿಸಿದ್ದರು. ಅರವಳಿಕೆ ತಜ್ಞೆ ಅನಿತಾ ರಾವ್. ಕ್ಷೇತ್ರ ಯೋಜನಾಧಿಕಾರಿ ಸುಕೇಶ್ ಹಾಗೂ ಒಕ್ಕೂಟಗಳ ಅಧ್ಯಕ್ಷರಾದ ಕಿರಣ್, ಸುಶೀಲ, ರಾಧ ಇದ್ದರು.