ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸ್ವಾವಲಂಬಿ ಬದುಕಿಗೆ ಧ.ಗ್ರಾ. ಯೋಜನೆ

Lingaraj Badiger
Updated On : 2 Apr 2013, 10:49 am

ಕ.ಪ್ರ ವಾರ್ತೆ, ಮೂಡಿಗೆರೆ, ಮಾ.1
ಪಾವಿತ್ರ್ಯತೆ ಪಡೆದಿರುವ ನಮ್ಮ ಸಂಸ್ಕೃತಿ ಇಂದು ನಾಶವಾಗುತ್ತಿದೆ. ಹೆಣ್ಣು ಮಕ್ಕಳು ಮೈತುಂಬ ಬಟ್ಟೆ ತೊಟ್ಟು ಹೊರಬರುತ್ತಿದ್ದ ಸಂದರ್ಭ ದೂರವಾಗಿ ತುಂಡು ಬಟ್ಟೆ ತೊಟ್ಟು ತಿರುಗಾಡುವ ತಮ್ಮ ಮಕ್ಕಳನ್ನು ತಂದೆ ತಾಯಂದಿರು ನೋಡಿ ಖುಷಿ ಪಡುವ ಸಂಸ್ಕೃತಿ ಇಂದು ಕಣ್ಣೆದುರು ಬಂದಿದೆ ಎಂದು ಕಾರ್ಕಳದ ಶಿಕ್ಷಕರು ಹಾಗೂ ರಾಷ್ಟ್ರೀಯ ತರಬೇತುದಾರರಾದ ರಾಜೇಂದ್ರ ಭಟ್ ಹೇಳಿದರು.
ಕಳಸ ಪಟ್ಟಣದ ದುರ್ಗಾ ಪೆಂಡಾಲಿನಲ್ಲಿ ಪ್ರಗತಿಬಂಧು, ಜ್ಞಾನ ವಿಕಾಸ ಹಾಗೂ ಸ್ವ- ಸಹಾಯ ಸಂಘಗಳ  ಒಕ್ಕೂಟ, ಕಳಸ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ಕಳಸ ವಲಯದ ಒಕ್ಕೂಟಗಳ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವಿಷೇಶ ಆಹ್ವಾನಿತರು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಧಾರ್ಮಿಕ ಶ್ರದ್ಧೆ, ಜನರ ನೈತಿಕ ಮೌಲ್ಯ, ಸಂಘಟಣಾ ಕಾರ್ಯಕ್ರಮ, ಧಾರ್ಮಿಕ ನಂಬಿಕೆಗಳು, ದೇವರ ಮೇಲಿನ ಭಕ್ತಿ ಸಾಯುತ್ತಿದೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಧರ್ಮಸ್ಥಳದ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಇಲ್ಲಿಗೆ ಕಳುಹಿಸಿದ್ದಾನೆ ಎಂದರು.
ಸಂಸ್ಕೃತಿ ಬೀದಿಪಾಲು: ರಂಗೋಲಿ ಹಾಕಿ ದೀಪ ಹಚ್ಚಿ ಭಜನೆ ಮಾಡುವ ದಿನಗಳಲ್ಲಿ ಮನೆ ಒಡೆದು ಹಾಕುವ ಟಿವಿ ದಾರವಾಹಿಗಳಿಗೆ  ಮಾರು ಹೋಗಿದ್ದೇವೆ. ಯಾವಾಗ ಸಂಸ್ಕೃತಿ ನಾಶಪಡಿಸುತ್ತೇವೆಯೋ ಆಗ ಸಮಾಜ ನಾಶವಾಗುತ್ತದೆ. ಯಾವಾಗ ಸಮಾಜ ನಾಶವಾಗುತ್ತದೆಯೋ ಆಗ ರಾಷ್ಟ್ರವೇ ಹಾಳಾಗುತ್ತದೆ. ಹಿರಿಯರು ನಡೆಸಿಕೊಂಡು ಬರುತ್ತಿದ್ದ ಸಂಸ್ಕೃತಿಗಳು ಬೀದಿಪಾಲಾಗುತ್ತಿದೆ ಎಂದರು.
