ಬೆಳಗೆರೆ ಕೃಷ್ಣಶಾಸ್ತ್ರಿಗೆ ಶ್ರದ್ಧಾಂಜಲಿ
ಕ.ಪ್ರ.ವಾರ್ತೆ, ಕಡೂರು, ಏ.2
ನಾಡಿನ ಪ್ರತಿಭಾನ್ವಿತ ಸಾಹಿತಿ ಬೆಳಗೆರೆ ಕೃಷ್ಣಶಾಸ್ತ್ರಿಗಳು ಕಡೂರು ತಾಲೂಕಿನ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಳ್ಳುವ ಮೂಲಕ ಕಡೂರು ತಾಲೂಕಿಗೆ ಮಾದರಿಯಾಗಿದ್ದರು ಎಂದು ತಾಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಕಡೂರು ಪಟ್ಟಣದ ಕಸಾಪ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದ್ದ ಬೆಳಗೆರೆ ಕೃಷ್ಣಶಾಸ್ತ್ರಿಗಳ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವ ಸಾಹಿತಿ ಬಾಲು ಮಚ್ಚೇರಿ ಮಾತನಾಡಿ, ಕೃಷ್ಣಶಾಸ್ತ್ರಿಗಳು ಕಡೂರಿನ ಪರಿಸರದಲ್ಲಿ ಜೀವಿಸಿದ್ದ ಮಕುಂದೂರು ಸ್ವಾಮಿಗಳ ಜೊತೆ ಕಳೆದಿದ್ದ ಘಳಿಗೆಗಳ ಉಲ್ಲೇಖ ಯೇಗ್ದಾಗೆಲ್ಲಾ ಐತೆ ಪುಸ್ತಕದಲ್ಲಿ ಸ್ವಾರಸ್ಯಕರವಾಗಿ ದಾಖಲಾಗಿದೆ ಎಂದರು.
ಇದೇ ಸಂರ್ಭದಲ್ಲಿ ಶಾಸ್ತ್ರಿಗಳ ಗೌರವಾರ್ಥ ಮೌನ ಶ್ರದ್ಧಾಂಜಲಿ ಆಚರಿಸಿ ಕೃಷ್ಣಶಾಸ್ತ್ರಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ವಕೀಲ ಎ.ಆರ್. ಶ್ರೀನಿವಾಸಯ್ಯ, ಎಚ್.ಎಂ. ಲೋಕೇಶ್, ವೈ.ಎಸ್. ರವಿಪ್ರಕಾಶ್, ಬಿ.ಪ್ರಕಾಶ್, ಆನಂದಮೂರ್ತಿ, ಮುಗಳಿಕಟ್ಟಿ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.