ಧರ್ಮಸ್ಥಳದ ಗೊಮ್ಮಟೇಶ್ವರನ ಮಹಾಮಸ್ತಾಕಭಿಷೇಕ ಸಂದರ್ಭ ಪೂಜ್ಯ ಹೆಗ್ಗಡೆಯವರು ಸಂಕಲ್ಪ ಮಾಡಿದ ಈ ಗ್ರಾಮೀಣಭಿವೃದ್ಧಿ ಯೋಜನೆ ಇಂದು ಹದಿಮೂರು ಜಿಲ್ಲೆಗಳಲ್ಲಿ, ಪ್ರತೀ ಗ್ರಾಮಗಳಲ್ಲಿ ವ್ಯಾಪಿಸಿ ದೆ. ಮುಂದೊಂದು ದಿನ ಬಾರತವನ್ನು ಆಳುವ ಶಕ್ತಿಯಾಗಿ ರೂಪುಗೊಳ್ಳುವ ಭವಿಷ್ಯ ನಿರ್ಮಾಣವಾಗುತ್ತಿದೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಲ್ಲಿ ಮಹಿಳೆ ಸ್ವಾವಲಂಬಿಯಾಗುತ್ತಿದ್ದಾಳೆ. ಚಂದದ ಸಂಸಾರ ಕಟ್ಟುತ್ತಿದ್ದಾಳೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುತ್ತಿದ್ದಾಳೆ. ಎಂಥ ಕಷ್ಟದ ಸಂದರ್ಭದಲ್ಲೂ ಕೂಡ ಗಂಡನ ಮುಂದೆ ಕೈ ಚಾಚುತ್ತಿಲ್ಲ ಎಂದರು.
ಮಹಿಳೆ ಪ್ರದಾನ: ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಹೊರನಾಡು ಕ್ಷೇತ್ರದ ಧರ್ಮಕರ್ತರಾದ ಡಾ.ಜಿ. ಭೀಮೇಶ್ವರ ಜೋಷಿ ಮಾತನಾಡಿ, ಸ್ವಸ್ಥ ಸಮಾಜವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿರುವ ಯೋಜನೆಯೇ ಗ್ರಾಮೀಣಭಿವೃದ್ಧಿ ಯೋಜನೆ. ಸುಸಂಸ್ಕೃತ ನಾಗರಿಕ ಸಮಾಜ ನಿರ್ಮಾಣದಲ್ಲಿ ಮಹಿಳೆಯರೇ ಪ್ರದಾನವಾಗಿರುತ್ತಾಳೆ ಎಂದರು.
ಶ್ರೀಮತಿ ನಾಗರತ್ನ ಹೆಗಡೆ, ಶ್ರೀಮತಿ ಚಂಪಾ ರಾವ್, ಡಾ. ವಿಕ್ರಮ್ ಪ್ರಭು, ಶ್ರೀಧರ ಶೆಟ್ಟಿ ಮಾತನಾಡಿದರು.
ಮಾಜಿ ಒಕ್ಕೂಟದ ಪದಾಧಿಕಾರಿಗಳಿಂದ ನೂತನ ಒಕ್ಕೂಟದ ಪದಾಧಿಕಾರಿಗಳಿಗೆ ಜವಾಬ್ದಾರಿಯನ್ನು ಹಸ್ತಾಂತಾರ ಮಾಡಲಾಯಿತು. ನಂತರಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಕಳಸ ವಲಯದ ಒಕ್ಕೂಟಗಳ ಸದಸ್ಯರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ನಡೆದವು. ಕಳಸ ವಲಯದ ಮೇಲ್ವಿಚಾರಕಾರ ರಾಘವೇಂದ್ರ, ವಲಯ ಒಕ್ಕೂಟದ ಎಲ್ಲಾ ಅಧ್ಯಕ್ಷರು, ಪ್ರತಿನಿಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement